Bigg Boss OTT: ಬಿಗ್​ಬಾಸ್​ ಮನೆಗೆ ಕಾಫಿನಾಡು ಚಂದು? ಕುತೂಹಲದಿಂದ ಕಾಯ್ತಿದ್ದಾರೆ ಫ್ಯಾನ್ಸ್

Coffee Nadu Chandu: ಕಾಫಿನಾಡು ಚಂದು ನಂತರ ಈಗ ಹೆಚ್ಚು ಸುದ್ದಿಯಲ್ಲಿರುವುದು ಎಂದರೆ ಅದು ಬಿಗ್​ಬಾಸ್​ ಓಟಿಟಿ. ಇಂದಿನಿಂದ ವೂಟ್ ಆ್ಯಪ್​ನಲ್ಲಿ ಬಿಗ್​ಬಾಸ್​ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್​. ಅವರ ಬಳಿ ಬರ್ತ್​ ಡೇ ವೀಶ್​ ಮಾಡಿಸಿಕೊಳ್ಳಬೇಕು ಎಂಬ ಆಸೆ ಬಹಳಷ್ಟು ಜನರಿಗೆ ಇದೆ. ಸದ್ಯ ರಾಜ್ಯದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡಿಂಗ್ ಹೆಸರು ಎಂದರೆ ಅದು ಕಾಫಿನಾಡು ಚಂದು. ಇದೀಗ ಅವರ ಬಗ್ಗೆ ಹೊಸ ಅಪ್​ಡೇಟ್​ ಒಂದು ಬಂದಿದೆ.

ಬಿಗ್​ಬಾಸ್​ ಮನೆಗೆ ಕಾಫಿನಾಡು ಚಂದು

ಕಾಫಿನಾಡು ಚಂದು ನಂತರ ಈಗ ಹೆಚ್ಚು ಸುದ್ದಿಯಲ್ಲಿರುವುದು ಎಂದರೆ ಅದು ಬಿಗ್​ಬಾಸ್​ ಓಟಿಟಿ. ಇಂದಿನಿಂದ ವೂಟ್ ಆ್ಯಪ್​ನಲ್ಲಿ ಬಿಗ್​ಬಾಸ್​ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಾವಾಗ ಈ ಶೋ ಆರಂಭವಾಗಲಿದೆ, ಯಾರೆಲ್ಲಾ ಮನೆಯೆ ಒಳಗೆ ಹೋಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ನಿನ್ನೆಯಿಂದಲೇ ಹಲವಾರು ಜನರ ಹೆಸರು ಕೇಳಿ ಬರುತ್ತಿದೆ. ಅಲ್ಲದೇ, ಬಿಗ್​ಬಾಸ್​ ಆರಂಭವಾಗುತ್ತಿರುವ ಮಾಹಿತಿ ಹೊರ ಬಂದ ನಂತರ ಕೆಲವರು ಕಾಫಿನಾಡು ಚಂದು ಬಿಗ್​ಬಾಸ್​ ಮನೆಗೆ ಹೋಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇದೀಗ ಕೇಳಿ ಬರುತ್ತಿರುವ ಸುದ್ದಿ ಎಂದರೆ ಕಾಫಿನಾಡು ಚಂದು ಬಿಗ್ಬಾಸ್​ ಮನೆಗೆ ಹೋಗುತ್ತಿದ್ದಾರೆ.

ಹೌದು, ಈ ಬಾರಿ ಬಿಗ್​ಬಾಸ್​ ಓಟಿಟಿ ಮೊದಲ ಸೀಸನ್​ ಆರಂಭವಾಗುತ್ತಿದೆ, ಸ್ವಲ್ಪ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಅಲ್ಲದೇ, ಇಂಟರ್​ಟೈನ್​ಮೆಂಟ್​ ವಿಚಾರದಲ್ಲಿ ಸಹ ಈ ಬಾರಿ ಯಾವುದೇ ರೀತಿ ಕಡಿಮೆಯಾಗಲ್ಲ ಎನ್ನುವುದು ಸತ್ಯ. ಹಾಗಾಗಿ ಅಭಿಮಾನಿಗಳ ನಿರೀಕ್ಷೆಯಂತೆ ಕಾಫಿನಾಡು ಚಂದು ಬಿಗ್​ಬಾಸ್​ ಮನೆಗೆ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಚಂದು ಎಂಟ್ರಿ ಪಕ್ಕವಂತೆ. ಅದೇನೇ ಇರಲಿ ಇಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದ್ದು, ಯಾರೆಲ್ಲಾ ಮನೆಯ ಒಳಗೆ ಹೋಗಲಿದ್ದಾರೆ ಎನ್ನುವುದು ತಿಳಿಯುತ್ತದೆ.

ಇದನ್ನೂ ಓದಿ: ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ ಪಲ್ಲವಿ ಗೌಡ, ಈ ಸುಂದರಿಯ ಬಗ್ಗೆ ಇಲ್ಲಿದೆ ಮಾಹಿತಿ

ಯಾರಿದು ಚಂದು?

ಈ ಕಾಫಿ ನಾಡು ಚಂದು ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್​. ನೀವು ಯಾವುದೇ ಮೀಮ್ ಪೇಜ್ , ಟ್ರೋಲ್ ಪೇಜ್ ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ. ಈಗ ಸುದ್ದಿ ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಆಗಿರುವ ಕಾಫಿನಾಡು ಚಂದು ಇನ್ಸ್ಟಾಗ್ರಾಂನಲ್ಲಿ ಸಹ ಹವಾ ಎಬ್ಬಿಸಿದ್ದಾರೆ.

ಈ ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ. ಇವರು ಫೇಮಸ್​ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್​ ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್​ ಪಡೆಯುತ್ತದೆ.

ಇದನ್ನೂ ಓದಿ: ಬಿಗ್​ಬಾಸ್ ಮನೆಗೆ ಈ ಟಿಕ್​ಟಾಕ್​ ಸ್ಟಾರ್ ಎಂಟ್ರಿ ಪಕ್ಕನಾ? ಮೊದಲ ಸೀಸನ್​ಗೆ ಕ್ಷಣಗಣನೆ

ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್​ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ. ಅವರ ವಿಡಿಯೊ ನೋಡಿ ಕೆಲವು ಯೂಟ್ಯೂಬರ್​ಗಳು ರೋಸ್ಟ್​ ಮಾಡಿದ್ದು, ಇದು ಜನರ ಕುತೂಹಲಕ್ಕೆ ಕಾರಣವಾಗಿ ಅವರನ್ನು ಹುಡುಕಿ ಫುಲ್​ ಫೇಮಸ್​ ಮಾಡಿದ್ದಾರೆ. ಮತ್ತೊಂದು ವಿಶೇಷ ವಿಚಾರ ಎಂದರೆ ಕೆಲವೇ ದಿನಗಳಲ್ಲಿ 1.5 ಲಕ್ಷ ಫಾಲೋವರ್ಸ್ ಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಗಳಿಸಿದ್ದಾರೆ.
Published by:Sandhya M
First published: