ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಅಂತರಪಟ (Antarapata) ಸೀರಿಯಲ್ ಪ್ರಸಾರವಾಗುತ್ತಿದೆ. ಇದು ಅಪ್ಪನ ಕನಸನ್ನು ನನಸು ಮಾಡಲು ಹೋರಾಡುತ್ತಿರುವ ಹುಡುಗಿಯೊಬ್ಬಳ ಕತೆ. ಆರಾಧನಾ ಮನೆ ಕಷ್ಟ ನಿಭಾಯಿಸಲು ಕೆಲಸ ಹುಡುಕುತ್ತಿರುತ್ತಾಳೆ. ಆರಾಧನಾಗೆ ದೊಡ್ಡ ಕಂಪನಿ ಕಟ್ಟಬೇಕು ಎಂಬ ಆಸೆ. ಆದ್ರೆ ಬಡತನ ಆಕೆಯನ್ನು ಬೆಳೆಯಲು ಬಿಡುತ್ತಿಲ್ಲ. ಆರಾಧನಾಗೆ ಸಹಾಯ ಮಾಡಲು ರವಿ ಎಂಬ ಗೆಳೆಯ (Friend) ಸಿಕ್ಕಿದ್ದ. ಅವನು ಬೆಂಬಲವಾಗಿ ನಿಂತಿದ್ದ. ಆದ್ರೆ ಈಗ ಅವನು ಅಪಘಾತದಲ್ಲಿ ತೀರಿ ಹೋಗಿದ್ದಾನೆ. ಅದನ್ನು ನೆನೆಸಿಕೊಂಡು ಆರಾಧನಾ ಕಣ್ಣಿರಿಡುತ್ತಿದ್ದಾಳೆ. ನನಗೆ ಯಾಕೆ ಈ ರೀತಿ ಆಗ್ತಾ ಇದೆ ಎಂದು ಅಮ್ಮನ (Mother) ಬಳಿ ಪ್ರಶ್ನೆಗಳನ್ನು ಕೇಳ್ತಾ ಇದ್ದಾಳೆ.
ಆರಾಧನಾಳನ್ನು ಪ್ರೀತಿ ಮಾಡ್ತಿದ್ದ ರವಿ
ರವಿ ಎನ್ನುವ ಹುಡುಗ ಆರಾಧನಾಳನ್ನು ಪ್ರೀತಿ ಮಾಡ್ತಾ ಇದ್ದ. ನಿನ್ನ ಜೊತೆಯೇ ಜೀವನ ಕಳೆಯಬೇಕು ಎಂದು ಆಸೆ. ಆ ಆಸೆ ಇನ್ನೂ ಜೀವಂತವಾಗಿದೆ. ಬ್ಯುಸಿನೆಸ್ ನಡೆಸೋದರ ಬಗ್ಗೆ ನಿನ್ನ ಕಂಡಿಷನ್ ನನಗೆ ಗೊತ್ತು. ಅದಕ್ಕೆ ನಿನ್ನ ಮೇಲಿರುವ ಪ್ರೀತಿಯನ್ನು ಮರೆತಿಲ್ಲ. ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪ್ರೀತಿ ಏನಿದ್ರೂ ಪ್ರೀತಿ ಅಷ್ಟೇ ಎಂದು ರವಿ ಹೇಳಿದ್ದ.
ಆರಾಧನಾ ಕೈಗೆ ಆಸ್ತಿ ಪತ್ರ
ನೀನು ನನ್ನ ಪ್ರೀತಿಸಲೇಬೇಕು ಅಂತ ಡಿಮ್ಯಾಂಡ್ ಖಂಡಿತಾ ಮಾಡಲ್ಲ. ನಿನ್ನ ಪಾಡಿಗೆ ನೀನು ಕೆಲಸ ಮಾಡು. ನನ್ನ ಪಾಡಿಗೆ ನಾನು ಪ್ರೀತಿ ಮಾಡ್ತೇನೆ. ನೀನು ಸುಮ್ಮನೇ ನನ್ನ ಜೊತೆ ಕೆಲಸ ಮಾಡು. ನನ್ನ ಪ್ರೀತಿ ಮೋಸ ಅಲ್ಲ ತಿಳಿಯಿತಾ? ಆ ವಿಷ್ಯ ಬಿಡು, ಈ ದಾಖಲೆ ನೋಡು ಎಂದು ತನ್ನ ಆಸ್ತಿ ಪತ್ರವನ್ನು ಕೊಟ್ಟಿದ್ದ ರವಿ.
ಅಪಘಾತದಲ್ಲಿ ರವಿ ಸಾವು
ಆರಾಧನಾಳನ್ನು ಭೇಟಿ ಮಾಡಲು ರವಿ ಬರುತ್ತಿದ್ದ. ಆಗ ಈ ಸೀರಿಯಲ್ ನಾಯಕನ ಅಕ್ಕನ ಗಂಡ ಅಪಘಾತ ಮಾಡಿ ಬಿಡುತ್ತಾನೆ. ರವಿಯನ್ನು ಆಸ್ಪತ್ರೆಗೆ ಸೇರಿಸಲಾಗುತ್ತೆ. ಆದ್ರೆ ರವಿ ಬದುಕುವುದಿಲ್ಲ. ರವಿ ಸಾವಿನಿಂದ ಆರಾಧನಾ ಕಂಗೆಟ್ಟಿದ್ದಾಳೆ. ಇನ್ನು ನನಗೆ ಯಾರು ಸಹಾಯ ಮಾಡ್ತಾರೆ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಬಡವರಾಗಿ ಹುಟ್ಟೋದೇ ತಪ್ಪಾ?
ಯಾಕೋ ನನ್ನ ಲೈಫ್‍ನಲ್ಲಿ ನಂಬಿಕೆ ಎಲ್ಲಾ ಸತ್ತು ಹೋಗಿದೆ ಅಮ್ಮ. ನನ್ನ ಹಣೆ ಬರಹ ಸರಿಯಿಲ್ಲ ಅಮ್ಮ. ಬಡವರ ಮನೆಯಲ್ಲಿ ಹುಟ್ಟೋದೇ ತಮ್ಮ ಅಮ್ಮ? ಬಡವರು ಕನಸು ಕಾಣೋದೇ ತಪ್ಪಾ? ಚಿಕ್ಕ ವಯಸ್ಸಿನಲ್ಲಿ ಅಪ್ಪನ ಜೊತೆ ಕಾಲ ಕಳೆಯಬೇಕು ಎಂದುಕೊಂಡ, ಆ ದೇವರು ಅಪ್ಪನನ್ನು ಕಿತ್ತುಕೊಂಡು ಬಿಟ್ಟ ಎಂದು ಆರಾಧನಾ ಅಮ್ಮನ ಬಳಿ ತನ್ನ ನೋವು ಹೇಳಿಕೊಳ್ತಾ ಇದ್ದಾಳೆ.
ಅಮ್ಮನನ್ನು ತಬ್ಬಿ ಅತ್ತ ಆರಾಧನಾ
ಈಗ ಏನಾದ್ರೂ ಸಾಧನೆ ಮಾಡಬೇಕು ಎಂದು ಹೊರಟೆ, ನನ್ನ ಕನಸಿಗೆ ಬೆಂಬಲ ಕೊಡ್ತೀನಿ ಅಂತ ಬಂದ ರವಿ. ಈಗ ಅವನು ಹೊರಟು ಹೋದ. ಯಾಕಮ್ಮಾ ಈ ರೀತಿ ಎಲ್ಲಾ ಮಣ್ಣು ಪಾಲಾಗ್ತಿದೆ. ಎಲ್ಲಾ ಕಡೆ ನಾನು ಒಂಟಿಯಾಗಿ ಹೋದೆ ಅಮ್ಮ. ನನ್ನ ಕಂಪನಿ ಕಟ್ಟೋಕೆ ಸಹಾಯ ಮಾಡ್ತೀನಿ ಅಂತ ಬಂದ ರವಿ ಅಪಘಾತದಲ್ಲಿ ತೀರಿ ಹೋದ ಅಮ್ಮ ಎಂದು ಆರಾಧನಾ ಕಣ್ಣೀರಿಡುತ್ತಿದ್ದಾಳೆ.
ಇದನ್ನೂ ಓದಿ: Colors Kannada: ಕಲರ್ಸ್ ಕನ್ನಡದಲ್ಲಿ ಮಧ್ಯಾಹ್ನದ ಮನರಂಜನೆ, 3 ಹೊಸ ಕಾರ್ಯಕ್ರಮಗಳು!
ಆರಾಧನಾಗೆ ಯಾರು ಬೆಂಬಲವಾಗಿ ನಿಲ್ತಾರೆ? ಕಂಪನಿ ಕಟ್ಟಿ ತನ್ನ ಕನಸು ನನಸು ಮಾಡಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಅಂತರಪಟ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ