Coffee Nadu Chandu: ಕೊನೆಗೂ ಆಸೆ ಈಡೇರಿಸಿಕೊಂಡ ಕಾಫಿ ನಾಡಿನ ಚಂದು! ಶಿವಣ್ಣ ಕಂಡು ಕುಣಿದು, ಕುಪ್ಪಳಿಸಿದ ವೈರಲ್​ ಸ್ಟಾರ್​

ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಕಳೆದ ಕೆಲವು ದಿನಗಳ ಹಿಂದೆ ಕಾಫಿ ನಾಡಿನ  ಚಂದು ಶಿವಣ್ಣ ಅವರನ್ನು ನೋಡಬೇಕು ಅಂತ ಮನವಿ ಮಾಡಿಕೊಂಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಕಳೆದ ಕೆಲವು ದಿನಗಳ ಹಿಂದೆ ಕಾಫಿ ನಾಡಿನ  ಚಂದು ಶಿವಣ್ಣ ಅವರನ್ನು ನೋಡಬೇಕು ಅಂತ ಮನವಿ ಮಾಡಿಕೊಂಡಿದ್ದರು.

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ  ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.



ಚಂದು ಹೇಳಿದ ಹಾಡು ಕೇಳಿ ಶಿವಣ್ಣ ಕೂಡ ಚಪ್ಪಾಳೆ ತಟ್ಟಿದ್ದಾರೆ. ಶೂಟಿಂಗ್​ ವೇಳೆ ಮೊಬೈಲ್​ನಲ್ಲಿ ಸೆರೆಯಾದ ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಲೀಕ್​ ಆಗಿದೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ



ಶುರುವಾಯ್ತು ಹೊಸ ಅಭಿಯಾನ!

ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಉದಯ್ ಸೂರ್ಯ ಅವರ ತಬ್ಬಿಕೊಳ್ಳೋ ಅಭ್ಯಾಸದಿಂದ ಮನೆ ಮಂದಿ ಸುಸ್ತು!

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗ್ತಾರಾ ಚಂದು ಅಣ್ಣ?

ಹೌದು, ಬಿಗ್​ಬಾಸ್​ ಮನೆಗೆ ಚಂದು ಹೋಗುವುದು ಖಚಿತ ಅಂತ ಜನರು ಕೂಡ ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚಂದು ಎಲ್ಲರ ಬಳಿ ತೆರಳಿ ತನ್ನನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವಂತೆ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರೆ. ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಕಾಫಿ ನಾಡಿನ ಚಂದು ಶುರು ಮಾಡಿದ್ದಾರಂತೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ.
Published by:Vasudeva M
First published: