ಮುನ್ನಿ ಬದ್ನಾಮ್ ಹುಯಿ ಸಾಂಗ್ ಕಲಿತರಷ್ಟೇ ಪಾಸ್ ಮಾಡ್ತಾರಂತೆ.. ಇದೆಂಥಾ ಕಾಲೇಜ್ ಮಾರಾಯ!?

ಸಂಗೀತ ಪದವಿಯಲ್ಲಿ ಉತ್ತಮ ಅಂಕಗಳು ಬೇಕಾದಲ್ಲಿ ಅಲ್ಲಿನ ಬ್ರಿಟನ್ನಿಗರು ಮುನ್ನಿ ಬದ್ನಾಮ್​ ಹುಯಿ ಹಾಡನ್ನು ಕಲಿಯಲೇಬೇಕು.

ನಟಿ ಮಲೈಕಾ

ನಟಿ ಮಲೈಕಾ

  • Share this:
ಮುನ್ನಿ ಬದ್ನಾಮ್​ ಹುಯಿ ಡಾರ್ಲಿಂಗ್​ ತೇರೆ ಲಿಯೇ.. ಹಿಂದಿ ಚಿತ್ರರಂಗದಲ್ಲಿ ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿದ ಐಟಂ ಸಾಂಗ್​ ಇದು. ನಟ ಸಲ್ಮಾನ್​ಖಾನ್​ ಅಭಿನಯದ ದಬ್ಬಾಂಗ್​ ಚಿತ್ರದ ಈ ಹಾಡು ಒಂದು ದಶಕದ ನಂತರವೂ ಕೇಳುಗರನ್ನು ಕುಳಿತಲ್ಲೇ ಕುಣಿಯುವಂತೆ ಮಾಡುತ್ತೆ. ಚಲ್​ ಚಯ್ಯ ಚಯ್ಯಾ ಹಾಡಿನ ಖ್ಯಾತಿಯ ಮಲೈಕಾ ಅರೋರ ಮುನ್ನಿಯಾಗಿ ಪಡ್ಡೆಗಳ ನಿದ್ದೆ ಕದ್ದಿದ್ದರು. ರಿಲೀಸ್​ ಆಗಿ 11 ವರ್ಷಗಳ ಬಳಿಕ ಈ ಸಾಂಗ್​ ಮತ್ತೆ ಸುದ್ದಿಯಲ್ಲಿದೆ.

ಮುನ್ನಿ ಸಾಂಗ್​ ರಿಲೀಸ್​ ಆದಾಗ ಸಖತ್​ ಕ್ರೇಜ್​ ಹುಟ್ಟುಹಾಕಿತ್ತು. ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದ ಮಲೈಕಾ ಆಗ ಮೈದುನನಾಗಿದ್ದ ಸಲ್ಮಾನ್​ ಖಾನ್​ ಜೊತೆ ಸೊಂಟ ಬಳುಕಿಸಿದ್ದರು. ಮುನ್ನಿ ಬದ್ನಾಮ್​ ಮಾತ್ರವಲ್ಲ ಜಂಡುಬಾಂಬ್​ ಎಂದು ಹಾಡಿನಲ್ಲಿ ನುಲಿದಿದ್ದು ಸಿನಿಪ್ರಿಯರಿಗೆ ಸಖತ್​ ಕಿಕ್​ ಕೊಟ್ಟಿತ್ತು. ಹಾಡಿನಲ್ಲಿ ಸಲ್ಮಾನ್​ ಮಾತ್ರವಲ್ಲ ನಟ ಸೋನು ಸೂದ್​ ಕೂಡ ಇದ್ದಾರೆ.

ಇಂಥ ಸೂಪರ್​ ಹಿಟ್​ ಸಿನಿಮಾದ ಸೂಪರ್​ ಹಿಟ್​ ಸಾಂಗ್ ಸದ್ಯ​ ಮತ್ತೆ ಸುದ್ದಿಯಾಗಿರೋದು ಲಂಡನ್​ನಲ್ಲಿ ಅಂದರೆ ನೀವು ನಂಬಲೇ ಬೇಕು. ಅಲ್ಲಿನ ಮ್ಯೂಸಿಕ್​ ಸ್ಕೂಲ್​ ಅಕಾಡೆಮಿಯೊಂದು ಮುನ್ನಿ ಬದ್ನಾಮ್​ ಹುಯಿ ಹಾಡನ್ನು ತಮ್ಮ ಪಠ್ಯದಲ್ಲಿ ಸೇರಿಸಿದ್ದಾರಂತೆ. ಬಾಲಿವುಡ್​ನ ಐಟಂ ಸಾಂಗೇ ಅವರಿಗೆ ಬೇಕಿತ್ತಾ ಅಂತ ಮೂಗು ಮುರಿಯಬೇಡಿ. ಇದೊಂದೇ ಹಾಡಲ್ಲ ಸ್ಲಗ್​ ಡಾಗ್​ ಮಿಲಿಯನೇರ್​ ಚಿತ್ರದ ಜೈಹೋ ಹಾಗೂ ಕಿಶೋರಿ ಅಮೋನ್ಕರ್​ ಅವರ ಸಹೇಲಿ ರೇ ಹಾಡನ್ನೂ ಪಠ್ಯದಲ್ಲಿ ಸೇರಿಸಿದ್ದಾರೆ.

ಇದನ್ನೂ ಓದಿ: Radhe Shyam: ಪ್ರಭಾಸ್​ ಸಿನಿಮಾಗೆ 400 ಕೋಟಿ ಆಫರ್​ ಕೊಟ್ಟಿದೆಯಂತೆ ಅಮೆಜಾನ್ ಪ್ರೈಮ್​..!

ನಮ್ಮಲ್ಲಿನ ಸಂಗೀತ ಶಾಲೆಗಳಲ್ಲಿ ಶಾಸ್ತ್ರೀಯ ಸಂಗೀತ, ಜಾನಪದ, ಸಿನಿಮಾ ಗೀತೆಗಳಂತೆ ಲಂಡನ್​ನ ಸಂಗೀತ ಶಾಲೆಯನ್ನು ಹಲವು ವಿಧದ ಹಾಡುಗಳನ್ನು ಕಲಿಸಲಾಗುತ್ತೆ. ಭಾರತೀಯ ಸಂಗೀತ ವಿಭಾಗದಲ್ಲಿ ಮುನ್ನಿ ಬದ್ನಾಮ್​ ಸೇರಿದಂತೆ ಹಲವು ಹಾಡುಗಳು ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಸಂಗೀತ ಪದವಿಯಲ್ಲಿ ಉತ್ತಮ ಅಂಕಗಳು ಬೇಕಾದಲ್ಲಿ ಅಲ್ಲಿನ ಬ್ರಿಟನ್ನಿಗರು ಮುನ್ನಿ ಬದ್ನಾಮ್​ ಹುಯಿ ಹಾಡನ್ನು ಕಲಿಯಲೇಬೇಕು.

ತಮ್ಮ ಐಟಂ ಸಾಂಗ್​ ಲಂಡನ್​ ಮ್ಯೂಸಿಕ್​ ಶಾಲೆಯ ಪಠ್ಯವಾಗಿರೋದಕ್ಕೆ ನಟಿ ಮಲೈಕಾ ಅರೋರ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇಸ್ಟಾಗ್ರಾಂನಲ್ಲಿ ವಾವ್​ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 92 ಸಾವಿರದ,596 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದ ಸಕ್ರಿಯ ಕೇಸ್‌ಲೋಡ್ ಸಂಖ್ಯೆ 12 ಲಕ್ಷ, 31 ಸಾವಿರದ, 415ಕ್ಕೆ ಬಂದು ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷ, 62 ಸಾವಿರದ, 664 ಜನರು ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,219 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 3 ಲಕ್ಷ, 53 ಸಾವಿರದ, 528 ಕ್ಕೆ ಲುಪಿದೆ. ಇದೇ ವೇಳೆ ದೇಶಾದ್ಯಂತ ಒಟ್ಟು 23 ಕೋಟಿ, 90 ಲಕ್ಷ, 58 ಸಾವಿರದ 360 ಕೊರೊನಾ ಲಸಿಕೆ ನೀಡಲಾಗಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: