Coffee Nadu Chandu: ಅರ್ಜುನ್ ಜನ್ಯರನ್ನೇ ಹಿಂದಿಕ್ಕಿದ ಕಾಫಿನಾಡಿನ ಸಿಂಗರ್! ಚಂದು ಅಣ್ಣ ಚಂದು ಅಣ್ಣ ಏನೋ ಹವಾ ನಿಂದು!

Arjun Janya: ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್​ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ.

ಕಾಫಿನಾಡು ಚಂದು

ಕಾಫಿನಾಡು ಚಂದು

  • Share this:
ಸಾಮಾಜಿಕ ಜಾಲತಾಣ (Social Media) ಒಂದು ಮ್ಯಾಜಿಕ್​ (Magic) ಇದ್ದಂತೆ. ಇಲ್ಲಿ ಯಾವಾಗ ಏನೂ ಬೇಕಾದರು ಆಗಬಹುದು. ಯಾರೂ ಬೇಕಾದರು ಫೇಮಸ್​ ಆಗಬಹುದು. ಕೆಲವರು ಈ ಕಾರಣದಿಂದ ಹೆಸರುಗಳಿಸಿದರೆ, ಮತ್ತೊಬ್ಬರ ಹೆಸರನ್ನು ಹಾಳು ಮಾಡುವ ಶಕ್ತಿ ಈಗ ಇದಕ್ಕಿದೆ.  ಇಲ್ಲಿ ಯಾವುದೇ ವಿಚಾರ ವೈರಲ್ (Viral) ಆಗಲು ಹೆಚ್ಚಿನ ಸಮಯ ಬೇಕಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವ್ಯಕ್ತಿ ಎಂದರೆ ಕಾಫಿನಾಡು ಚಂದು (Coffee Nadu Chandu). ಈ ವ್ಯಕ್ತಿಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಈಗ ಈ ವೈರಲ್ ವ್ಯಕ್ತಿ ಸಂಗೀತ ಮಾಂತ್ರಿಕ ಅರ್ಜುನ್ಯ ಜನ್ಯ (Arjun Janya) ಅವರನ್ನು ಮೀರಿಸಿದ್ದಾರೆ.  

ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​

ಹೌದು, ಅರೇ ಇದೇನಿದು ಅವರಿಗೂ, ಇವರಿಗೂ ಏನು ಸಂಬಂಧ ಎಂಬ ಅನುಮಾನ ನಿಮ್ಮನ್ನ ಕಾಡಬಹುದು. ವಿಚಾರ ಏನಪ್ಪ ಅಂದ್ರೆ, ಸೋಷಿಯಲ್ ಮಿಡಿಯಾದಿಂದ ಹೆಸರು ಗಳಿಸಿದ ಈ ವ್ಯಕ್ತಿ, ಆ ಸೋಷಿಯಲ್ ಮೀಡಿಯಾದಲ್ಲಿಯೇ ಅರ್ಜುನ್ ಜನ್ಯ ಅವರನ್ನು ಹಿಂದಿಕ್ಕಿದ್ದಾರೆ. ಈ ಕಾಫಿ ನಾಡು ಚಂದು ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್​. ನೀವು ಯಾವುದೇ ಮೀಮ್ ಪೇಜ್ , ಟ್ರೋಲ್ ಪೇಜ್ ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ.  ಈಗ ಸುದ್ದಿ ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಆಗಿರುವ ಕಾಫಿನಾಡು ಚಂದು ಇದೀಗ ಇನ್ಸ್ಟಾಗ್ರಾಂನಲ್ಲಿ ಸಹ ಹವಾ ಎಬ್ಬಿಸಿದ್ದಾರೆ.






ಇನ್ಸ್ಟಾಗ್ರಾಂ ಖಾತೆಯಲ್ಲಿ 225 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಒಂದು ರೀತಿ ಸೆಲೆಬ್ರಿಟಿಯಾಗಿರುವ ಈ ಚಂದು ಅವರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗಿಂತ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಅರ್ಜುನ್ ಜನ್ಯ ಅವರಿಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 194 ಸಾವಿರ ಫಾಲೋವರ್ಸ್ ಇದ್ದಾರೆ.  ಮನಸ್ಸಿಗೆ ಬಂದಂಥಹ ಹಾಡು, ಮನಸ್ಸಿಗೆ ಬಂದಥಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್​ ಆದವರು ಈ ಚಂದು.




ಇದನ್ನೂ ಓದಿ: ಮಾರ್ಡನ್ ರೈತ ಶಶಿಕುಮಾರ್‌ಗೆ ಕಂಕಣ ಭಾಗ್ಯ, ಬಿಗ್ ಬಾಸ್‌ ವಿನ್ನರ್‌ ಕೈ ಹಿಡಿಯುವ ಹುಡುಗಿ ಯಾರು?

ಈ ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ. ಇವರು ಫೇಮಸ್​ ಆಗಿದ್ದು, ಅವರ ಹಾಡುಗಳಿಂದ. ಇವರ ಹ್ಯಾಪಿ ಬರ್ತ್ ಡೇ ಹಾಡುಗಳು ಎಲ್ಲೆಡೆ ವೈರಲ್​ ಆಗಿದೆ, ತನ್ನದೇ ಆದ ಶೈಲಿಯಲ್ಲಿ ಯಾವುದೇ ರಾಗ ತಾಳಗಳಿಲ್ಲದೇ ಹಾಡುತ್ತಾರೆ. ಇವರ ಹಾಡು ಕೇಳಲು ಚೆನ್ನಾಗಿಲ್ಲ ಎಂದರೂ, ಅವರ ವಿಭಿನ್ನ ಶೈಲಿಗೆ ಜನ ಮನಸೋತಿದ್ದು, ಅವರ ವಿಡಿಯೋಗಳು ಲಕ್ಚಗಟ್ಟಲೆ ವೀವ್ಸ್​ ಪಡೆಯುತ್ತದೆ.



ಇದನ್ನೂ ಓದಿ: ಬಾಲಿವುಡ್​ಗೆ ಹಾರಿದ ಪವನ್ ಒಡೆಯರ್​, ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಗೂಗ್ಲಿ ಡೈರೆಕ್ಟರ್

ಕಾಫಿನಾಡು ಚಂದು ಮಾತೆತ್ತಿದರೆ ಅಪ್ಪು ಅಣ್ಣ ಮತ್ತು ಶಿವರಾಜ್ ಕುಮಾರ್ ಅಣ್ಣನ ಅಭಿಮಾನಿ ಎನ್ನುತ್ತಾರೆ. ಇವರು ಮೊದಲು ಫೇಮಸ್​ ಆಗಿದ್ದು, ರೋಸ್ಟಿಂಗ್ ವಿಡಿಯೋಗಳಿಂದ. ಅವರ ವಿಡಿಯೊ ನೋಡಿ ಕೆಲವು ಯೂಟ್ಯೂಬರ್​ಗಳು ರೋಸ್ಟ್​ ಮಾಡಿದ್ದು, ಇದು ಜನರ ಕುತೂಹಲಕ್ಕೆ ಕಾರಣವಾಗಿ ಅವರನ್ನು ಹುಡುಕಿ ಫುಲ್​ ಫೇಮಸ್​ ಮಾಡಿದ್ದಾರೆ. ಮತ್ತೊಂದು ವಿಶೇಷ ವಿಚಾರ ಎಂದರೆ ಕೆಲವೇ ದಿನಗಳಲ್ಲಿ 1.5 ಲಕ್ಷ ಫಾಲೋವರ್ಸ್ ಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಗಳಿಸಿದ್ದಾರೆ.
Published by:Sandhya M
First published: