Rashmika Mandanna: ಶ್ರೀವಲ್ಲಿ ಹೋದಲ್ಲೆಲ್ಲಾ ಜನವೋ ಜನ; ಇದು ರಶ್ಮಿಕಾ ಮಂದಣ್ಣ ಕ್ರೇಜ್​!

ಬಾಲಿವುಡ್​ಗೆ ಎಂಟ್ರಿ ಕೊಟ್ಟಿರೋ ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಬಳಿಕ ರಶ್ಮಿಕಾ ಕ್ರೇಜ್ ಹೆಚ್ಚಾಗಿದೆ. ಉತ್ತರ ಭಾರತದಲ್ಲೂ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ನಟಿ ರಶ್ಮಿಕಾ ಮಂದಣ್ಣ(Rashmika Madanna)  ಅವರು ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರ ಜೊತೆ ನಟಿಸುತ್ತಿರೋ ರಶ್ಮಿಕಾ ಮಂದಣ್ಣ ಗುಡ್‌ಬೈ (GoodBye) ಚಿತ್ರದ ಪ್ರಚಾರಕ್ಕಿಳಿದಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟಿ ತನ್ನ ಹಿಂದಿನ ಪಾತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್ ಬೈ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮಕ್ಕಾಗಿ 'ಶ್ರೀವಲ್ಲಿ' ರಶ್ಮಿಕಾ ಮಂದಣ್ಣ ಮುಂಬೈನಲ್ಲಿರೋ ಕಾಲೇಜಿಗೆ ಭೇಟಿ ನೀಡಿದ್ದರು. ಟ್ರೇಲರ್ ಬಿಡುಗಡೆಯ ನಂತರ, ವೇದಿಕೆ ಮೇಲೆ ರಶ್ಮಿಕಾ ಬರ್ತಿದ್ದಂತೆ ಅಭಿಮಾನಿಗಳು ರಶ್ಮಿಕಾ, ರಶ್ಮಿಕಾ ಎಂದು ಜೋರಾಗಿ ಕೂಗಿದ್ದಾರೆ.

ಎಲ್ಲೆಲ್ಲೂ ರಶ್ಮಿಕಾ ಕ್ರೇಜ್​!

ಬಾಲಿವುಡ್​ಗೆ ಎಂಟ್ರಿ ಕೊಟ್ಟಿರೋ ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಬಳಿಕ ರಶ್ಮಿಕಾ ಕ್ರೇಜ್ ಹೆಚ್ಚಾಗಿದೆ. ಉತ್ತರ ಭಾರತದಲ್ಲೂ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ.










View this post on Instagram






A post shared by @varindertchawla






ಹೇಗಿದೆ ಗುಡ್​ ಬೈ ಚಿತ್ರದ ಟ್ರೈಲರ್​!?
 ಅಮಿತಾಭ್​ ಹಾಗೂ ರಶ್ಮಿಕಾ ಅಭಿಮಾನಿಗಳು ಗುಡ್​ ಬೈ ಚಿತ್ರವನ್ನು ತೆರೆ ಮೇಲೆ ನೋಡಲು ಕಾಯ್ತಿದ್ದಾರೆ. ಚಿತ್ರತಂಡ ಇದೀಗ ಟ್ರೈಲರ್​ ಬಿಡುಗಡೆ ಮಾಡಿದೆ. ಈ ಟ್ರೈಲರ್​ ಸಿನಿಮಾ ಕುರಿತು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.  ಗುಡ್​ ಬೈ ಒಂದು ಫ್ಯಾಮಿಲಿ ಮೂವಿಯಾಗಿದೆ. ನಟಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಅಮಿತಾಭ್ ಅವರ ಮಗಳಾಗಿ ಕಾಣಿಸಿಕೊಂಡಿದ್ದಾರೆ.  ಗುಡೈ ಚಿತ್ರ  ಪೂರ್ಣ ಪ್ರಮಾಣದ ಹಾಸ್ಯಮಯ ಚಿತ್ರದಂತೆ ಕಾಣಿಸುತ್ತಿದೆ. ಟ್ರೈಲರ್​​ನಲ್ಲಿಯೂ ಕಾಮಿಡಿ ತುಣುಕುಗಳನ್ನು ಕಾಣಬಹುದಾಗಿದೆ.


ಗುಡ್​ ಬೈ ಕಂಪ್ಲೀಟ್ ಫ್ಯಾಮಿಲಿ ಮೂವಿ




'ಗುಡ್ ಬೈ' ಚಿತ್ರ ಕಂಪ್ಲೀಟ್ ಫ್ಯಾಮಿಲಿ ಮೂವಿಯಾಗಿದೆ. ಟ್ರೈಲರ್ ವಿಡಿಯೋ ಬಗ್ಗೆ ಹೇಳೋದಾದ್ರೆ, ಕುಟುಂಬದ ಸದಸ್ಯರ ಜೊತೆ ಹೇಗೆಲ್ಲಾ ಗಲಾಟೆ, ಜಗಳಗಳು ನಡೆಯುತ್ತದೆ ಅನ್ನೋದನ್ನು ಟ್ರೈಲರ್​ನಲ್ಲಿ ಕಾಣಬಹುದು. ಪೋಷಕರು, ಮಕ್ಕಳು ಹಾಗೂ ಕುಟುಂಬ ಸದಸ್ಯರ ನಡುವಿನ ಜಗಳ ಮತ್ತು ಪರಸ್ಪರ ಬಾಂಧವ್ಯಗಳ ಕಥೆಯನ್ನು ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: Samantha: ಹಾರರ್ ಸಿನಿಮಾದಲ್ಲಿ ಸಮಂತಾ! ಅಭಿಮಾನಿಗಳನ್ನು ಭಯಪಡಿಸಲು ಎರಡೆರಡು ಪಾತ್ರ!

ಅಮಿತಾಬ್, ರಶ್ಮಿಕಾ ನಡುವೆ ಫ್ಯಾಮಿಲಿ ಫೈಟ್​!

ಚಿತ್ರದಲ್ಲಿ ಅಮಿತಾಭ್ ಮತ್ತು ರಶ್ಮಿಕಾ ನಡುವಿನ ಫ್ಯಾಮಿಲಿ ಫೈಟ್​ ಹೈಲೆಟ್​ ಆಗಲಿದೆ.  ಟ್ರೈಲರ್​ನಲ್ಲಿ ಅಪ್ಪ ಜಗಳ ನಡುವೆ ಜಗಳಗಳೇ ನಡೆಯುತ್ತಿರುತ್ತವೆ. ಜೊತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಇಲ್ಲಿ ಕಾಣಬಹುದಾಗಿದೆ. ಇದೊಂದು ಪರಿಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಹಾಸ್ಯನಟ ಸುನಿಲ್ ಗ್ರೋವರ್ ಕೂಡ ಚಿತ್ರದಲ್ಲಿ ಮಸ್ತ್​ ಎಂಟ್ರಿ ಕೊಡಲಿದ್ದಾರೆ. ಅವರ ಪಾತ್ರವು ಜನರನ್ನು ನಗೆಗಡಲಿನಲ್ಲಿ ತೇಲಿಸಲಿದೆ. ಇದರ ಸಣ್ಣ ತುಣುಕನ್ನು ನೀವು ಚಿತ್ರದ ಟ್ರೈಲರ್‌ನಲ್ಲಿ ನೋಡಬಹುದಾಗಿದೆ.





ಚಿತ್ರದ ಟ್ರೇಲರ್ ವಿಡಿಯೋ ಹಂಚಿಕೊಂಡ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರೇ 'ಗುಡ್ ಬೈ' ಚಿತ್ರದ ಟ್ರೈಲರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಇದು ತುಂಬಾ ವಿಶೇಷವಾಗಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಗುಡ್ ಬೈ ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

Published by:Pavana HS
First published: