Coffee Nadu Chandu: ಯಕ್ಷಗಾನದಲ್ಲೂ ಕಾಫಿ ನಾಡು ಚಂದು ಹವಾ! ಕಲಾವಿದನ ಬಾಯಲ್ಲಿ ಅಣ್ಣನ ಬರ್ತ್​ಡೇ ಸಾಂಗ್​​

ಎಲ್ಲೆಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಂದು ಅಣ್ಣನ ಸ್ಟೈಲ್​ ಕಾಪಿ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ಇದೀಗ ಇದೆ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಾಫಿನಾಡಿನ ಚಂದು

ಕಾಫಿನಾಡಿನ ಚಂದು

  • Share this:
ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಂದು ಅಣ್ಣನ ಸ್ಟೈಲ್​ ಕಾಪಿ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ಇದೀಗ ಇದೆ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತುಳು ನಾಟಕದಲ್ಲೂ ಕಾಫಿ ನಾಡಿದ ಚಂದು ಹವಾ!

ಆಡು ಮುಟ್ಟದ ಸೊಪ್ಪಿಲ್ಲ, ಚಂದು ಅಣ್ಣನ ವಿಡಿಯೋ ನೋಡದೇ ಇರುವವರಿಲ್ಲ. ದಿನದಿಂದ ದಿನಕ್ಕೆ ಚಂದು ಅಣ್ಣನ ಕ್ರೇಜ್​ ಹೆಚ್ಚಾಗುತ್ತಲೇ ಇದೆ. ಎಲ್ಲಿ ಹೋದರೂ, ಅಣ್ಣನದ್ದೇ ಸೌಂಡು. ಬಿಗ್​​ಬಾಸ್​ ಮನೆಗೆ ಚಂದು ಅಣ್ಣನನ್ನು  ಕಳುಹಿಸಿ ಎಂಬ ಕೂಗು ಕೂಡ ಕೇಳಿಸುತ್ತಾ ಇದೆ. ಇದರ ನಡುವೆ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ಕಲಾವಿದನೊಬ್ಬ ತುಳು ನಾಟಕದಲ್ಲಿ ಕಾಫಿ ನಾಡಿನ ಚಂದು ಅವರಂತೆಯೆ ನಟಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಚಂದು ಸ್ಟೈಲ್​ನಲ್ಲಿ ಹಾಡಿದ ಕಲಾವಿದ!

ತುಳು ನಾಟಕವೊಂದರಲ್ಲಿ ಕಲಾವಿದ ಕಾಫಿ ನಾಡು ಚಂದು ಹಾಡುವ ರೀತಿಯಲ್ಲೇ ತನ್ನ ಡೈಲಾಗ್​ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗಾಗಲೇ ದಿಲ್ಲಿಯಿಂದ ಹಿಡಿದು ಬೇರೆ ದೇಶಗಳಲ್ಲೂ ಕಾಫಿ ನಾಡಿನ ಚಂದು ಸ್ಟೈಲ್​ಗೆ ಫಿದಾ ಆಗಿದ್ದಾರೆ. ಇದೀಗ ನಾಟಕದಲ್ಲೂ ಚಂದು ಅಣ್ಣನ ಹವಾ ಕಂಡು ಅಭಿಮಾನಿಗಳು ಫುಲ್​ ಥ್ರಿಲ್​ ಆಗಿದ್ದಾರೆ. ಈ ಕಲಾವಿದನ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಇನ್ನೂ ಕೆಲವರು ಇದು ಚಂದು ಅಣ್ಣನ ಹವಾ ಅವರದ್ದು ಏನು ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ಶುರುವಾಯ್ತು ಹೊಸ ಅಭಿಯಾನ!

ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ರಾಕೇಶ್ ನನ್ನ ಗಂಡ ಎಂದ ಸ್ಫೂರ್ತಿ ಹಳೆ ಫೋಟೋ ವೈರಲ್​, ಇಷ್ಟ್ ದಿನ ಎಲ್ಲಿದ್ರಿ ಎಂದ ಪಡ್ಡೆ ಹೈಕ್ಳು!

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗ್ತಾರಾ ಚಂದು ಅಣ್ಣ?

ಹೌದು, ಬಿಗ್​ಬಾಸ್​ ಮನೆಗೆ ಚಂದು ಹೋಗುವುದು ಖಚಿತ ಅಂತ ಜನರು ಕೂಡ ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚಂದು ಎಲ್ಲರ ಬಳಿ ತೆರಳಿ ತನ್ನನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವಂತೆ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರೆ. ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಕಾಫಿ ನಾಡಿನ ಚಂದು ಶುರು ಮಾಡಿದ್ದಾರಂತೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ.
Published by:Vasudeva M
First published: