Anubandha Awards 2022: ಅನುಬಂಧ ಅವಾರ್ಡ್​​ನಲ್ಲಿ ನಮ್ಮ ಅಪ್ಪು ಹೊಸ ಪ್ರೋಮೋ ಇಲ್ಲಿದೆ ನೋಡಿ

ಕಲರ್ಸ್ ಕನ್ನಡ ವಾಹಿನಿಯೂ ಅನುಬಂಧ ಅವಾರ್ಡ್‍ನ ಹೊಸ ಪ್ರೋಮೋ ಬಿಟ್ಟಿದೆ. ಅದರಲ್ಲಿ ಎಲ್ಲಾ ಧಾರಾವಾಹಿ ತಂಡದವರು ಸಂಭ್ರಮಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಅವಾರ್ಡ್ ಸಿಕ್ಕಿದ್ದಕ್ಕೆ ಸಂತೋಷದ ಕಣ್ಣೀರು ಹಾಕಿದ್ದಾರೆ.

ಅನುಬಂಧ ಅವಾರ್ಡ್

ಅನುಬಂಧ ಅವಾರ್ಡ್

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ದಿನ ಸೂಪರ್ ಹಿಟ್ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ವಿಭಿನ್ನ ರಿಯಾಲಿಟಿ ಶೋಗಳ (Reality show) ಮೂಲಕ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವರ್ಷ ಪೂರ್ತಿ ಧಾರಾವಾಹಿಗಳು ಜನರಿಗೆ ಮನರಂಜನೆ ನೀಡುತ್ತವೆ. ಆದ್ರೆ ಯಾವ ಧಾರಾವಾಹಿ ಜನರಿಗೆ ಇಷ್ಟ ಆಯ್ತು. ಯಾವ ನಟ-ನಟಿ ಇಷ್ಟ ಆದ್ರು. ಯಾವ ವಿಲನ್ ಲುಕ್ ಜನರಿಗೆ ಕೋಪ ತರಿಸಿತು?, ಯಾರು ತುಂಬಾ ಸ್ಟೈಲಿಶ್ ಆಗಿ ಕಾಣಿಸಿದ್ರು. ಯಾರ ಕಥೆ ಚೆನ್ನಾಗಿದೆ?, ಯಾವ ಧಾರಾವಾಹಿ ಹಾಡು ಇಷ್ಟ ಆಯ್ತು. ಯಾರ ಕ್ಯಾಮೆರಾ ವರ್ಕ್ ಸೂಪರ್ ಇತ್ತು. ಎಲ್ಲವೂ ತಿಳಿಯಲು ಬರ್ತಿದೆ ಅನುಬಂಧ ಅವಾರ್ಡ್ 2022 (Anubandha Award-2022). ಇನ್ನೂ ದಿನಾಂಕ ಘೋಷಣೆ ಆಗಿಲ್ಲ.

    ಮನೆ ಮೆಚ್ಚಿದ ಪ್ರಶಸ್ತಿ
    ಅನುಬಂಧ ಪ್ರಶಸ್ತಿ ಕಾರ್ಯಕ್ರಮದಲ್ಲಿ ಎರಡು ರೀತಿ ಅವಾರ್ಡ್‍ಗಳನ್ನು ನೀಡಲಾಗುತ್ತೆ. ಒಂದು ಮನೆ ಮೆಚ್ಚಿದ ಅವಾರ್ಡ್. ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಮನೆ ಮೆಚ್ಚಿದ ಅವಾರ್ಡ್‍ನ್ನು ಮನೆಯವರೇ ಅಂದ್ರೆ, ಬೇರೆ ಬೇರೆ ಧಾರಾವಾಹಿಯ ಕಲಾವಿದರು ಸೇರಿ ಒಬ್ಬರನ್ನು ಬೆಸ್ಟ್ ಎಂದು ಸೆಲೆಕ್ಟ್ ಮಾಡುವುದು. ಯಾರಿಗೆ ಹೆಚ್ಚು ಮತ ಬಂದಿರುತ್ತೋ, ಅವರು ಮನೆ ಮೆಚ್ಚಿದ ಅವಾರ್ಡ್ ಪಡೆಯುತ್ತಾರೆ.

    ಜನ ಮೆಚ್ಚಿದ ಅವಾರ್ಡ್
    ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಇದರಲ್ಲಿ ಅವಾರ್ಡ್‍ನ ಆಯ್ಕೆಯನ್ನು ಜನಗಳಿಗೆ ಬಿಡಲಾಗುತ್ತೆ. ತಮ್ಮ ನೆಚ್ಚಿನ ನಟ, ನಟಿ, ಜೋಡಿಗೆ ವೋಟ್ ಅವಕಾಶವನ್ನು ಜನರಿಗೆ ನೀಡಲಾಗುತ್ತೆ. ಯಾರಿಗೆ ಹೆಚ್ಚು ವೋಟ್ ಬರುತ್ತೋ, ಅವರಿಗೆ ಪ್ರಶಸ್ತಿ ಲಭಿಸುತ್ತೆ. ಅಂತೆಯೇ ಅವರು ಜನ ಮೆಚ್ಚಿದ ಪಾತ್ರಕ್ಕೆ ಭಾಜನರಾಗುತ್ತಾರೆ.

    ಇದನ್ನೂ ಓದಿ: Bigg Boss Season 9: ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ಘೋಷಿಸಿದ ಕಿಚ್ಚ ಸುದೀಪ್‍, ಮತ್ತೆ ಬರ್ತಿದ್ದಾರಾ ಅರವಿಂದ್-ದಿವ್ಯಾ ಉರುಡುಗ?

    ಹೊಸ ಪ್ರೋಮೋ
    ಕಲರ್ಸ್ ಕನ್ನಡ ವಾಹಿನಿಯೂ ಅನುಬಂಧ ಅವಾರ್ಡ್‍ನ ಹೊಸ ಪ್ರೋಮೋ ಬಿಟ್ಟಿದೆ. ಅದರಲ್ಲಿ ಎಲ್ಲಾ ಧಾರಾವಾಹಿ ತಂಡದವರು ಸಂಭ್ರಮಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಅವಾರ್ಡ್ ಸಿಕ್ಕಿದ್ದಕ್ಕೆ ಸಂತೋಷದ ಕಣ್ಣೀರು ಹಾಕಿದ್ದಾರೆ. ನಕ್ಕಿದ್ದಾರೆ. ತಮ್ಮ ಜರ್ನಿ ಬಗ್ಗೆ ನೋಡಿದ್ದಾರೆ. ಎಲ್ಲವೂ ಪ್ರೋಮೋದಲ್ಲಿ ಕಾಣ್ತಿದೆ.


    ಪುನೀತ್ ರಾಜ್‍ಕುಮಾರ್ ಸ್ಮರಣೆ
    ಅನುಬಂಧ ಅವಾರ್ಡ್ 2022ರಲ್ಲಿ ಅಪ್ಪು ನೆನೆದು ಸ್ಮರಣೆ ಮಾಡಿದ್ದಾರೆ. ಕ್ಯಾಂಡಲ್ ಹಿಡಿದು ಬೆಳಕು ಬೆಳಗಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಎಲ್ಲರೂ ಪ್ರೀತಿ ರಾಜಕುಮಾರನನ್ನು ನೆನೆದಿದ್ದಾರೆ. ಕಂಬನಿ ಸುರಿಸಿದ್ದಾರೆ.

    Colors Kannada Program, Colors Kannada Anubandha Award 2022, ಅನುಬಂಧ ಅವಾರ್ಡ್ 2022, ಅವಾರ್ಡ್ ಸಿಕ್ಕಿದ್ದಕ್ಕೆ ಸಂತೋಷದ ಕಣ್ಣೀರು, ಅಪ್ಪುಗೆ ಗೌರವ, Kannada news, Karnataka news,
    ಕನ್ನಡತಿ ತಂಡ


    ಕಳೆದ ವರ್ಷದ ಬೆಸ್ಟ್ ರೇಟೆಡ್ ಫಿಕ್ಷನ್
    ಅನುಬಂಧ ಅವಾರ್ಡ್ 2021, ಅಂದ್ರೆ ಕಳೆದ ಬಾರಿಯ ಕಳೆದ ವರ್ಷದ ಬೆಸ್ಟ್ ರೇಟೆಡ್ ಫಿಕ್ಷನ್ ಧಾರಾವಾಹಿ ಮಂಗಳಗೌರಿ ಮದುವೆ. ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ, ಬೆಸ್ಟ್ ರೇಟೆಡ್ ಅವಾರ್ಡ್ ಪಡೆದಿತ್ತು. ಉತ್ತಮ ಸಂಕಲನ ಅವಾರ್ಡ್, ನನ್ನರಸಿ ರಾಧೆ ಧಾರಾವಾಹಿಯ ರಾಜು ಆರ್ಯನ್ ಅವರಿಗೆ ಸಿಕ್ಕಿತ್ತು. ಜನ ಮೆಚ್ಚಿದ ಹೊಸ ಪರಿಚಯ ಅವಾರ್ಡ್ ಕನ್ಯಾಕುಮಾರಿ ಧಾರಾವಾಹಿಯ ಚರಣ್ ಅವರಿಗೆ ಲಭಿಸಿತ್ತು.

    Colors Kannada Program, Colors Kannada Anubandha Award 2022, ಅನುಬಂಧ ಅವಾರ್ಡ್ 2022, ಅವಾರ್ಡ್ ಸಿಕ್ಕಿದ್ದಕ್ಕೆ ಸಂತೋಷದ ಕಣ್ಣೀರು, ಅಪ್ಪುಗೆ ಗೌರವ, Kannada news, Karnataka news,
    ಮಂಗಳಗೌರಿ ತಂಡ


    ಇದನ್ನೂ ಓದಿ: Kendasampige: ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ? ಜನರ ಸೇವೆಗಾಗಿ ಕಾರ್ಪೊರೇಟರ್ ಮಾತಿಗೆ ಎಸ್ ಅಂತಾಳಾ?

    ಯಾವುದು ಬೆಸ್ಟ್ ಈ ಬಾರಿ?
    ಹಾಗಾದ್ರೆ ಈ ಬಾರಿ ಯಾರು ಪ್ರಶಸ್ತಿಯನ್ನು ಪಡೆಯುತ್ತಾರೆ ಎನ್ನುವ ಕುತೂಹಲಗಳು ಹೆಚ್ಚಾಗಿವೆ. ಎಲ್ಲಾ ಧಾರಾವಾಹಿಗಳು ಸೂಪರ್ ಆಗಿ ಮೂಡಿ ಬರುತ್ತಿವೆ. ಎಲ್ಲರೂ ಅಮೋಘವಾಗಿ ನಟಿಸುತ್ತಿದ್ದಾರೆ. ಹಾಗಾದ್ರೆ ಯಾರು ಈ ಬಾರಿಯ ಜನ ಮೆಚ್ಚಿದ ಜೋಡಿ ಆಗ್ತಾರೆ ಅನ್ನೋದನ್ನು ನೋಡಬೇಕು. ಅದಕ್ಕೆ ಅನುಬಂಧ ಅವಾರ್ಡ್ ಕಾರ್ಯಕ್ರಮ ನೋಡಬೇಕು.
    Published by:Savitha Savitha
    First published: