ಬಾಲಿವುಡ್​ನಲ್ಲಿ ಮತ್ತೆ ಕ್ಯಾಟ್​ ಫೈಟ್​: ಕತ್ರಿನಾ ಮತ್ತು ಜಾಕ್ಲೀನ್​ ನಡುವೆ ಆರಂಭವಾಗಿದೆ ಶೀತಲ ಸಮರ

news18
Updated:June 28, 2018, 11:41 AM IST
ಬಾಲಿವುಡ್​ನಲ್ಲಿ ಮತ್ತೆ ಕ್ಯಾಟ್​ ಫೈಟ್​: ಕತ್ರಿನಾ ಮತ್ತು ಜಾಕ್ಲೀನ್​ ನಡುವೆ ಆರಂಭವಾಗಿದೆ ಶೀತಲ ಸಮರ
news18
Updated: June 28, 2018, 11:41 AM IST
ನ್ಯೂಸ್​ 18 ಕನ್ನಡ 

ಬಿ-ಟೌನ್​ನಲ್ಲಿ ಸಾಕಷ್ಟು ನಾಯಕಿಯರಿಗೆ ಸಲ್ಮಾನ್​ ಖಾನ್​ ಗಾಡ್​ಫಾದರ್​ ಎಂದರೆ ತಪ್ಪಾಗಲಾರದು. ಕತ್ರಿನಾ ಹಾಗೂ ಜಾಕ್ಲೀನ್ ಅವರಿಗೂ ಸಲ್ಮಾನ್​ ಗಾಡ್​ಫಾದರ್​ ಇದ್ದಂತೆ. ಆದರೂ ಈ ನಟಿಯರ ನಡುವೆ ಈಗ ಕ್ಯಾಟ್​ ಫೈಟ್​​ ಆರಂಭವಾಗಿದೆ.

ಸದ್ಯ ಈ ಇಬ್ಬರು ನಟಿಯರು ಸಲ್ಮಾನ್​ ಜತೆ ದ-ಬ್ಯಾಂಗ್​ ರಿಲೋಡೆಟ್​ ಪ್ರವಾಸದಲ್ಲಿದ್ದಾರೆ. ಈ ತಂಡ ಸದ್ಯ ಅಮೆರಿಕದಲ್ಲಿದ್ದು, ಇಲ್ಲಿ ಈ ನಟಿಯರ ನಡುವೆ ಶೀತಲ ಸಮರ ಆರಂಭವಾಗಿದೆಯಂತೆ. ಈ ಬಗ್ಗೆ ಇದೇ ತಂಡದಲ್ಲಿರುವವರು ಮಾಹಿತಿ ಹೊರ ಹಾಕಿದ್ದಾರೆ.

ಈ ನಟಿಯರ ನಡುವೆ ಮನಸ್ತಾಪ ಎಷ್ಟಾಗಿದೆ ಎಂದರೆ, ಒಬ್ಬರನ್ನು ಒಬ್ಬರೂ ನೋಡಲೂ ಇಲ್ಲವಂತೆ. ಅದಕ್ಕಾಗಿಯೇ ಸಲ್ಮಾನ್​ ಇಬ್ಬರೂ ಎದುರಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ಪ್ಲಾನ್​ ಮಾಡಿಸಿದ್ದಾರಂತೆ. ಅಲ್ಲದೆ ಅವರು ಉಳಿದುಕೊಂಡಿರುವ ಹೋಟೆಲ್​ನಲ್ಲೂ ಇಬ್ಬರ ಕೋಣೆಗಳನ್ನು ತುಂಬಾ ದೂರ ದೂರ ಮಾಡಿಸಲಾಗಿದೆಯಂತೆ. ಆದರೆ ಇವರಿಬ್ಬರ ನಡುವಿನ ಶೀತಲ ಸಮರಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.

ಈ ಪ್ರವಾಸದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಗಾಯಕ ಗುರು ರಾಂಧಾವ ಸಹ ಇದ್ದಾರೆ. ಇದರಲ್ಲಿ ಕತ್ರಿನಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿರುವುದ ವಿಶೇಷ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ