ಒಳಗೊಳಗೆ ನಡೀತಿದೆ 'ಕುರುಕ್ಷೇತ್ರ' ಯುದ್ಧ: ದರ್ಶನ್‍ಗ್ಯಾಕೆ ನಿಖಿಲ್ ಮೇಲೆ ಕೋಪ..?

news18
Updated:July 13, 2018, 5:04 PM IST
ಒಳಗೊಳಗೆ ನಡೀತಿದೆ 'ಕುರುಕ್ಷೇತ್ರ' ಯುದ್ಧ: ದರ್ಶನ್‍ಗ್ಯಾಕೆ ನಿಖಿಲ್ ಮೇಲೆ ಕೋಪ..?
news18
Updated: July 13, 2018, 5:04 PM IST
ನ್ಯೂಸ್​ 18 ಕನ್ನಡ 

'ಕುರುಕ್ಷೇತ್ರ' ಅಂತ ಹೆಸರಿಟ್ಟಾಗಲೇ ಈ ಸಿನಿಮಾ ಬಿಡುಗಡೆಯಾಗೋಕೆ ಧೀರ್ಘ ಸಮಯ ತೆಗೆದುಕೊಳ್ಳುತ್ತದೆ ಅಂತ ಕೆಲವು ಕಿಡಿಗೇಡಿಗಳು ಮಾತಾಡಿಕೊಂಡಿದ್ದರು. ಮತ್ತೆ ಕೆಲವರು ಕಿರಕ್​ ಆಗೇ ಆಗುತ್ತೆ ನೋಡು ಗುರು ಬೇಕಾದರೆ ಅಂತ ಕೆಲಸವಿಲ್ಲದ ಗಾಂಧಿನಗರದ ಕೆಲ ಹುಡುಗರು ಧ್ವನಿ ಎತ್ತಿದ್ದರು. ಈಗ ಆರಂಭವಾಗಿರುವ ಗೊಂದಲಕ್ಕೂ ಜನ ಮಾತನಾಡಿದ್ದಕ್ಕೂ ಸರಿಯಾಗಿದೆ ಎನ್ನಬಹುದು.

'ಕುರುಕ್ಷೇತ್ರ' ಚಿತ್ರ ಮುನಿರತ್ನಂ ನಾಯ್ಡು ಅವರ ಕನಸಿನ ಕೂಸು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಯಾವುದೋ ಸಣ್ಣಪುಟ್ಟ ಮಕ್ಕಳ 50ನೇ ಸಿನಿಮಾ ಆಗಿದಿದ್ದರೆ ಅದಕ್ಕೆ ಅಂಥ ಮಹತ್ವ ಸಗುತ್ತಿರಲಿಲ್ಲ. ಆದರೆ ಕರುನಾಡಿನ ಸಿನಿ ರಂಗದ ಬಾಕ್ಸಾಫಿಸ್ ಸುಲ್ತಾನ ಒಬ್ಬ ನಿರ್ಮಾಪಕರಿಗೆ ತನ್ನ 50ನೇ ಚಿತ್ರದ ಡೇಟ್ಸ್ ಕೊಡುತ್ತಾರೆ ಅಂದರೆ ಅದು ತಮಾಷೆ ಮಾತಲ್ಲ. ಇಂಥ ದಿನಾಂಕವನ್ನು ಯಾವ ಲಕ್ಕಿಡಿಪ್​ ಇಲ್ಲದೆ ಪಡೆದುಕೊಂಡ ಲಕ್ಕಿ ಬಾಯ್ ಆಗಿಬಿಟ್ಟರು ಮಾಸ್ಟರ್​ಪೀಸ್​ ಮುನಿರತ್ನ.

ಆದರೆ ಮುನಿರತ್ನ ಈಗ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ ಅನ್ನೊ ಸುದ್ದಿ 'ಕುರುಕ್ಷೇತ್ರ'ದ ತೆರೆದ ಮೈದಾದನದಿಂದ ಎದ್ದು ಗಾಂಧಿನಗರದಲ್ಲಿ ಸುತ್ತು ಹೊಡೆಯುತ್ತಿದೆ.  ಏನದು ಬ್ರೇಕಿಂಗ್ ನ್ಯೂಸ್, ಏನಾಯಿತು. ಮುನಿರತ್ನ ಮತ್ತು ದರ್ಶನ್​ ನಡುವೆ ಹಾಗೂ  ನಿಖಿಲ್ ಮೇಲೆ ದರ್ಶನ್ ನಿಜಕ್ಕೂ ಕೋಪ ಮಾಡಿಕೊಂಡಿದ್ದಾರಾ?

ಈ ಸುದ್ದಿ ಬರಿ ಗಾಳಿ ಸುದ್ದೀನಾ ? ಮಹಾಭಾರತದಲ್ಲಿ ಅರ್ಜುನನ ಧೀರಪುತ್ರನಾದ ಅಭಿಮನ್ಯುವಿನದ್ದು ಅತಿಥಿ ಪಾತ್ರ. ಆದರೆ ಮುನಿರತ್ನ ಅವರು ಕುಮಾರಣ್ಣ ಅವರನ್ನು ಸಂಪ್ರೀತಗೊಳಿಸಬೇಕೆಂದು ಪುಟ್ಟದಾಗಿರಬೇಕಿದ್ದ ಪಾತ್ರವನ್ನು ನಾಯಕ ದರ್ಶನ್ ಅವರ ರೇಂಜ್‍ಗೆ ಬಿಲ್ಡಪ್ ಕೊಟ್ಟು ಸಿನಿಮಾದಲ್ಲಿ ತೋರಿಸಿ ಬಿಟ್ಟಿದ್ದಾರೆ. ಹೀಗಾದಾಗ ಸಹಜವಾಗೇ `ಹೀರೊ ಯಾರ್ ಗುರು ನಾನಾ ಆ ಹುಡುಗಾನಾ' ಅನ್ನೋ ಅನುಮಾನ ಬಂದೇ ಬರುತ್ತೆ.

ಮುನಿರತ್ನ ಏಕೆ ಇಂಥ ಪಾಪ ಪಾಂಡು ಕೆಲಸ ಮಾಡಿಕೊಂಡರು ಅಂತ ಅವರಿಗೇ ಅರ್ಥ ಆಗಿಲ್ಲ  ಅನ್ನಿಸುತ್ತೆ. ಇದರಿಂದ ಸಿನಿಮಾ ಲೇಟಾಗಿದೆಯಾ ? ಚಿಕ್ಕ ಅತಿಥಿ ಪಾತ್ರವನ್ನ ದೊಡ್ಡದಾಗಿ ಮಾಡಿರುವುದರಿಂದ ಅದನ್ನ ಕಟ್ ಮಾಡೋಕೆ ಕಷ್ಟ ಗುತ್ತಿದೆಯಾ ? ಏನಾದರೂ ಆಗಲಿ 'ಕುರುಕ್ಷೇತ್ರ' ಬೇಗ ತೆರೆ ಕಾಣಲಿ.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...