Coffee Nadu Chandu: ಆ್ಯಂಕರ್ ಅನುಶ್ರೀಗೆ ಸ್ಪೆಷಲ್ ರಿಕ್ವೆಸ್ಟ್ ಮಾಡಿದ ಕಾಫಿ ನಾಡು ಚಂದು! ಚಂದು ಅಣ್ಣ ಏನೋ ನಿನ್ ಕಥೆ?

ಕಾಫಿ ನಾಡು ಚಂದು ಆ್ಯಂಕರ್​ ಅನುಶ್ರೀ ಅವರ ಬಳಿ ವಿಶೇಷ ಮನವಿ ಮಾಡಿದ್ದು, ಈ ಮನವಿಯನ್ನು ಅನುಶ್ರೀ ಅವರು ಈಡೇರಿಸುತ್ತಾರೆಯೇ ಎಂದು ಕಾದು ನೊಡಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕದಲ್ಲಿ (Karnataka)  ಸೋಷಿಯಲ್ ಮೀಡಿಯಾ ಸೆನ್ಸೇಷನಲ್​​ ಸ್ಟಾರ್​ ಎಂದರೆ ಅದು ಕಾಫಿ ನಾಡು ಚಂದು (Coffeenadu Chandu) . ಇವರ ವಿಭಿನ್ನ ಶೈಲಿಯ ಹಾಡುಗಾರಿಕೆ (Singing Style) ಎಲ್ಲೆಡೆ ಫೇಮಸ್ ಆಗಿದೆ. ಇವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳು (Fans) ಸಹ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಸೆಲೆಬ್ರಿಟಿಗಳನ್ನು ಸಹ ಮೀರಿಸಿದ್ದು ಹೆಚ್ಚಿನ ಫಾಲೋವರ್ಸ್​ ಇದ್ದಾರೆ. ಸದ್ಯ ಅವರಿಂದ ಬರ್ತ್ ಡೇ ವಿಶ್​ (Birthday Wish) ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಇದರ ಜೊತೆಗೆ ಇದೀಗ ಡ್ಯಾನ್ಸ್ (Dance) ಸಹ ಮಾಡುತ್ತಿದ್ದು, ಅವರ ಡ್ಯಾನ್ಸ್​ನ ಮೊದಲ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮತ್ತೊಂದು ವಿಡಿಯೋ ಮಾಡಿದ್ದು, ಆ್ಯಂಕರ್​ ಅನುಶ್ರೀ  (Anchor Anushree) ಅವರ ಬಳಿ ವಿಶೇಷ ಮನವಿ ಮಾಡಿದ್ದು, ಈ ಮನವಿಯನ್ನು ಅನುಶ್ರೀ ಅವರು ಈಡೇರಿಸುತ್ತಾರೆಯೋ ಎಂದು ಕಾದು ನೊಡಬೇಕಿದೆ.

ಶಿವಣ್ಣನನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ ಕಾಫಿ ನಾಡು ಚಂದು:

ಹೌದು, ಈಗಾಗಲೇ ಸಾಮಾಜಿಕ ಜಾಲತಾಣದ ಸೂಪರ್​ ಸ್ಟಾರ್​ ಆಗಿರುವ ಕಾಫಿ ನಾಡು ಚಂದು ಅವರ ಹಾಡಿಗೆ ಲಕ್ಷಗಟ್ಟಲೇ ಪಾಲೋವರ್ಸ್​ಗಳು ಸೃಷ್ಟಿಯಾಗಿದ್ದಾರೆ. ಅಲ್ಲದೇ ಅವರ ಹುಟ್ಟುಬ್ಬದ ಹಾಡಿಗೆ ವಿಶೇಷ ಅಭಿಮಾನಿ ಬಳಗವೇ ಹುಟ್ಟುಕೊಂಡಿದೆ ಎಂದರೂ ತಪ್ಪಾಗಲಾರದು. ಇದರ ನಡುವೆ ಕಾಫಿ ನಾಡು ಚಂದು ವಿಡಿಯೋ ಆರಂಭದಲ್ಲಿ ‘ತಾನು ಶಿವಣ್ಣ ಪುನೀತ್​ ಅಣ್ಣನವರ ಅಭಿಮಾನಿ‘ ಎಂದು ಹೇಳುತ್ತಾರೆ. ಹೀಗಾಗಿ ಇದೀಗ ಅವರು ಆ್ಯಂಕರ್​ ಅನುಶ್ರೀ ಅವರ ಬಳಿ ಕರುನಾಡ ಚರ್ಕವರ್ತಿ ಶಿವರಾಜ್​ ಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ವಿಶೇಷ ಹಾಡಿನ ಮೂಲಕ ಮನವಿ ಮಾಡಿದ್ದಾರೆ. ಈ ಮನವಿಗೆ ಇದೀಗ ಅನುಶ್ರೀ ಅವರು ಸ್ಪಂದಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.






ಹಾಡು ಆಯ್ತು ಇದೀಗ ಡ್ಯಾನ್ಸ್:

ಇಷ್ಟು ದಿನಗಳವರೆಗೆ ಬರ್ತಡೇ ಸಾಂಗ್​ ಮಾಡುತ್ತಿದ್ದ ಕಾಫಿ ನಾಡು ಚಂದು ಅವರು ಇದೀಗ ಡ್ಯಾನ್ಸ್ ಸಹ ಮಾಡಿದ್ದಾರೆ. ಹೌದು, ಡಾಲಿ ಧನಂಜಯ್​ ಅಭಿನಯದ ‘ಮಾನ್ಸೂನ್​ ರಾಗ‘ ಚಿತ್ರದ ಹಾಡಿಗೆ ರೀಲ್ಸ್ ಮಾಡಿರುವ ಚಂದು ಅವರು ಮೊದಲ ಬಾರಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ ಸಖತ್ ವೈರಲ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಚಂದು ಅಣ್ಣ ಹಾಡಿನ ಜೊತೆ ಡ್ಯಾನ್ಸ್ ಸಹ ಮಾಡಲಾರಂಭಿಸಿದ್ದಾರೆ.






ನಟಿ ಅಮೃತಾ ಅಯ್ಯಂಗಾರ್​ಗೆ ವಿಶ್​ ಮಾಡಿದ ಕಾಫಿನಾಡು ಚಂದು:

ಹೌದು, ಇಷ್ಟು ದಿನಗಳ ಕಾಲ ಸಾಮನ್ಯವಾಗಿ ಹುಟ್ಟುಹಬ್ಬದ ವಿಶ್​ ಮಾಡುತ್ತಿದ್ದ ಕಾಫಿ ನಾಡು ಚಂದು ಇದೀಗ ಸೆಲೆಬ್ರಿಟಿಗಳಿಗೂ ಜನ್ಮದಿನದ ವಿಶ್​ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅವರು ನಟಿ ಅಮೃತಾ ಅಯ್ಯಂಗಾರ್​ ಅವರ ಹುಟ್ಟುಹಬ್ಬಕ್ಕೆ ಹಾಡು ಹೇಳುವ ಮೂಲಕ ವಿಶ್​ ಮಾಡಿದ್ದರು.

ಇದನ್ನೂ ಓದಿ: Coffee Nadu Chandu: ಅಮೃತಾ ಅಯ್ಯಂಗಾರ್​ ಬರ್ತ್​ ಡೇಗೆ ಸಿಕ್ತು ಬಿಗ್​ ಗಿಫ್ಟ್​ , ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನಟಿ

ಈ ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ. ಇವರು ಫೇಮಸ್​ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್​ ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್​ ಪಡೆಯುತ್ತದೆ.
Published by:shrikrishna bhat
First published: