Coffee Nadu Chandu: ಅಮೃತಾ ಅಯ್ಯಂಗಾರ್​ ಬರ್ತ್​ ಡೇಗೆ ಸಿಕ್ತು ಬಿಗ್​ ಗಿಫ್ಟ್​ , ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನಟಿ

Amrutha Iyengar: ಅವರದ್ದೇ ಆದ ಶೈಲಿಯಲ್ಲಿ ಅಮೃತಕ್ಕಾ, ಅಮೃತಕ್ಕಾ ಹ್ಯಾಪಿ ಬರ್ತ್​ ಡೇ, ನಿಮಗೆ ವಂದನೆಗಳು ಎಂದು ಶುಭ ಕೋರಿದ್ದಾರೆ. ಇನ್ನು ನಟಿ ಅಮೃತಾ ಅವರಿಗೆ ಸ್ಯಾಂಡಲ್​ವುಡ್​ ತಾರೆಯರಾದ ರಮ್ಯಾ, ಡಾಲಿ ಧನಂಜಯ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ (Viral) ಆಗುವುದು ಬಹಳ ಸುಲಭವಾಗಿದೆ. ಸೂಪರ್ ಸ್ಟೀಡ್​ನಲ್ಲಿ ವಿಚಾರಗಳು ಹರಡಿಬಿಡುತ್ತದೆ. ಸದ್ಯ ಕರ್ನಾಟಕದಲ್ಲಿ (Karnataka)  ಸೋಷಿಯಲ್ ಮೀಡಿಯಾ ಸೆನ್ಸೇಷನಲ್​​ ಸ್ಟಾರ್​ ಎಂದರೆ ಅದು ಕಾಫಿ ನಾಡು ಚಂದು (Coffeenadu Chandu) . ಇವರ ವಿಭಿನ್ನ ಶೈಲಿಯ ಹಾಡುಗಾರಿಕೆ (Singing Style) ಎಲ್ಲೆಡೆ ಫೇಮಸ್ ಆಗಿದೆ. ಇವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳು (Fans) ಸಹ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಸೆಲೆಬ್ರಿಟಿಗಳನ್ನು ಸಹ ಮೀರಿಸಿದ್ದು ಹೆಚ್ಚಿನ ಫಾಲೋವರ್ಸ್​ ಇದ್ದಾರೆ. ಸದ್ಯ ಅವರಿಂದ ಬರ್ತ್ ಡೇ ವಿಶ್​ (Birthday Wish) ಮಾಡಿಸುವುದು ಸಾಮಾನ್ಯವಾಗಿದೆ. ಈಗ ಅವರು ನಿನ್ನೆ ನಟಿಯೊಬ್ಬರಿಗೆ 9Actress) ವಿಶ್​ ಮಾಡಿದ್ದು, ಆ ವಿಡಿಯೋ ಫುಲ್ ವೈರಲ್ ಆಗಿದೆ.

ನಟಿ ಅಮೃತಾ ಅಯ್ಯಂಗಾರ್​ಗೆ ವಿಶ್​ ಮಾಡಿದ ಕಾಫಿನಾಡು ಚಂದು

ಹೌದು, ಯಾರದ್ದಾದರೂ ಜನ್ಮದಿನವಿದ್ದರೆ ಅವರಿಗೆ ವಿಶೇಷ ವ್ಯಕ್ತಿಗಳಿಂದ ವಿಶ್​ ಮಾಡಿಸಲಾಗುತ್ತದೆ. ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ವಿಶ್​ ಮಾಡುವುದು ನೋಡಿರುತ್ತೀರಿ. ಆದರೆ ಇಲ್ಲಿ ಕಾಫಿನಾಡು ಚಂದು ಮಾತ್ರ ಸ್ಟಾರ್ ನಟಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ. ಆ ನಟಿ ಬೇರ್ಯಾರು ಅಲ್ಲ ನಿನ್ನೆ ಜನ್ಮದಿನ ಆಚರಿಸಿಕೊಂಡ ಅಮೃತಾ ಅಯ್ಯಂಗಾರ್. ನಿನ್ನೆ ಲವ್​ ಮಾಕ್ಟೇಲ್​ ಸಿನಿಮಾ ಖ್ಯಾತಿಯ ನಟಿ ಅಮೃತಾ ಅಯ್ಯಂಗಾರ್​ ಜನ್ಮದಿನವಿತ್ತು. ಕುಟುಂಬಸ್ಥರು ಹಾಗೂ ಸ್ನೇಹಿತರು ಅವರಿಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ಅವರಿಗೆ ಸರ್ಪ್ರೈಸ್​ ಕೊಟ್ಟಿದ್ದು, ಕಾಫಿನಾಡು ಚಂದು ವಿಶ್​ ಮಾಡಿದ್ದಾರೆ.




ಇದನ್ನೂ ಓದಿ: ಇನ್ಮುಂದೆ ಈ ರೀತಿ ಸಿನಿಮಾ ಮಾಡಲ್ಲ ಎಂದ ದುಲ್ಕರ್ ಸಲ್ಮಾನ್, ಸಡನ್​ ಆಗಿ ಸ್ಟಾರ್ ನಟ ಈ ನಿರ್ಧಾರ ಮಾಡಿದ್ದೇಕೆ?

ಅವರದ್ದೇ ಆದ ಶೈಲಿಯಲ್ಲಿ ಅಮೃತಕ್ಕಾ, ಅಮೃತಕ್ಕಾ ಹ್ಯಾಪಿ ಬರ್ತ್​ ಡೇ, ನಿಮಗೆ ವಂದನೆಗಳು ಎಂದು ಶುಭ ಕೋರಿದ್ದಾರೆ. ಇನ್ನು ನಟಿ ಅಮೃತಾ ಅವರಿಗೆ ಸ್ಯಾಂಡಲ್​ವುಡ್​ ತಾರೆಯರಾದ ರಮ್ಯಾ, ಡಾಲಿ ಧನಂಜಯ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಸ್ಯಾಂಡಲ್​ವುಡ್​ನ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಈ ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ. ಇವರು ಫೇಮಸ್​ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್​ ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್​ ಪಡೆಯುತ್ತದೆ.

ಇದನ್ನೂ ಓದಿ: ಸಲಾರ್ ಸಿನಿಮಾ ಶೂಟಿಂಗ್ ನಿಲ್ಲುತ್ತಾ? ಏನಿದು ಟಾಲಿವುಡ್​ನ ಬ್ರೇಕಿಂಗ್ ನ್ಯೂಸ್?

ಎಲ್ಲೆಡೆ ವಿಡಿಯೋ ವೈರಲ್ 

ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್​ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ. ಅವರ ವಿಡಿಯೊ ನೋಡಿ ಕೆಲವು ಯೂಟ್ಯೂಬರ್​ಗಳು ರೋಸ್ಟ್​ ಮಾಡಿದ್ದು, ಇದು ಜನರ ಕುತೂಹಲಕ್ಕೆ ಕಾರಣವಾಗಿ ಅವರನ್ನು ಹುಡುಕಿ ಫುಲ್​ ಫೇಮಸ್​ ಮಾಡಿದ್ದಾರೆ. ಮತ್ತೊಂದು ವಿಶೇಷ ವಿಚಾರ ಎಂದರೆ ಕೆಲವೇ ದಿನಗಳಲ್ಲಿ 1.5 ಲಕ್ಷ ಫಾಲೋವರ್ಸ್ ಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಗಳಿಸಿದ್ದಾರೆ.
Published by:Sandhya M
First published: