Coffee Nadu Chandu: ಅಪ್ಪು ಕುರಿತು ಸೆಲ್ಫೀ ವಿಡಿಯೋ, ಗಳಗಳನೆ ಅತ್ತ ಕಾಫಿ ನಾಡು ಚಂದು

ಸದ್ಯ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಸೌಂಡ್ ಮಾಡುತ್ತಿರುವ ಚಂದು ಅವರ ಇತ್ತೀಚಿನ ವಿಡಿಯೋ ಪುನೀತ್ ಅವರ ಕುರಿತಾಗಿದೆ.

ಕಾಫಿ ನಾಡು ಚಂದು

ಕಾಫಿ ನಾಡು ಚಂದು

  • Share this:
ಕಾಫಿ ನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿರುವ ವ್ಯಕ್ತಿ. ತನ್ನ ಯುನಿಕ್ ವಿಡಿಯೋಗಳಿಂದ (Video) ಜನರನ್ನು ಸೆಳೆಯುತ್ತಿರುವ ಕಾಫಿ ನಾಡು ಚಂದು (Coffee Nadu chandu) ವಿಡಿಯೋಗಳನ್ನು  ಬಹಳಷ್ಟು ಜನರು ಇಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಚಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಇದೀಗ ಅವರ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ವಿಡಿಯೋಗಳಿಗೆ ನೆಟ್ಟಿಗರು ಲೈಕ್ಸ್ ಕೊಟ್ಟು ಕಮೆಂಟ್ ಮಾಡಿ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ಬಹಳಷ್ಟು ವಿಡಿಯೋಗಳನ್ನು ಕಾಫಿ ನಾಡು ಚಂದು ಶೇರ್ ಮಾಡಿದ್ದು ಇವುಗಳಲ್ಲಿ ಬಹುತೇಕ ವಿಡಿಯೋ ಅವರ ಸ್ವಂತ ಕಂಟೆಂಟ್​ಗಳಾಗಿವೆ. ಸದ್ಯ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಸೌಂಡ್ ಮಾಡುತ್ತಿರುವ ಚಂದು ಅವರ ಇತ್ತೀಚಿನ ವಿಡಿಯೋ ಪುನೀತ್ ಅವರ ಕುರಿತಾಗಿದೆ.

ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ. ನನ್ನ ನಗುವು ಎಷ್ಟೋ ಜನರಿಗೆ ಖುಷಿ ಕೊಡುತ್ತೆ. ಕರ್ನಾಟಕದ ಜನರಿಗೆ ತಲುಪುತ್ತದೆ. ಆದರೆ ನನ್ನ ಅಳುವು ನನ್ನ ಪುನೀತಣ್ಣ ನನ್ನ ತಾಯಿಗೆ ತಲುಪುತ್ತದೆ. ಯಾಕೆಂದರೆ ಪುನೀತಣ್ಣ ಸಮಾಧಿ ಹತ್ರ ಮಣ್ ಮುಟ್ಟಿದ್ದೀನಿ, ನಮ್ ತಾಯಿ ಸಮಾಧಿ ಮಣ್ಣು ಮುಟ್ಟಿದ್ದೀನಿ. ನನಗೆ ನೋವಾಗುತ್ತಿದೆ.

ಅಣ್ಣಾ ಅಣ್ಣಾ ಐ ಲವ್ ಯೂ

ಆ ನೋವು ನಿಮಗೆಲ್ಲರಿಗೂ ಗೊತ್ತಿರುತ್ತದೆ. ಸಾವಿಲ್ಲ, ನೋವೆಲ್ಲ ನನಗೆ ಎಲ್ಲ. ಅಮ್ಮ ಎಂದು ಕರೆದಾಗ ಬರಲೇ ಇಲ್ಲ ಎಂದು ಹಾಡಿರೋ ಚಂದು ಅಣ್ಣಾ ಅಣ್ಣಾ ಎಂದು ತಮ್ಮ ಗಾಗಲ್ಸ್ ತೆಗೆದು ಅತ್ತಿದ್ದಾರೆ. ಅಣ್ಣಾ ಅಣ್ಣಾ ಐ ಲವ್ ಯೂ, ಅಮ್ಮಾ ಅಮ್ಮಾ ಐ ಲವ್ ಯೂ ಎಂದಿದ್ದಾರೆ.






ನೋಡುತ್ತಾ ನೋಡುತ್ತಾ ಬಂದೆ, ಹಾಡುತ್ತ ಹಾಡುತ್ತ ಬಂದೆ. ನನ್ ಪಾಡಿಗೆ ನಾನ್ ದುಡೀತಾ ಇದ್ದೀನಿ, ಆಟೋ ರಾಜ ಆಗಿ ದುಡಿತಾ ಇದ್ದೀನಿ, ಅಣ್ಣಾ.. ಅಣ್ಣಾ ಎಂದು ಅಳುವ ಮೂಲಕ ಚಂದು ವಿಡಿಯೋ ಮುಗಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಚಂದು ಅವರ ಲೇಟೆಸ್ಟ್ ವಿಡಿಯೋ ಈಗಾಗಲೇ 53,136 ಲೈಕ್ಸ್ ಪಡೆದುಕೊಂಡಿದೆ. 285 ಸಾವಿರ ವ್ಯೂಸ್ ಗಳಿಸಿದ್ದು  54.4 ಸಾವಿರ ಲೈಕ್ಸ್ ಗಳಿಸಿದೆ. ಈ ವಿಡಿಯೋಗೆ 592ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Coffee Nadu Chandu: ಅರ್ಜುನ್ ಜನ್ಯರನ್ನೇ ಹಿಂದಿಕ್ಕಿದ ಕಾಫಿನಾಡಿನ ಸಿಂಗರ್! ಚಂದು ಅಣ್ಣ ಚಂದು ಅಣ್ಣ ಏನೋ ಹವಾ ನಿಂದು!

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಇದನ್ನೂ ಓದಿ: Bigg Boss OTT: ಬಿಗ್​ಬಾಸ್​ ಮನೆಗೆ ಕಾಫಿನಾಡು ಚಂದು? ಕುತೂಹಲದಿಂದ ಕಾಯ್ತಿದ್ದಾರೆ ಫ್ಯಾನ್ಸ್

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.
Published by:Divya D
First published: