ಕಲರ್ಸ್ ಕನ್ನಡ (Colors Kannda) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ (Marriage) ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಕೀರ್ತಿ (Keerthi) ಬೇಕು ಎನ್ನುತ್ತಿದ್ದಾನೆ.
ಅರಿಶಿಣ ಶಾಸ್ತ್ರವೂ ಮುಗಿದಿದೆ
ವೈಷ್ಣವ್ ಮತ್ತು ಲಕ್ಷ್ಮಿ ಮದುವೆ ನಿಶ್ಚಯ ಆಗಿದೆ. ಹೂ ಮೂಡಿಸುವ ಶಾಸ್ತ್ರ, ಅರಿಶಿಣ ಶಾಸ್ತ್ರ ಎಲ್ಲವೂ ಮುಗಿದಿದೆ. ಆದ್ರೆ ವೈಷ್ಣವ್‍ಗೆ ಈ ಮದುವೆ ಸ್ವಲ್ಪವೂ ಇಷ್ಟ ಇಲ್ಲ. ನನಗೆ ಈ ಮದುವೆ ಬೇಡ. ನಾನು ಕೀರ್ತಿಯನ್ನು ಮದುವೆ ಆಗುತ್ತೇನೆ. ಲಕ್ಷ್ಮಿ ನನಗೆ ಸರಿಯಾದ ಜೋಡಿ ಅಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ತನ್ನ ಅಮ್ಮನ ಬಳಿ ಇದನ್ನೇ ಹೇಳಿದ್ದಾನೆ.
ಕೀರ್ತಿ ಮದುವೆ ಆಗಲು ಕಾವೇರಿ ಒಪ್ಪಿಗೆ
ವೈಷ್ಣವ್ ಕಷ್ಟ ನೋಡಲಾಗದೇ, ಕಾವೇರಿ ನೀನು ನಿನ್ನ ಪ್ರೀತಿ ಹುಡುಗಿ ಕೀರ್ತಿಯನ್ನು ಮದುವೆ ಆಗು. ನಾನು ನಿನ್ನ ಜೊತೆ ನಿಲ್ಲುತ್ತೇನೆ ಪುಟ್ಟ ಎನ್ನುತ್ತಾಳೆ. ನೀನು ನಿಜ ಹೇಳ್ತಾ ಇದೀಯಾ, ನಾನು ಕೀರ್ತಿ ಮದುವೆ ಆಗಲು ನಿನಗೆ ಒಪ್ಪಿಗೆ ಇದೇಯಾ ಎಂದು ವೈಷ್ಣವ್ ಕೇಳ್ತಾನೆ. ಅದಕ್ಕೆ ಕಾವೇರಿ ನನ್ನ ಒಪ್ಪಿಗೆ ಇದೆ. ನೀನು ಅವಳನ್ನು, ಅವಳನ್ನು ನೀನು ಅಷ್ಟು ಪ್ರೀತಿ ಮಾಡ್ತಾ ಇದೀರಿ ಅಂದ್ರೆ ನೀವು ಮದುವೆ ಆಗಲೇಬೇಕು ನಾನು ದೂರ ಮಾಡಲ್ಲ ಎನ್ನುತ್ತಾಳೆ.
ನಾನು ಅವಳನ್ನು ಒಪ್ಪಿಸುತ್ತೇನೆ
ಕಾವೇರಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಕ್ಕೆ ವೈಷ್ಣವ್‍ಗೆ ತುಂಬಾ ಖುಷಿಯಾಗಿದೆ. ಕಾವೇರಿ ಕಾಲಿಗೆ ಬಿದ್ದು. ನೀನು ದೇವರಮ್ಮ. ನಾನು ಕೀರ್ತಿಯನ್ನು ಮದುವೆಗೆ ಒಪ್ಪಿಸುತ್ತೇನೆ ಬಿಡಲ್ಲ. ಕಾವೇರಿ ನಿನ್ನ ಖುಷಿಯೇ ನನಗೆ ಮುಖ್ಯ. ಬೇರೆ ಯಾವುದು ಅಲ್ಲ ಎಂದು ಹೇಳುತ್ತಾಳೆ. ಇದರಿಂದ ವೈಷ್ಣವ್ ತುಂಬಾ ಖುಷಿ ಆಗ್ತಾನೆ.
ಗಡುವು ಕೊಟ್ಟ ಕಾವೇರಿ
ಕೀರ್ತಿಯನ್ನು ಮದುವೆ ಒಪ್ಪಿಸಲು ನಿನ್ನ ಬಳಿ ಟೈಮ್ ಇಲ್ಲ ಪುಟ್ಟ. ನೀನು ಅವಳನ್ನು ಒಪ್ಪಿಸುವುದಾದ್ರೆ, ಇಟ್ಟ ಮುಹೂರ್ತದಲ್ಲಿ ನಿನ್ನ ಮದುವೆ ಆಗಬೇಕು. ಈ ಮುಹೂರ್ತ ಬಿಟ್ರೆ, ಈಡೀ ಜೀವಮಾನದಲ್ಲಿ ನಿನಗೆ ಮದುವೆಯಾಗೋ ಯೋಗವಿಲ್ಲ. ನಿನ್ನ ಮದುವೆ ಕೀತಿ ಜೊತೆ ಆಗುತ್ತೋ, ಲಕ್ಷ್ಮಿ ಜೊತೆ ಆಗುತ್ತೋ ನನಗೆ ಗೊತ್ತಿಲ್ಲ. ಆದ್ರೆ ನಾಡಿದ್ದು ಇಟ್ಟ ಮುಹೂರ್ತದಲ್ಲಿ ನಿನ್ನ ಮದುವೆ ಆಗಬೇಕು. ಅದನ್ನು ತಡೆಯಲು ಆಗಲ್ಲ ಎಂದು ಕಾವೇರಿ ಹೇಳ್ತಾಳೆ.
ನಾನು ನಿನಗೆ ಒಂದು ಅವಕಾಶ ಕೊಡ್ತೇನೆ. ನಿನ್ನ ಕೀರ್ತಿ ಪ್ರೀತಿ ನಿಜ ಆದ್ರೆ ನೀನು ಖಂಡಿತ ಗೆಲ್ಲುತ್ತಿ. ಕೀರ್ತಿ ನಿನ್ನ ಪಕ್ಕ ನಿಂತಿರುತ್ತಾಳೆ. ಒಂದು ವೇಳೆ ಕೀರ್ತಿ ಒಪ್ಪಲಿಲ್ಲ ಅಂದ್ರೆ, ನೀನು ಏನೂ ಯೋಚನೆ ಮಾಡದೇ ಲಕ್ಷ್ಮಿಯನ್ನು ಮದುವೆ ಆಗಬೇಕು ಎಂದು ಕಾವೇರಿ ಹೇಳ್ತಾಳೆ. ನೀನು ನನಗೆ ಒಂದು ಮಾತು ಕೊಡಬೇಕು. ಕೀರ್ತಿ ಮಂಟಪದ ಕಟೆ ಮುಖ ಮಾಡದೇ ಇದ್ರೆ, ನೀನು ಲಕ್ಷ್ಮಿಗೆ ತಾಳಿ ಕಟ್ಟಬೇಕು ಎಂದು ಕಾವೇರಿ ಮಾತು ತೆಗೆದುಕೊಳ್ತಾ ಇದ್ದಾಳೆ.
ಇದನ್ನೂ ಓದಿ: Ginirama serial: ಆಸ್ಪತ್ರೆ, ಪೊಲೀಸರಿಂದ ತಪ್ಪಿಸಿಕೊಂಡ್ರೂ ಅಪ್ಪನ ಅಂತಿಮ ದರ್ಶನ ಸಿಗಲಿಲ್ಲ, ಬೇಸರದಲ್ಲಿ ಶಿವರಾಮ್!
ಇಲ್ಲಿ ಯಾರ ಮದುವೆ ಆಗುತ್ತೆ? ವೈಷ್ಣವ್-ಕೀರ್ತಿನಾ? ವೈಷ್ಣವ್-ಲಕ್ಷ್ಮಿನಾ? ತೀವ್ರ ಕುತೂಹಲ ಮೂಡುತ್ತಿದ್ದು, ಮುಂದೇನಾಗುತ್ತೆ ಅಂತ ನೊಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ