Bigg Boss OTT: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ

Coffee Nadu Chandu: ಬಿಗ್​ಬಾಸ್​ ಓಟಿಟಿ ಆರಂಭವಾಗುತ್ತಿರುವ ಸುದ್ದಿ ಹೊರ ಬಂದ  ಸಮಯದಿಂದ ಕಾಫಿನಾಡು ಚಂದು ಬಿಗ್​ಬಾಸ್​ಗೆ ಹೋಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್​ 1 (Bigg Boss OTT Kannada season 1) ಆರಂಭವಾಗಿದೆ. ಬಿಗ್​ಬಾಸ್​ ಅಭಿಮಾನಿಗಳಂತೂ (Fans)  ಕಾರ್ಯಕ್ರಮವನ್ನು ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು.  ಈ ಬಾರಿ ಯಾರೆಲ್ಲಾ ಮನೆಯ ಒಳಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿ ಬಹಳ ದಿನಗಳಾಗಿತ್ತು. ಅದಕ್ಕೆಲ್ಲಾ ನಿನ್ನೆ ಸಂಜೆ ಉತ್ತರ ಲಭಿಸಿದೆ. ಸುಮಾರು 16 ಸ್ಪರ್ಧಿಗಳು ಮನೆಯ ಒಳಗೆ ಹೋಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ (Social Media Star) ಸ್ಟಾರ್ ಕಾಫಿನಾಡು ಚಂದು (Coffee Nadu Chandu) ಬಿಗ್​ಬಾಸ್​ಗೆ ಹೋಗದಿರುವುದು ಚಂದು ಅಭಿಮಾನಿಗಳಿಗೆ ಬೇಸರವಾಗಿದೆ.

ಬಿಗ್​ಬಾಸ್​ ಮನೆಗೆ ಹೋಗಿಲ್ಲ ಚಂದು

ಹೌದು, ಬಿಗ್​ಬಾಸ್​ ಓಟಿಟಿ ಆರಂಭವಾಗುತ್ತಿರುವ ಸುದ್ದಿ ಹೊರ ಬಂದ  ಸಮಯದಿಂದ ಕಾಫಿನಾಡು ಚಂದು ಬಿಗ್​ಬಾಸ್​ಗೆ ಹೋಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಅವರು ಹೋಗೋದು ಪಿಕ್ಸ್ ಆಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕಾಫಿನಾಡು ಚಂದು ಅಭಿಮಾನಿಗಳು ಸಹ ಬಿಗ್​ಬಾಸ್​ ಮನೆ ಒಳಗೆ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಈ ಬಾರಿ ಚಂದು ಬಿಗ್​ಬಾಸ್​ಗೆ ಹೋಗಿಲ್ಲ.




ಇನ್ನು ಈ ಬಾರಿ ಬಿಗ್​ಬಾಸ್​ ಓಟಿಟಿ ಮೊದಲ ಸೀಸನ್​ ಆಗಿದೆ. ಇದು ಕೇವಲ ವೂಟ್​ ಆ್ಯಪ್​ನಲ್ಲಿ ಲಭ್ಯವಿದೆ. ಹಾಗಾಗಿ ಪ್ರತಿಯೊಬ್ಬರಿಗೂ ನಿನ್ನೆಯ ಕಾರ್ಯಕ್ರಮ ನೋಡಲು ಸಾಧ್ಯವಾಗಿಲ್ಲ. ಬಹುತೇಕ ಜನರು ಕಾಫಿನಾಡು ಚಂದು ಒಳಗೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಲ ವಿಡಿಯೋ ಹಾಗೂ ಸ್ಟೋರಿ ಅಪ್​ಲೋಡ್​ ಆಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಗೊಂದಲ ಉಂಟಾಗಿದೆ. ಆ ವಿಡಿಯೋಗಳನ್ನು ಬೇರೆ ಅವರಿಗೆ ಹಾಕಲು ಹೇಳಿರಬಹುದು, ಅವರು ಮನೆ ಒಳಗೆ ಇದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಅವರು ಹೋಗಿಲ್ಲ ಎಂಬ ವಿಚಾರ ತಿಳಿದು ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ​ಮನೆ ಒಳಗೆ ರೋಡೀಸ್​ ಜೋಡಿ, ಜಶ್ವಂತ್ - ನಂದು ಮಾಡ್ತಾರಾ ಮೋಡಿ?




ಅಭಿಮಾನಿಗಳಿಗೆ ಬೇಸರ

ಕೆಲವರು ಅವರೂ ಮನೆಯ ಒಳಗೆ ಹೋಗಬೇಕಿತ್ತು ಎಂದು ಹೇಳುತ್ತಿದ್ದಾರೆ.  ಇನ್ನು ನಿನ್ನೆಯಿಂದ ಬಿಗ್​ಬಾಸ್​ ಓಟಿಟಿ ಆರಂಭವಾಗಿದ್ದು, 16 ಮಂದಿ ಮನೆಗೆ ಎಂಟ್ರಿ ಪಡೆದಿದ್ದಾರೆ. ಈ ಬಾರಿ ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಸ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿದ್ದಾರೆ.

ಇದನ್ನೂ ಓದಿ: ಒಂಟಿ ಮನೆಯಲ್ಲಿ 16 ಮಂದಿ ಲಾಕ್​, ಇಲ್ಲಿದೆ ನೋಡಿ ಫೋಟೋಸ್​

ಈ ಕಾಫಿ ನಾಡು ಚಂದು ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್​. ನೀವು ಯಾವುದೇ ಮೀಮ್ ಪೇಜ್ , ಟ್ರೋಲ್ ಪೇಜ್ ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ. ಈಗ ಸುದ್ದಿ ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಆಗಿರುವ ಕಾಫಿನಾಡು ಚಂದು ಇನ್ಸ್ಟಾಗ್ರಾಂನಲ್ಲಿ ಸಹ ಹವಾ ಎಬ್ಬಿಸಿದ್ದಾರೆ.
Published by:Sandhya M
First published: