Coffee Nadu Chandu: ಕಾಫಿ ನಾಡು ಚಂದು ರಿಮಿಕ್ಸ್ ಸಾಂಗ್, ಫುಲ್ ವೈಬ್ಸ್

Coffee Nadu Chandu: ಕಾಫಿ ನಾಡು ಚಂದು ಹಾಡುಗಳು ವೈರಲ್ ಆಗುತ್ತಿದೆ. ಅವರ ರೀಲ್ಸ್​ ನೋಡಿ ಬಹಳಷ್ಟು ಜನರು ಎಂಜಾಯ್ ಮಾಡುತ್ತಾರೆ. ಇದೀಗ ಅವರ ರೀಲ್ಸ್ ಒಂದು ವೈರಲ್ ಆಗಿದೆ.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಕಾಫಿ ನಾಡು ಚಂದು (Coffee nadu chandu) ಈಗ ಫೇಮಸ್. ದೇಶ, ವಿದೇಶಗಳಲ್ಲಿ ಚಂದುವಿಗೆ (Chandu) ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಕಾಫಿ ನಾಡು ಚಂದು ಶಿವ ರಾಜ್​ಕುಮಾರ್ (Shiva rajkumar) ಅವರನ್ನೂ ಭೇಟಿಯಾಗಿ ಮತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮದೇ ಆದ ಹಾಡುಗಳನ್ನು (Song) ರಚಿಸಿ ಅದನ್ನು ತಮ್ಮದೇ ಧಾಟಿಯಲ್ಲಿ ಹಾಡಿ ನೆಟ್ಟಿಗರನ್ನು ರಂಜಿಸುವ ಕಾಫಿ ನಾಡು ಚಂದು ಅವರ ಹಾಡನ್ನು ಈಗ ರಿಮಿಕ್ಸ್ (Remix) ಮಾಡಲಾಗಿದೆ. ಬ್ಯಾಕ್​ಗ್ರೌಂಡ್ ಮ್ಯೂಸಿಕ್, ಜೋಶ್​ಗಳನ್ನು ಕೊಟ್ಟು ಅವರ ಸಿಂಪಲ್ ಹಾಡನ್ನು ಮತ್ತೊಂದು ಲೆವೆಲ್​ಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಗಿದೆ. ಆ ಟ್ರ್ಯಾಕ್​ಗೆ ಕಾಫಿ ನಾಡು ಚಂದು ರೀಲ್ಸ್ ಮಾಡಿದ್ದು ಅದನ್ನು ತಮ್ಮ ಇನ್​ಸ್ಟಾಗ್ರಾಮ್ (Instagram) ವಾಲ್​ನಲ್ಲಿ ಶೇರ್ ಮಾಡಿದ್ದಾರೆ.

ಈ ವಿಡಿಯೋ 37 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು 300ಕ್ಕೂ ಹೆಚ್ಚು ಕಮೆಂಟ್​ಗಳನ್ನು ಗಳಿಸಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅದೇ ಆಡಿಯೋಗೆ ಅವರ ಅಭಿಮಾನಿಗಳು ಕೂಡಾ ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ.

ಡಿಜೆ ಚಂದು ಎಂದ ಅಭಿಮಾನಿಗಳು

ಕಾಫಿ ನಾಡು ಚಂದುವಿನ ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್ ಅಣ್ಣ, ಬೆಂಕಿ, ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದು ಕೆಲವರು ಡಿಜೆ ಚಂದು ಎಂದು ಹೇಳಿ ಕಾಫಿ ನಾಡು ಚಂದುವನ್ನು ಡಿಜೆ ಚಂದು ಮಾಡಿದ್ದಾರೆ.

ಕಾಫಿ ನಾಡು ಚಂದು ಈಗ ಎಲ್ಲಾ ಕಡೆಗಳಲ್ಲಿಯೂ ಫೇಮಸ್ ಆಗಿರುವ ಸೋಷಿಯಲ್ ಮೀಡಿಯಾ ಸ್ಟಾರ್. ಇನ್​ಸ್ಟಾಗ್ರಾಮ್ ಸ್ಟಾರ್ ಶಿವಣ್ಣ, ಪುನೀತಣ್ಣನ ಅಭಿಮಾನಿ ಎನ್ನುತ್ತಲೇ ಕರ್ನಾಟಕ ಮಾತ್ರವಲ್ಲದೆ ಹೊರ ಪ್ರದೇಶಗಳಲ್ಲಿಯೂ ಫೇಮಸ್ ಆಗಿದ್ದಾರೆ. ತಮ್ಮ ಯುನಿಕ್ ಇನ್​ಸ್ಟಾಗ್ರಾಮ್ ವಿಡಿಯೋಗಳ ಮೂಲಕ ವೈರಲ್ ಆಗುತ್ತಿರುವ ಕಾಫಿ ನಾಡು ಚಂದು ತಮ್ಮ ಆಸೆಯಂತೆ ಶಿವ ರಾಜ್​ಕುಮಾರ್ ಅವರನ್ನು ಭೇಟಿ ಕೂಡಾ ಮಾಡಿದ್ದಾರೆ.

ತಮ್ಮ ಡಿಫರೆಂಟ್ ಇನ್​ಸ್ಟಾಗ್ರಾಮ್ ರೀಲ್ಸ್ ಮೂಲಕ ಜನರನ್ನು ರಂಜಿಸುತ್ತಿರುವ ಕಾಫಿ ನಾಡು ಚಂದು ಈಗ ಸಖತ್ ಫೇಮಸ್. ಅವರ ವಿಡಿಯೋಗಳಿಗಾಗಿ ಜನರು ಕಾಯುತ್ತಿರುತ್ತಾರೆ. ಅವರ ವಿಡಿಯೋಗಳನ್ನು ಫಾಲೋ ಮಾಡಿ ಶೇರ್ ಮಾಡಿ ಲೈಕ್ಸ್ ಮಾಡುತ್ತಿದ್ದಾರೆ.

ಕಾಫಿ ನಾಡು ಚಂದು ಕೈಗೆ ಬಂತು ಟೈಟಾನ್ ವಾಚ್

ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಿತ್ರಿಸಲಾಗಿರುವಂತೆ ಕಾಣುವ ವಿಡಿಯೋವನ್ನು ಚಂದು ಶೇರ್ ಮಾಡಿದ್ದಾರೆ. ಇದರಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟುವುದನ್ನು ಕಾಣಬಹುದು.

ವಾಚ್ ಕಟ್ಟಿದ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು ಕಾಫಿ ನಾಡು ಚಂದು ಅವರ ಕೈಗೆ ಟೈಟಾನ್ ವಾಚ್ ಕಟ್ಟಿದ್ದು, ಈ ವಿಡಿಯೋವನ್ನು ಚಂದು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಚೆನ್ನಾಗಿ ಹಾಡಿ, ಇನ್ನೂ ನಾಲ್ಕೈದು ಜನಕ್ಕೆ ನೀವು ಸಹಾಯ ಮಾಡಬೇಕು ಎಂದು ಅನುಶ್ರೀ ಹೇಳಿದ್ದಾರೆ. ವಿಡಿಯೋ ಮಾಡುತ್ತಿದ್ದ ಯುವತಿ ಆ್ಯಂಕರ್ ಅನುಶ್ರೀ ಅವರಲ್ಲಿ ವಾಚ್ ಕಟ್ಟುವಂತೆ ಹೇಳಿದ್​ದು ಅನುಶ್ರೀ ಚಂದು ಕೈಗೆ ವಾಚ್ ಕಟ್ಟಿದ್ದಾರೆ. ಆಲ್​ ದಿ ಬೆಸ್ಟ್ ಚೆನ್ನಾಗಿ ಹಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ: Pooja Hegde: ಕ್ಯಾಮೆರಾ ಮುಂದೆ ಅಲ್ಲ, ಕ್ಯಾಮೆರಾ ಜೊತೆ ಫೋಟೋಶೂಟ್ ಮಾಡಿಕೊಂಡ ಪೂಜಾ

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಇದನ್ನೂ ಓದಿ: Coffee Nadu Chandu: ಕಾಫಿ ನಾಡು ಚಂದು ಕೈಗೆ ಟೈಟಾನ್ ವಾಚ್ ಕಟ್ಟಿದ ಆ್ಯಂಕರ್ ಅನುಶ್ರೀ

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.
Published by:Divya D
First published: