• Home
  • »
  • News
  • »
  • entertainment
  • »
  • Trivikrama ಸಿನಿಮಾ ನೋಡಿದ್ರೆ ಪರೀಕ್ಷೆಯಲ್ಲಿ 5 ಗ್ರೇಸ್ ಮಾರ್ಕ್ಸ್, ಬೆಳಗಾವಿ ಕಾಲೇಜಿನಲ್ಲಿ ಹೊಸಾ ಆಫರ್

Trivikrama ಸಿನಿಮಾ ನೋಡಿದ್ರೆ ಪರೀಕ್ಷೆಯಲ್ಲಿ 5 ಗ್ರೇಸ್ ಮಾರ್ಕ್ಸ್, ಬೆಳಗಾವಿ ಕಾಲೇಜಿನಲ್ಲಿ ಹೊಸಾ ಆಫರ್

ತ್ರಿವಿಕ್ರಮ

ತ್ರಿವಿಕ್ರಮ

Sandalwood: ಹೌದು, ಇದೇ ಜೂನ್ 24ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಅಭಿನಯದ ತ್ರಿವಿಕ್ರಮ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸ್ಯಾಂಡಲ್​ವುಡ್​ ಕನಸುಗಾರನ ಮಗನ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ.

  • Share this:

ಸಿನಿಮಾ (Film) ಹುಚ್ಚು ಯುವ ಜನತೆಯಲ್ಲಿ ಸಾಮಾನ್ಯ. ಅದರಲ್ಲೂ ನೆಚ್ಚಿನ ನಟನ ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಕಾಲೇಜಿಗೆ (Collage) ಬಂಕ್ ಹಾಕಿ ಸಿನಿಮಾ ನೋಡಲು ಹೋಗುತ್ತಾರೆ. ಅಷ್ಟರ ಮಟ್ಟಿಗೆ ಅಭಿಮಾನ ಇರುತ್ತದೆ. ಒಂದು ಸಿನಿಮಾ ನೋಡಲು ಲೆಕ್ಚರ್​ಗಳ (Lecture) ಕಣ್ಣು ತಪ್ಪಿಸಿ, ಸಾವಿರ ಸುಳ್ಳು ಹೇಳಿ ಹೋಗುವುದು ಮಾಮೂಲಿ, ಆದರೆ ಇಲ್ಲೊಂದು ಕಾಲೇಜಿನ ಸಿನಿಮಾ ನೋಡಲು ಹೋದರೆ 5 ಮಾರ್ಕ್ಸ್ ಬೋನಸ್​ ಕೊಡ್ತಾರಂತೆ. ಹಾಗಂತ ಎಲ್ಲಾ ಸಿನಿಮಾಗೆ ಅಲ್ಲ ಕೇವಲ ಒಂದು ಸಿನಿಮಾಗೆ ಮಾತ್ರ.


ಹೌದು, ಇದೇ ಜೂನ್ 24ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಅಭಿನಯದ ತ್ರಿವಿಕ್ರಮ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸ್ಯಾಂಡಲ್​ವುಡ್​ ಕನಸುಗಾರನ ಮಗನ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಹಲಾವರು ಸ್ಥಳಗಳಲ್ಲಿ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ಸಿನಿಮಾ ತಂಡ ಬೆಳಗಾವಿಯ ಖಾಸಗಿ ಕಾಲೇಜ್​ ಒಂದಕ್ಕೆ ಸಹ ಪ್ರಚಾರಕ್ಕೆ ಹೋಗಿದ್ದು, ಅಲ್ಲಿನ ಪ್ರಾಧ್ಯಾಪಕರೊಬ್ಬರು ಹೇಳಿರುವ ಒಂದು ಹೇಳಿಕೆ ಈಗ ಫುಲ್ ವೈರಲ್ ಆಗುತ್ತಿದೆ.


ಸಿನಿಮಾ ನೋಡಿದರೆ 5 ಮಾರ್ಕ್ಸ್ 


ಕಾಲೇಜಿನಲ್ಲಿ ಪ್ರಚಾರ ಕಾರ್ಯವಾಗುತ್ತಿದ್ದ ಸಂದರ್ಭದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಗ ಈ ಪ್ರಾಧ್ಯಾಪಕರು ನಿಮಗೆ ಒಂದು ದಿನ ಹಾಫ್​ ಡೇ ಲೀವ್ ಕೊಡ್ತಿನಿ. ಎಲ್ಲರೂ ಹೋಗಿ ತ್ರಿವಿಕ್ರಮ ಸಿನಿಮಾ ನೋಡಿ ಬನ್ನಿ. ಸಿನಿಮಾಗೆ ಹೋಗಿರುವ ಟಿಕೆಟ್​ ತಂದು ಕೊಟ್ಟರೆ 5 ಮಾರ್ಕ್ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳು ಓಹೋ ಎಂದು ಜೋರಾಗಿ ಕೂಗಿದ್ದಾರೆ.  ಪ್ರಾಧ್ಯಾಪಕರು ಈ ರೀತಿ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಇದು ಟೀಕೆಗೆ ಗುರಿಯಾಗಿದೆ.


ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಆರ್​ಆರ್​ಆರ್​ ಬಾಚಿದ್ದು ಅಷ್ಟಿಷ್ಟಲ್ಲ, ಸಿನಿಮಾದ ಕಲೆಕ್ಷನ್ ಬಗ್ಗೆ ಹೊಸ ಅಪ್​ಡೇಟ್​ ಇಲ್ಲಿದೆ


ಸಿನಿಮಾ ನೋಡುವುದು ತಪ್ಪಲ್ಲ. ಆದರೆ ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವ ಪ್ರಾಧ್ಯಾಪಕರೇ ಈ ರೀತಿ ಹೇಳುವುದು ಸರಿಯಲ್ಲ. ಇದು ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ಹಲವಾರು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇದು ಪೋಷಕರು ಕೆಂಗಣ್ಣಿಗೂ ಸಹ ಗುರಿಯಾಗಿದ್ದು, ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವುದನ್ನು ಬಿಟ್ಟು, ಈ ರೀತಿ ಸಿನಿಮಾ ನೋಡಿದರೆ 5 ಮಾರ್ಕ್ಸ್ ನೀಡುತ್ತೇನೆ ಎಂದು ಹೇಳಿ ದಾರಿ ತಪ್ಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.




ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ


ಇನ್ನು ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರನ ಮೊದಲ ಚಿತ್ರ ಅಂದಕೂಡಲೇ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆಗಳು ಹೆಚ್ಚಿರುತ್ತವೆ. ಸಾಂಗ್ ಟೀಸರ್ ಮತ್ತು ಹೊಸ ಲುಕ್​ನ ಪೋಸ್ಟರ್ಸ್ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದ್ದು ಸುಳ್ಳಲ್ಲ. ಹೀಗಾಗಿ ನಿರ್ದೇಶಕ ಸಹನಾಮೂರ್ತಿ ಹೆಚ್ಚು ಟೈಮ್‌ ತೆಗೆದುಕೊಂಡು ಶೂಟಿಂಗ್ ಮಾಡಿದ್ದಾರೆ.


ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋದು ಈ ನಟಿಯಂತೆ, ಟಾಪ್ 10 ಹೀರೋಯಿನ್​ಗಳ ಲಿಸ್ಟ್ ಇಲ್ಲಿದೆ


ತ್ರಿವಿಕ್ರಮ ನಾನಾ ಕಾರಣಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಸಿನಿಮಾಗೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಪ್ರಖ್ಯಾತ ಫೈಟ್​ ಮಾಸ್ಟರ್​ಗಳು ಸಾಹಸ ದೃಶ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಆಕಾಂಕ್ಷ ಮತ್ತು ಅಕ್ಷರಾ ಗೌಡ ಪ್ರೀತಿ-ಪ್ರೇಮದ ಪಾತ್ರವನ್ನು ನಿರ್ವಹಿಸಿದ್ದಾರೆ.

Published by:Sandhya M
First published: