Coffee Nadu Chandu: ಆ್ಯಂಕರ್ ಅನುಶ್ರೀ ಜೊತೆ ಮಿಂಚಿದ ಕಾಫಿ ನಾಡು ಚಂದು, ಸ್ಪೆಷಲ್ ಹಾಡು ಹೀಗಿದೆ

Coffee Nadu Chandu: ಕಾಫಿ ನಾಡು ಚಂದು ಅವರು ಆ್ಯಂಕರ್ ಅನುಶ್ರೀ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಅನುಶ್ರೀಗಾಗಿ ವಿಶೇಷ ಹಾಡೊಂದನ್ನು ಹಾಡಿದ್ದಾರೆ.

ಕಾಫಿ ನಾಡು ಚಂದು

ಕಾಫಿ ನಾಡು ಚಂದು

  • Share this:
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (Social media) ಸಖತ್ ವೈರಲ್ ಆಗಿರುವ ಕಾಫಿ ನಾಡು ಚಂದು (Coffee Nadu Chandu) ಅವರಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral) ಆಗಿದ್ದು ಇವರ ವಿಡಿಯೋ, ರೀಲ್ಸ್​ಗಳು ಜನರನ್ನು ರಂಜಿಸುತ್ತಿವೆ. ಕಾಫಿ ನಾಡು ಚಂದು ಕೈಯಲ್ಲಿ ವಿಶ್ ಮಾಡಿಸಿಕೊಳ್ಳಲು ಜನರು ಮುಗಿಬೀಳುತ್ತಾರೆ. ಈಗ ಕಾಫಿ ನಾಡು ಚಂದು ಕನ್ನಡದ ಪ್ರಸಿದ್ಧ ಆ್ಯಂಕರ್ (Anchor) ಅನುಶ್ರೀ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಸೆಲ್ಫೀ ವಿಡಿಯೋ (Selfie Video) ಮಾಡಿ ಅನುಶ್ರೀ ಬಗ್ಗೆ ಕಾಫಿ ನಾಡು ಚಂದು ಹಾಡನ್ನು ಹಾಡಿದ್ದಾರೆ. ಅನುಶ್ರೀ ಅವರು ಈ ವಿಡಿಯೋದಲ್ಲಿ ಫುಲ್ ಹ್ಯಾಪಿಯಾಗಿ ಚಂದುಗೆ ಕಂಪನಿ ಕೊಟ್ಟಿದ್ದಾರೆ.

ನನ್ನ ಜೊತೆ ಇದ್ದಾರೆ ಆ್ಯಂಕರಿಂಗ್ ಅನುಶ್ರೀ ಅಕ್ಕ ಎಂದು ವಿಡಿಯೋ ಶುರು ಮಾಡುವ ಕಾಫಿ ನಾಡು ಚಂದು ಚಂದದ ಹಾಡನ್ನು ಹಾಡಿದ್ದಾರೆ. ಕಾಫಿನಾಡು ಚಂದು ಮಾಡೋ ಅಭಿನಂದನೆ ಎನ್ನುವ ಮೂಲಕ ಹಾಡು ಕೊನೆಗೊಳಿಸಿದ್ದಾರೆ. ನಂತರದಲ್ಲಿ ಕಾಫಿನಾಡು ಚಂದು ತಮ್ಮನ್ನು ತಾವೇ ಹೊಗಳಿರುವುದನ್ನು ಕಾಣಬಹುದು. ಕಾಫಿನಾಡಲಿ ಇಇ ಅನುಶ್ರೀ ಅಕ್ಕ, ಹ್ಯಾಪಿ ಬರ್ತ್​ಡೇ ಎಂದಿದ್ದಾರೆ.

ತಮ್ಮನ್ನು ತಾವೇ ಹಾಡಿನಲ್ಲಿ ಹೊಗಳಿಕೊಂಡ ಕಾಫಿನಾಡು ಚಂದು

ದುಬೈನಲ್ಲಿ ನೋಡಿದ್ರು ಚಂದು ಚಂದು, ಹೈದರಾಬಾದ್​ನಲ್ಲೂ ಚಂದೂ, ಚಿಕ್ಕಮಗಳೂರು ಕಾಫಿ ನಾಡೆ ನಾನು ಚಂದು ಎಂದು ಅವರು ಹಾಡಿದ್ದಾರೆ.






ಸೋಷಿಯಲ್ ಮೀಡಿಯಾದಲ್ಲಿ ಭಾರೀ ಫಾಲೋವರ್ಸ್

ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಕಾಫಿ ನಾಡು ಚಂದು ಅವರಿಗೆ 363 ಸಾವಿರ ಫಾಲೋವರ್ಸ್ ಇದ್ದಾರೆ. ಇಲ್ಲಿಯವರೆಗೆ 318 ಪೋಸ್ಟ್​ಗಳನ್ನು ಮಾಡಿರುವ ಕಾಫಿ ನಾಡು ಚಂದು 3860 ಜನರನ್ನು ಫಾಲೋ ಮಾಡುತ್ತಾರೆ.

ತಮ್ಮ ನೆಚ್ಚಿನ ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಚಂದು

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಇದನ್ನೂ ಓದಿ: Coffee Nadu Chandu: ಕೊನೆಗೂ ಆಸೆ ಈಡೇರಿಸಿಕೊಂಡ ಕಾಫಿ ನಾಡಿನ ಚಂದು! ಶಿವಣ್ಣ ಕಂಡು ಕುಣಿದು, ಕುಪ್ಪಳಿಸಿದ ವೈರಲ್​ ಸ್ಟಾರ್

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.






ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.
Published by:Divya D
First published: