Kichcha Sudeep - Coffee Nadu Chandu: ಕಿಚ್ಚನಿಗೆ ಕಾಫಿ ನಾಡು ಚಂದು ಬರ್ತ್​ಡೇ ವಿಶ್!

Coffee nadu Chandu: ರೀಲ್ಸ್ ಸ್ಟಾರ್ ಕಾಫಿ ನಾಡು ಚಂದು ಸುದೀಪ್​​ಗೆ ಸ್ಪೆಷಲ್ ಬರ್ತ್​ಡೇ ವಿಶ್ ಮಾಡಿದ್ದಾರೆ. ಕಿಚ್ಚನಿಗೆ ಕಾಫಿ ನಾಡು ಚಂದು ವಿಶ್ ಹೇಗಿತ್ತು?

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಕಾಫಿ ನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಸೌಂಡ್ ಮಾಡುತ್ತಿದ್ದು ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರ ಬರ್ತ್​ಡೇ (Birthday) ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್ ರೀಲ್ಸ್​​ನಲ್ಲಿ ಕಾಫಿ ನಾಡು ಚಂದು (Coffee nadu chandu) ಶುಭಾಶಯಗಳನ್ನು ತಿಳಿಸಿದ್ದು ವಿಡಿಯೋ (Video) ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗ್ರೇ ಕಲರ್ ಜೀನ್ಸ್​​ಗೆ ಹಳದಿ ಬಣ್ಣದ ಟೀಶರ್ಟ್​ ಧರಿಸಿದ್ದ ಚಂದು ಕಿಚ್ಚ ಅವರ ಅಭಿಮಾನಿ ಜೊತೆ ಸೇರಿಕೊಂಡು ವಿಡಿಯೋ ಮಾಡಿದ್ದಾರೆ. ತಮ್ಮ ವಿಶೇಷ ವಿಡಿಯೋಗಳ ಮೂಲಕ ಮನೆ ಮಾತಾಗಿರುವ ಕಾಫಿ ನಾಡು ಚಂದು ಅವರ ಈ ವಿಶೇಷ ವಿಡಿಯೋ ನೋಡಿ ನೆಟ್ಟಿಗರು ಖುಷ್ ಆಗಿದ್ದಾರೆ. ಅಪ್​ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋ ವ್ಯಾಪಕ ಪ್ರತಿಕ್ರಿಯೆಯನ್ನು ಗಳಿಸುತ್ತಿದ್ದು ಕಿಚ್ಚ ಸುದೀಪ್ ಅಭಿಮಾನಿಗಳು ಸಹ ಖುಷ್ ಆಗಿದ್ದಾರೆ.

ಹಾಯ್ ಎಲ್ಲರಿಗೂ ನಮಸ್ಕಾರ. ನಮ್ಜೊತೆ ಇದ್ದಾರೆ ನಮ್ಮ ಚಂದು ಅವರು. ಇವತ್ತು ನಮ್ಮ ಕಿಚ್ಚ ಸುದೀಪಣ್ಣನ ಬರ್ತ್​ಡೇ. ಬ್ರದರ್ ಸುದೀಪಣ್ಣನ ಬರ್ತ್​ಡೇ, ವಿಶ್ ಮಾಡಬೇಕು ನಿಮ್ಮ ಸ್ಟೈಲಲ್ಲಿ ಎಂದು ಸುದೀಪ್ ಅವರ ಅಭಿಮಾನಿ ಹೇಳಿದ್ದಾರೆ. ಸುದೀಪಣ್ಣ ಸುದೀಪಣ್ಣ ಕಿಚ್ಚ ಸುದೀಪಣ್ಣ, ಹ್ಯಾಪಿ ಬರ್ತ್​ಡೇ, ಸುದೀಪಣ್ಣನ ಬರ್ತ್​ಡೇ, ಓಹೋ ಸುದೀಪಣ್ಣ, ಆಹಾ ಸುದೀಪಣ್ಣ ನಿಮಗೆ ವಂದನೆ, ಕಾಫಿ ನಾಡು ಚಂದು ಮಾಡೋ ಅಭಿನಂದನೆ ಎಂದಿದ್ದಾರೆ.

ವಿಡಿಯೋ ಈಗ ವೈರಲ್

ವಿಡಿಯೋ ಅಪ್​ಲೋಡ್ ಮಾಡಿದ 10 ಗಂಟೆಗಳಲ್ಲಿ ಸುಮಾರು 39 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. 224ಕ್ಕೂ ಹೆಚ್ಚು ಜನರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.






ಸೂಪರ್ ಬ್ರದರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಾಫಿ ನಾಡು ಚಂದು ಜೊತೆಗಿದ್ದ ಯುವಕನ ಜೊತೆ ವಿಡಿಯೋ ಮಾಡದಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Coffee Nadu Chandu: ಯಕ್ಷಗಾನದಲ್ಲೂ ಕಾಫಿ ನಾಡು ಚಂದು ಹವಾ! ಕಲಾವಿದನ ಬಾಯಲ್ಲಿ ಅಣ್ಣನ ಬರ್ತ್​ಡೇ ಸಾಂಗ್​​

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಇದನ್ನೂ ಓದಿ: Coffee Nadu Chandu: ಅಮೃತಾ ಅಯ್ಯಂಗಾರ್​ ಬರ್ತ್​ ಡೇಗೆ ಸಿಕ್ತು ಬಿಗ್​ ಗಿಫ್ಟ್​ , ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನಟಿ

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.
Published by:Divya D
First published: