ಕಾಫಿ ನಾಡು ಚಂದು (Coffee Nadu Chandu) ಕ್ರೇಜ್ ಜನರ ಮಧ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಕಾಫಿನಾಡು ಚಂದು ಪರ್ಸನಲ್ ಕ್ರೇಜ್ ಹಾಗೆಯೇ ಇದೆ. ಇತ್ತೀಚೆಗೆ ಚಂದು ಬೆಂಗಳೂರಿಗೆ ಬಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ನನ್ನು (Shivarajkumar) ಭೇಟಿಯಾಗಿ ಹೋಗಿದ್ದಾರೆ. ವಿಡಿಯೋವನ್ನು (Video) ಚಂದು ಇನ್ಸ್ಟಾಗ್ರಾಮ್ನಲ್ಲಿ (Instagram) ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಕಾಫಿನಾಡು ಚಂದು ಅದರೊಂದಿಗೆ ಹಾರ್ಟ್ ಸಿಂಬಲ್ ಕೂಡಾ ಕ್ಯಾಪ್ಶನ್ ಆಗಿ ಹಾಕಿದ್ದಾರೆ. ವಿಡಿಯೋದಲ್ಲಿ ಕಾಫಿನಾಡು ಚಂದು ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಹಾಗೂ ಪುತ್ರಿಯೂ ಇದ್ದಾರೆ.
ಏನಂತ ವಿಶ್ ಮಾಡಿದ್ದಾರೆ ಕಾಫಿ ನಾಡು ಚಂದು?
ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ. ನಾನು ಕಾಫಿ ನಾಡು ಚಂದು, ನನ್ನ ಜೊತೆ ಇದ್ದಾರೆ ಶಿವಣ್ಣ ಹಾಗೂ ಗೀತಕ್ಕ. ಶಿವಣ್ಣ ಅವರಿಗೆ ನಾನು ಮಾಡುವ ವಂದನೆ, ಅಭಿನಂದನೆ. ಗೀತಕ್ಕ ಅವರಿಗೆ ವಂದನೆ, ಅಭಿನಂದನೆ. ಅವರ ಮಗಳು ನಿವೇದಿತಾ ಅಕ್ಕ ಅವರು ಇದ್ದಾರೆ. ಅವರಿಗೂ ವಂದನೆ ಅಭಿನಂದನೆ. ಇವರಿಗೆ ದೇವರು ಐಶ್ವರ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ಭಗವಂತ ಇವರಿಗೆ ಒಳ್ಳೆಯದು ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ಹ್ಯಾಪಿ ಬರ್ತ್ಡೇ ಅಕ್ಕ.
ಹಸಿರಸಿರಲಿ, ಉಸಿರುಸಿರಲಿ ಬೆಳೆವೆ ನಾಡಲಿ, ಕಾಫಿ ನಾಡಲಿ, ಈ ಬರ್ತ್ಡೇ, ಹ್ಯಾಪಿ ಬರ್ತ್ಡೇ, ನಿವೇದಿತಕ್ಕನ ಬರ್ತ್ಡೇ, ಓಹೋ ನಿವೇದಿತಕ್ಕಾ, ಆಹಾ ಗೀತಕ್ಕ, ಪಕ್ಕದಲ್ಲಿದ್ದಾರೆ ನಮ್ ಬಾಸಕ್ಕ ಎಲ್ಲಿ ನೋಡಿದ್ರು ಕಾಫಿ ನಾಡುಚಂದು. ನಮ್ ಬಾಸ್ ನಮಗೆ ಬಂಧು, ದುಬೈನಲ್ಲಿ ನೋಡಿದ್ರು ಚಂದು, ಅಮೆರಿಕದಲ್ಲಿ ನೋಡಿದ್ರು ಚಂದು. ಬೆಂಗಳೂರಿಗೆ ಬಂದಿದ್ದೇವೆ ಬಾಸ್ ಮನೆಗೆ ಇಂದು. ಸಿಂಡ್ರೆಲಾ ಓ ಸಿಂಡ್ರೆಲಾ, ನಮ್ ಚಿಕ್ಕಮಗಳೂರಲ್ಲಿ ಮಳೆ ಬರ್ತಿದೆ, ಹಿಡ್ಕೊಂಡ್ ಬಾರೆ ಅಂಬ್ರೆಲಾ ಎಂದಿದ್ದಾರೆ. ಹಾಡು ಕೇಳಿ ಚಪ್ಪಾಳೆ ತಟ್ಟಿ ಥ್ಯಾಂಕ್ಯೂ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ: Kichcha Sudeep – Coffee Nadu Chandu: ಕಿಚ್ಚನಿಗೆ ಕಾಫಿ ನಾಡು ಚಂದು ಬರ್ತ್ಡೇ ವಿಶ್!
ವೈರಲ್ ಆಯ್ತು ವೀಡಿಯೋ
ಸದ್ಯ ಕಾಫಿ ನಾಡು ಚಂದು ಮಾಡಿರೋ ವೀಡಿಯೋಗೆ ಜನರು ಲೈಕ್ಸ್ ಕೊಟ್ಟು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಕಾಫಿ ನಾಡು ಚಂದು ಸುಮಾರು 67 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದ್ದಾರೆ.
View this post on Instagram
ಚಿಕ್ಕಮಗಳೂರಿನಲ್ಲೇ ಚಂದುಗೆ ಫುಲ್ ಕ್ಲಾಸ್!
ಸೋಷಿಯಲ್ ಮೀಡಿಯಾದಲ್ಲಿ ಚಂದು ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಂದು ಆಟೋ ಒಳಗಡೆ ಕೂತಿದ್ದಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಚಂದುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಕಾಫಿ ನಾಡು ಚಂದುಗೆ ಪೀಡಿಸುತ್ತಿದ್ದಾರೆ. ಇದಲ್ಲದೇ ಚಿಕ್ಕಮಗಳೂರಿನ ಜನರೇ ಚಂದುಗೆ ಅವಾಜ್ ಹಾಕಿದ್ದಾರೆ. ನಮ್ಮಿಂದ ನೀನು ಹೋಗೋಲೇ ಎಂದು ಬೈಯ್ದು ಕಳಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲರ ಮೊಬೈಲ್ನಲ್ಲೂ ಈ ವಿಡಿಯೋ ಹರಿದಾಡಿತ್ತು.
ಕಾಫಿನಾಡು ಚಂದು ಅವರಿಗೆ ಕಾಫಿನಾಡಿಲ್ಲೇ ಜನರು ಧಮಿಕಿ ಹಾಕಿದ್ದೂ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. #coffeenaduchandu pic.twitter.com/eBeb050Z6l
— News18 Kannada (@News18Kannada) August 23, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ