ಕಾಫಿ ನಾಡು ಚಂದುವನ್ನು (Coffe Nadu Chandu) ತಿಳಿಯದವರಿಲ್ಲ. ಬರ್ತ್ಡೇಗಳಿಗೆ (Birthday) ವಿಶ್ ಮಾಡುತ್ತಲೇ ಕಾಫಿ ನಾಡು ಚಂದು ದಿಢೀರ್ ಫೇಮಸ್ ಆಗಿಬಿಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ (Puneeth Rajkumar) ಹಾಗೂ ಶಿವರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ (Fans) ಚಿಕ್ಕಮಗಳೂರಿನ ಕಾಫಿ ನಾಡು ಚಂದು ಇನ್ಸ್ಟಾಗ್ರಾಮ್ನಲ್ಲಿ (Instagram) ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ವಿಭಿನ್ನವಾಗಿ ವಿಡಿಯೋ (Video) ಕಂಟೆಂಟ್ಗಳನ್ನು ಮಾಡಿ ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡುತ್ತಿದ್ದ ಕಾಫಿ ನಾಡು ಚಂದು ಈಗ ಹೊಸ ವರ್ಷದ ಪ್ರಯುಕ್ತ ಹೊಸ ಬರ್ತ್ಡೇ ಸಾಂಗ್ (Birthday Song) ಮಾಡಿದ್ದಾರೆ.
ವಿಡಿಯೋ ಶೇರ್ ಮಾಡಿದ ಚಂದು
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ ಚಂದು ಈ ವರ್ಷದಿಂದ ಹೊಸ ಟ್ಯೂನ್ ಹಾಡು ಹಾಡುವುದಾಗಿ ತಿಳಿಸಿದ್ದಾರೆ. ಹ್ಯಾಪಿ ಬರ್ತ್ಡೇ ಎಂದು ಶುಭಾಶಯ ತಿಳಿಸುತ್ತಿದ್ದ ಹಾಡಿಗೆ ಅದರದ್ದೇ ಯುನಿಕ್ ಟ್ಯೂನ್ ಹಾಗೂ ಲಿರಿಕ್ಸ್ ಇತ್ತು. ಈಗ ಅದನ್ನು ಚಂದು ಬದಲಾಯಿಸಿದ್ದಾರೆ.
ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ, ಕರ್ನಾಟಕದ ಜನತೆಗೆ ಕಾಫಿ ನಾಡು ಚಂದು ಮಾಡೋ ನಮಸ್ಕಾರಗಳು. ಹೊಸ ವರ್ಷಕ್ಕೆ ಹೊಸ ಬರ್ತ್ಡೇ ಸಾಂಗ್ ಮಾಡುತ್ತಿದ್ದೀನಿ. ಈವರೆಗೆ ಒಂದು ಲಕ್ಷದ 86 ಸಾವಿರ ಬರ್ತ್ಡೆ ಸಾಂಗ್ ಆಗಿದೆ. ಈಗ ಹೊಸ ಬರ್ತ್ಡೇ ಸಾಂಗ್ ಮಾಡುತ್ತಿದ್ದು ಪುನೀತಣ್ಣ, ಶಿವಣ್ಣ ಅವರ ಬರ್ತ್ಡೇಯಿಂದಲೇ ಆರಂಭಿಸುತ್ತೇನೆ. ಕಾಫಿಯ ನಾಡಲ್ಲಿ, ಹುಟ್ಟಿದೆ ನಾನಿಲ್ಲಿ, ಕಾಫಿಯ ನಾಡಲ್ಲಿ, ಓಹೋ ಬರ್ತ್ಡೇ ಪುನೀತಣ್ಣನ ಬರ್ತ್ಡೇ, ಆಹಾ ಬರ್ತ್ಡೇ ಶಿವಣ್ಣನ ಬರ್ತ್ಡೇ ಎಂದು ಹಾಡಿದ್ದಾರೆ ಕಾಫಿ ನಾಡು ಚಂದು.
ಟ್ಯೂನ್ ಚೇಂಜ್
ಈ ಬಾರಿ ಹಾಡಿನ ಟ್ಯೂನ್ ಬದಲಾಯಿಸಲಾಗಿದೆ. ಸ್ವಲ್ಪ ರಾಗವಾಗಿ ಎಳೆಯುವ ರೀತಿ ಇರೋ ಈ ಹೊಸ ಟ್ಯೂನ್ನಲ್ಲಿ ಮೊದಲಿಗೆ ಶಿವಣ್ಣ ಹಾಗೂ ಪುನೀತ್ ರಾಜ್ಕುಮಾರ್ ಅವರ ಹೆಸರಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ.
View this post on Instagram
ಇದರಲ್ಲೇನೂ ಬದಲಾಗಿಲ್ಲ. ಅದೇ ಹಾಡಿದು ಎಂದು ತುಂಬಾ ಜನರು ಕಮೆಂಟ್ ಮಾಡಿದ್ದಾರೆ. ಇನ್ನೊಂದಷ್ಟು ಜನರು ಕಾಫಿ ನಾಡು ಚಂದು ಶೇವಿಂಗ್ ಸ್ಟೈಲ್ ನೋಡಿಕೊಂಡು ಸೂಪರ್ ಆಗಿದೆ. ಎಲ್ಲಿ ಮಾಡಿಸಿಕೊಂಡಿದ್ದು ಎಂದು ಕೇಳಿದ್ದಾರೆ.
ಇದನ್ನೂ ಓದಿ: Vedha-Coffee Nadu Chandu: ವೇದ ಸಿನಿಮಾ ವಿಶೇಷವಾಗಿ ಪ್ರಮೋಟ್ ಮಾಡಿದ ಕಾಫಿ ನಾಡು ಚಂದು
ಕಾಫಿನಾಡಿನ ಚಂದು ಹಿನ್ನೆಲೆ ಏನು?
ಮನಸ್ಸಿಗೆ ಬಂದಥ ಹಾಡು, ಮನಸ್ಸಿಗೆ ಬಂದತಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್ ಆದ ಈ ಚಂದು ಮೊದಲು ಇನ್ಸ್ಟಾಗ್ರಾಮ್ನಲ್ಲಿ ಸ್ನೇಹಿತರಿಗೆ ಬರ್ತ್ಡೇಗೆ ವಿಶ್ ಮಾಡುತ್ತಿದ್ದರು. ಇವರ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.
ಕಾಫಿನಾಡಿನ ಚಂದುಗೆ ಇನ್ಸ್ಟಾಗ್ರಾಮ್ನಲ್ಲಿ ಸದ್ಯಕ್ಕೆ 1 ಲಕ್ಷದ 24 ಸಾವಿರ ಜನ ಫಾಲೋವರ್ಸ್ ಇದ್ದಾರೆ. ಇದು ನಿಜಕ್ಕೂ ಮೆಚ್ಚುವಂಥ ಕಾರ್ಯವೇ. ಇವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆಯ ಭಾಗದ ಮಲ್ಲಂದೂರಿನ ಭಾಗಮನೆ ಆಸುಪಾಸಿನವರು ಎನ್ನಲಾಗಿದೆ. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಊರಿನವರಂತೆ. ಇದು ಇನ್ನೊಂದು ವಿಶೇಷ.
ಈಗ ಸ್ವಲ್ಪ ಅವರ ಕ್ರೇಜ್ ಕಡಿಮೆಯಾಗಿದೆ. ಆದರೂ ಕಾಫಿ ನಾಡು ಚಂದು ಕೈಯಲ್ಲಿ ಜನರು ಈಗಲೂ ವಿಶ್ ಮಾಡಿಸಿಕೊಳ್ಳುತ್ತಿದ್ದಾರೆ. ಮೊದಲಿನಷ್ಟು ಕ್ರೇಜ್ ಇರದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ