Coffee Nadu Chandu: ಕಾಫಿ ನಾಡು ಚಂದು ಇನ್​​ಸ್ಟಾಗ್ರಾಂ ಅಕೌಂಟ್ ಹ್ಯಾಕ್!

Coffee nadu chandu: ಕಾಫಿ ನಾಡು ಚಂದು ಅವರ ಇನ್​ಸ್ಟಾಗ್ರಾಮ್ ಎಕೌಂಟ್ ಹ್ಯಾಕ್ ಮಾಡಲಾಗಿದೆ. ಸ್ವಪ್ರತಿಭೆಯಿಂದ ನೆಟ್ಟಿಗರ ರಂಜಿಸುತ್ತಿದ್ದ ಕಾಫಿ ನಾಡು ಚಂದು ಇನ್​​ಸ್ಟಾಗ್ರಾಮ್ ಎಕೌಂಟ್ ಈಗ ಕಾಣಿಸುತ್ತಿಲ್ಲ.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಕಾಫಿ ನಾಡು ಚಂದು (Coffee Nadu chandu) ತಮ್ಮದೇ ಆದ ಶೈಲಿ, ಡಿಫರೆಂಟ್ ಕಾನ್ಸೆಪ್ಟ್ ಮೂಲಕ ನೆಟ್ಟಿಗರನ್ನು ರಂಜಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ  (Social Media) ಸ್ವಪ್ರತಿಭೆಯಿಂದ ಬೆಳೆದು ಬಂದ ಕಾಫಿ ನಾಡು ಚಂದು ಈಗ ಕರ್ನಾಟಕ (Karnataka) ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದ್ದಾರೆ. ನಾನು ಶಿವಣ್ಣ-ಪುನೀತಣ್ಣನ ಅಭಿಮಾನಿ ಎಂದು ವಿಡಿಯೋ ಶುರು ಮಾಡುವ ಕಾಫಿ ನಾಡು ಚಂದು ಈಗ ಸಖತ್ ವೈರಲ್ (Viral). ತನ್ನದೇ ಆದ ಸ್ಟೈಲ್​​ನಲ್ಲಿ ವಿಡಿಯೋಗಳನ್ನು (Videos) ಮಾಡಿ ರೀಲ್ಸ್​ಗಳನ್ನು ಶೇರ್ ಮಾಡುವ ಕಾಫಿ ನಾಡು ಚಂದು ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆಯ ಇನ್​ಸ್ಟಾಗ್ರಾಮ್ (Instagram) ಖಾತೆ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು ಈಗ ಅವರ ಎಕೌಂಟ್ ಹ್ಯಾಕ್ ಮಾಡಲಾಗಿದೆ.

ಕಾಫಿನಾಡು ಚಂದು ಖಾತೆ ಹ್ಯಾಕ್ ಮಾಡಲಾಗಿದ್ದು ಮೂರೂವರೆ ಲಕ್ಷ ಜನ ಫಾಲೋವರ್ಸ್ ಇದ್ದ ಕಾಫಿ ನಾಡು ಚಂದು ಪೇಜ್ ಕಾಣಿಸುತ್ತಿಲ್ಲ. ಹಳ್ಳಿ ಹುಡುಗನೊಬ್ಬ ಸ್ವಂತ ಪ್ರತಿಭೆಯಿಂದ ಲಕ್ಷಾಂತರ ಜನರನ್ನು ತಲುಪಿದ್ದು ಸಣ್ಣ ಸಾಧನೆಯೇನಲ್ಲ. ಸಿಕ್ಕಾಪಟ್ಟೆ ಸ್ಪರ್ಧೆ ಇರುವ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸಾವಿರ ಫಾಲೋವರ್ಸ್​ಗಳನ್ನು ಗಳಿಸುವುದೇ ಸವಾಲು. ಹಾಗಿರುವಾಗ ಇಷ್ಟೊಂದು ಫಾಲೋವರ್ಸ್​ಗಳನ್ನು ಪಡೆದ ಚಂದು ಎಕೌಂಟ್ ಹ್ಯಾಕ್ ಮಾಡಿರುವ ಬಗ್ಗೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Coffee Nadu Chandu: ಅರೇ, ಇಲ್ನೋಡ್ರಿ ಜೂನಿಯರ್ ಕಾಫಿ ನಾಡು ಚಂದು! ಸೇಮ್​ ಹಂಗೆ ಅವ್ರಲ್ಲ ಗುರೂ, ಜನ ಸೆಲ್ಫಿಗೂ ಮುಗಿಬಿದ್ರಂತೆ

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: Coffee Nadu Chandu: ಕೊನೆಗೂ ಆಸೆ ಈಡೇರಿಸಿಕೊಂಡ ಕಾಫಿ ನಾಡಿನ ಚಂದು! ಶಿವಣ್ಣ ಕಂಡು ಕುಣಿದು, ಕುಪ್ಪಳಿಸಿದ ವೈರಲ್​ ಸ್ಟಾರ್​

ಕಾಫಿ ನಾಡು ಚಂದು ಕೈಗೆ ಬಂತು ಟೈಟಾನ್ ವಾಚ್

ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಿತ್ರಿಸಲಾಗಿರುವಂತೆ ಕಾಣುವ ವಿಡಿಯೋವನ್ನು ಚಂದು ಶೇರ್ ಮಾಡಿದ್ದಾರೆ. ಇದರಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟುವುದನ್ನು ಕಾಣಬಹುದು.

ವಾಚ್ ಕಟ್ಟಿದ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು ಕಾಫಿ ನಾಡು ಚಂದು ಅವರ ಕೈಗೆ ಟೈಟಾನ್ ವಾಚ್ ಕಟ್ಟಿದ್ದು, ಈ ವಿಡಿಯೋವನ್ನು ಚಂದು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಚೆನ್ನಾಗಿ ಹಾಡಿ, ಇನ್ನೂ ನಾಲ್ಕೈದು ಜನಕ್ಕೆ ನೀವು ಸಹಾಯ ಮಾಡಬೇಕು ಎಂದು ಅನುಶ್ರೀ ಹೇಳಿದ್ದಾರೆ. ವಿಡಿಯೋ ಮಾಡುತ್ತಿದ್ದ ಯುವತಿ ಆ್ಯಂಕರ್ ಅನುಶ್ರೀ ಅವರಲ್ಲಿ ವಾಚ್ ಕಟ್ಟುವಂತೆ ಹೇಳಿದ್​ದು ಅನುಶ್ರೀ ಚಂದು ಕೈಗೆ ವಾಚ್ ಕಟ್ಟಿದ್ದಾರೆ. ಆಲ್​ ದಿ ಬೆಸ್ಟ್ ಚೆನ್ನಾಗಿ ಹಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.
Published by:Divya D
First published: