Bigg Boss OTT: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್.

ಕಾಫಿ ನಾಡಿದ ಚಂದು

ಕಾಫಿ ನಾಡಿದ ಚಂದು

  • Share this:
ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಇವರು ಇನ್ನೇನು ಬಿಗ್​ಬಾಸ್ (Kannada Bigg Boss OTT)​ ಮನೆಗೆ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಆದರೆ, ಅದು ನೆರವೇರಲಿಲ್ಲ. ಚಂದು ಅವರನ್ನು ಬಿಗ್​ಬಾಸ್​ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಅದರೂ ಬಿಗ್​ ಬಾಸ್ ಮನೆ ಸೇರಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.

ಶುರುವಾಯ್ತು ಹೊಸ ಅಭಿಯಾನ!

ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗ್ತಾರಾ ಚಂದು ಅಣ್ಣ?

ಹೌದು, ಬಿಗ್​ಬಾಸ್​ ಮನೆಗೆ ಚಂದು ಹೋಗುವುದು ಖಚಿತ ಅಂತ ಜನರು ಕೂಡ ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚಂದು ಎಲ್ಲರ ಬಳಿ ತೆರಳಿ ತನ್ನನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವಂತೆ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರೆ. ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಕಾಫಿ ನಾಡಿನ ಚಂದು ಶುರು ಮಾಡಿದ್ದಾರಂತೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ.



ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಕಾಫಿನಾಡು ಚಂದು? ಕುತೂಹಲದಿಂದ ಕಾಯ್ತಿದ್ದಾರೆ ಫ್ಯಾನ್ಸ್

ರಾ ರಾ ರಕಮ್ಮ ಹಾಡಿಗೆ ಸ್ಟೆಪ್ಸ್​ ಹಾಕಿದ ಚಂದು!

ದಾವಣಗೆರೆಯ ಅಭಿಮಾನಿಗಳು ಕಾರಿನಲ್ಲಿ ತೆರಳುವ ವೇಳೆ ಕಾಫಿನಾಡು ಚಂದು ಅವರನ್ನು ನೋಡಿದ್ದಾರೆ. ನಂತರ ಸಂತಸಗೊಂಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಕಾಫಿನಾಡು ಚಂದು ಬಳಿ ಹೇಳಿದ್ದಾರೆ. ಕೊನೆಗೆ ಕಾಫಿನಾಡು ಚಂದು ಆಟೋವನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಈ ವೇಳೆ ರಿಕ್ಷಾದಲ್ಲಿ ಸುದೀಪ್​ ಅಭಿನಯದ ವಿಕ್ರಾಂತ್​ ರೋಣಾ ಹಾಡು ಪ್ಲೇ ಆಗುತ್ತಿತ್ತು. ಅಭಿಮಾನಿಗಳನ್ನು ಕಂಡು ರಿಕ್ಷಾದಿಂದ ಇಳಿದ ಕಾಫಿನಾಡು ಚಂದು ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳೊಂದಿಗೆ ಸ್ಟೆಪ್​​ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.




ಇದನ್ನೂ ಓದಿ: ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕಾಫಿನಾಡು ಚಂದು​! ವಿಡಿಯೋ ನೋಡಿ

ಕಾಫಿನಾಡಿನ ಚಂದು ಹಿನ್ನೆಲೆ ಏನು?

ಮನಸ್ಸಿಗೆ ಬಂದಥ ಹಾಡು, ಮನಸ್ಸಿಗೆ ಬಂದತಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್​ ಆದವರು ಈ ಚಂದು. ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ಸ್ನೇಹಿತರಿಗೆ ಬರ್ತ್​ಡೇಗೆ ವಿಶ್​ ಮಾಡುತ್ತಿದ್ದರು. ಇವರ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಕಾಫಿನಾಡಿನ ಚಂದುಗೆ ಇನ್​ಸ್ಟಾಗ್ರಾಮ್​ನಲ್ಲಿ ಸದ್ಯಕ್ಕೆ 1 ಲಕ್ಷದ 24 ಸಾವಿರ ಜನ ಫಾಲೋವರ್ಸ್​ ಇದ್ದಾರೆ. ಇದು ನಿಜಕ್ಕೂ ಮೆಚ್ಚುವಂಥ ಕಾರ್ಯವೇ. 2 ವಾರಗಳಿಂದ ಸಿಕ್ಕಾಪಟ್ಟೆ ಪ್ರಸಿದ್ಧಿಗೆ ಬಂದಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ ಭಾಗದ ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​​ ಅವರ ಊರಿನವರಂತೆ.
Published by:Vasudeva M
First published: