Anubandha Awards: ಅನುಬಂಧ ಕಾರ್ಯಕ್ರಮದಲ್ಲಿ ಮೋಹಕ ತಾರೆ ರಮ್ಯಾ! ಫ್ಯಾನ್ಸ್ ಥ್ರಿಲ್

ಅನುಬಂಧ ಅವಾರ್ಡ್ಸ್​​ನಲ್ಲಿ ಪ್ರತಿಬಾರಿ ಕಿರುತೆರೆ ತಾರೆಗಳಿಗೆ ಬೆಳ್ಳಿತೆರೆಯ ತಾರೆಗಳ ಜೊತೆ ಸಂಭ್ರಮಿಸೋ ಅವಕಾಶ ಸಿಗುತ್ತದೆ. ಈ ಬಾರಿ ಕಾರ್ಯಕ್ರಮಕ್ಕೆ ಮೋಹಕ ತಾರೆ ರಮ್ಯಾ ಕೂಡಾ ಆಗಮಿಸುತ್ತಿದ್ದಾರೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ (Anubandha Awards)​ ಒಂದು ದೊಡ್ಡ ಫ್ಯಾಮಿಲಿ ಫಂಕ್ಷನ್ ಇದ್ದಂತೆ. ಕಿರುತೆರೆಯ (Small Screen) ತಾರೆಗಳೆಲ್ಲ ಸೇರಿಕೊಂಡು ಸಂಭ್ರಮದಿಂದ ಅನುಬಂಧ ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಾರೆ. ಇದರೊಂದಿಗೆ ಹಿರಿತೆರೆಯ ತಾರೆಗಳು ಬಂದು ಸಾಥ್ ಕೊಡುತ್ತಾರೆ. ಎಲ್ಲ ಕಾರ್ಯಕ್ರಮಗಳ ಸ್ಪರ್ಧಿಗಳು, ಸೀರಿಯಲ್ ನಟ, ನಟಿಯರು ಒಂದಾಗಿ ಡ್ಯಾನ್ಸ್, ಮಾತು, ತರಲೆ, ತಮಾಷೆ ಎಂದು ಇಡೀ ಕರ್ನಾಟಕದ ಜನರನ್ನು ರಂಜಿಸುತ್ತಾರೆ. ಈಗ ಈ ವರ್ಷದ ಅನುಬಂಧ ಅವಾರ್ಡ್ಸ್​ ಸಮಯ ಬಂದಿದೆ. ಕಲರ್ಸ್  (Colors) ಕಾರ್ಯಕ್ರಮದ ಪ್ರೋಮೋ (Promo) ಕೂಡಾ ಶೇರ್ ಮಾಡಿದೆ. ಒಂದು ಕಡೆ ಬಿಗ್​ಬಾಸ್ ಶುರುವಾಗುತ್ತಿದ್ದು ಇನ್ನೊಂದು ಕಡೆ ಅನುಬಂಧದ ಸಂಭ್ರಮ ತುಂಬಿದೆ. ಒಟ್ಟಾರೆಯಾಗಿ ಕಲರ್ಸ್ ವೀಕ್ಷಕರಿಗೆ ಮನರಂಜನೆಯ ಹಬ್ಬವೋ ಹಬ್ಬ.

ಕಾರ್ಯಕ್ರಮಕ್ಕೆ ಬರ್ತಿದ್ದಾರೆ ಮೋಹಕ ತಾರೆ

ಸ್ಯಾಂಡಲ್​ವುಡ್​ನ ಮೋಹಕ ತಾರೆ, ಯುವಕರ ನೆಚ್ಚಿನ ನಟಿ ರಮ್ಯಾ ಅವರು ಈ ಬಾರಿ ಅನುಬಂಧ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಿನಿಮಾದಿಂದ ದೂರ ಉಳಿದು ರಾಜಕೀಯಕ್ಕೆ ಎಂಟ್ರಿ ಕೊಟ್ಟು ನಂತರ ಅದರಿಂದಲೂ ದೂರ ಸರಿದು ಈಗ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಟ್ಟ ರಮ್ಯಾ ಅನುಬಂಧ ಅವಾರ್ಡ್ಸ್​​ನಲ್ಲಿ ಭಾಗವಹಿಸುತ್ತಿದ್ದಾರೆ.

ವೈಟ್ ಕಲರ್ ನೆಟ್ಟೆಡ್ ಸೀರೆ ಉಟ್ಟ ರಮ್ಯಾ ಅವರು ತುಂಬಾ ಸಿಂಪಲ್ ಆಗಿ ಕಂಡುಬಂದರೂ ತಮ್ಮ ಕ್ಯೂಟ್ ಸ್ಮೈಲ್​ನಿಂದ ಪ್ರೋಮೋದಲ್ಲಿ ಹೈಲೈಟ್ ಆಗಿದ್ದಾರೆ. ಕಾರ್ಯಕ್ರಮದ ಪ್ರೋಮೋದಲ್ಲಿ ರಮ್ಯಾ ಅವರನ್ನು ಕಂಡು ಅಭಿಮಾನಿಗಳು ಡಬಲ್ ಥ್ರಿಲ್ ಆಗಿದ್ದಾರೆ.

ಡಾಲಿ, ಮಾಲಾಶ್ರೀ, ಪ್ರಿಯಾಂಕ ಉಪೇಂದ್ರ ಸೇರಿ ಇನ್ನೂ ಹಲವರು

ಅನುಬಂಧ ಕಾರ್ಯಕ್ರಮದಲ್ಲಿ ಸೀರಿಯಲ್ ತಾರೆಗಳನ್ನು ನೋಡಲು ಜನರೆಷ್ಟು ಕುತೂಹಲದಲ್ಲಿರುತ್ತಾರೋ ಅದೇ ರೀತಿ ಕಿರುತೆರೆ ಕಲಾವಿದರು ಬೆಳ್ಳಿತೆರೆಯ ತಾರೆಗಳನ್ನು ನೋಡಲು, ಅವರೊಂದಿಗೆ ಮಾತನಾಡಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾಯುತ್ತಾರೆ. ಈ ಬಾರಿಯೂ ಅನುಬಂಧಕ್ಕೆ ಬೆಳ್ಳಿತೆರೆಯ ಕಲಾವಿದರ ದಂಡೇ ಬರುತ್ತಿದೆ.


ಇದನ್ನೂ ಓದಿ: Anubandha Awards 2022: ಅನುಬಂಧ ಅವಾರ್ಡ್​​ನಲ್ಲಿ ನಮ್ಮ ಅಪ್ಪು ಹೊಸ ಪ್ರೋಮೋ ಇಲ್ಲಿದೆ ನೋಡಿ

ಅಕ್ಟೊಬರ್ 7,8,9 ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು ಈಗಾಗಲೇ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ಜೊತೆ ಕಲರ್ಸ್ ಕಾರ್ಯಕ್ರಮದ ಕೆಲವು ಪ್ರೋಮೋಗಳನ್ನು ಕೂಡಾ ಕೈಬಿಡುತ್ತಿದ್ದು ಇದು ಜನರ ಕುತೂಹಲ ಕೆರಳಿಸಲು ಕಾರಣವಾಗಿದೆ.

ಮನೆ ಮೆಚ್ಚಿದ ಪ್ರಶಸ್ತಿ

ಅನುಬಂಧ ಪ್ರಶಸ್ತಿ ಕಾರ್ಯಕ್ರಮದಲ್ಲಿ ಎರಡು ರೀತಿ ಅವಾರ್ಡ್‍ಗಳನ್ನು ನೀಡಲಾಗುತ್ತೆ. ಒಂದು ಮನೆ ಮೆಚ್ಚಿದ ಅವಾರ್ಡ್. ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಮನೆ ಮೆಚ್ಚಿದ ಅವಾರ್ಡ್‍ನ್ನು ಮನೆಯವರೇ ಅಂದ್ರೆ, ಬೇರೆ ಬೇರೆ ಧಾರಾವಾಹಿಯ ಕಲಾವಿದರು ಸೇರಿ ಒಬ್ಬರನ್ನು ಬೆಸ್ಟ್ ಎಂದು ಸೆಲೆಕ್ಟ್ ಮಾಡುವುದು. ಯಾರಿಗೆ ಹೆಚ್ಚು ಮತ ಬಂದಿರುತ್ತೋ, ಅವರು ಮನೆ ಮೆಚ್ಚಿದ ಅವಾರ್ಡ್ ಪಡೆಯುತ್ತಾರೆ.

ಜನ ಮೆಚ್ಚಿದ ಅವಾರ್ಡ್

ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಇದರಲ್ಲಿ ಅವಾರ್ಡ್‍ನ ಆಯ್ಕೆಯನ್ನು ಜನಗಳಿಗೆ ಬಿಡಲಾಗುತ್ತೆ. ತಮ್ಮ ನೆಚ್ಚಿನ ನಟ, ನಟಿ, ಜೋಡಿಗೆ ವೋಟ್ ಅವಕಾಶವನ್ನು ಜನರಿಗೆ ನೀಡಲಾಗುತ್ತೆ. ಯಾರಿಗೆ ಹೆಚ್ಚು ವೋಟ್ ಬರುತ್ತೋ, ಅವರಿಗೆ ಪ್ರಶಸ್ತಿ ಲಭಿಸುತ್ತೆ. ಅಂತೆಯೇ ಅವರು ಜನ ಮೆಚ್ಚಿದ ಪಾತ್ರಕ್ಕೆ ಭಾಜನರಾಗುತ್ತಾರೆ.

ಇದನ್ನೂ ಓದಿ: Bigg Boss Season 9: ಯಕ್ಷಗಾನ, ಚೆಂಡೆಮೇಳ! ಅದ್ಧೂರಿಯಾಗಿರಲಿದೆ ಬಿಗ್​ ಬಾಸ್ ಆರಂಭ

ಹೊಸ ಪ್ರೋಮೋ

ಕಲರ್ಸ್ ಕನ್ನಡ ವಾಹಿನಿಯೂ ಅನುಬಂಧ ಅವಾರ್ಡ್‍ನ ಹೊಸ ಪ್ರೋಮೋ ಬಿಟ್ಟಿದೆ. ಅದರಲ್ಲಿ ಎಲ್ಲಾ ಧಾರಾವಾಹಿ ತಂಡದವರು ಸಂಭ್ರಮಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಅವಾರ್ಡ್ ಸಿಕ್ಕಿದ್ದಕ್ಕೆ ಸಂತೋಷದ ಕಣ್ಣೀರು ಹಾಕಿದ್ದಾರೆ. ನಕ್ಕಿದ್ದಾರೆ. ತಮ್ಮ ಜರ್ನಿ ಬಗ್ಗೆ ನೋಡಿದ್ದಾರೆ. ಎಲ್ಲವೂ ಪ್ರೋಮೋದಲ್ಲಿ ಕಾಣ್ತಿದೆ.
Published by:Divya D
First published: