• Home
 • »
 • News
 • »
 • entertainment
 • »
 • Coffee nadu chandu: ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕಾಫಿನಾಡು ಚಂದು​! ವಿಡಿಯೋ ನೋಡಿ

Coffee nadu chandu: ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕಾಫಿನಾಡು ಚಂದು​! ವಿಡಿಯೋ ನೋಡಿ

ಕಾಫಿನಾಡು ಚಂದು

ಕಾಫಿನಾಡು ಚಂದು

ದಾವಣಗೆರೆಯ ಅಭಿಮಾನಿಗಳು ಕಾರಿನಲ್ಲಿ ತೆರಳುವ ವೇಳೆ ಕಾಫಿನಾಡು ಚಂದು ಅವರನ್ನು ನೋಡಿದ್ದಾರೆ. ನಂತರ ಸಂತಸಗೊಂಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಕಾಫಿನಾಡು ಚಂದು ಬಳಿ ಹೇಳಿದ್ದಾರೆ.

 • Share this:

  ಪಕ್ಕದ ಮನೆ ಚಂದು ಬಗ್ಗೆ ಗೊತ್ತಿರಲು ಸಾಧ್ಯವೇ ಇಲ್ಲ. ಆದ್ರೆ ಈ ಇಂಟರ್​ನೆಟ್​ ಜಮಾನದಲ್ಲಿ ಕಾಫಿನಾಡು ಚಂದು (Coffee Nadu Chandu) ಅಂದ್ರೆ ಅಂಗನವಾಡಿ ಮಕ್ಕಳಿಗೂ ಕೂಡ ಗೊತ್ತಿದೆ. ಅಷ್ಟರ ಮಟ್ಟಿಗೆ ಕಾಫಿನಾಡು ಚಂದು ಫೇಮಸ್​ ಆಗಿದ್ದಾರೆ. ರಿಕ್ಷಾ ಓಡಿಸುತ್ತಾ. ಆಗಾಗ ಸಿಕ್ಕ ಸಿಕ್ಕ ಅಭಿಮಾನಿಗಳ ಹೆಸರು ಹೇಳುತ್ತಾ, ಅವರಿಗೆ ಹುಟ್ಟುಹಬ್ಬದ ಶುಭಾಶಯ (Wishes) ತಿಳಿಸುವ ಕಾಫಿನಾಡು ಚಂದು ಸದ್ಯ ಇನ್​ಸ್ಟಾಗ್ರಾಂನಲ್ಲಿ (Instagram) ಟ್ರೆಂಡಿಂಗ್​ನಲ್ಲಿದ್ದಾರೆ. ವಿಶೇಷ ಕನ್ನಡ ಅಭಿಮಾನದೊಂದಿಗೆ ತನ್ನದೇ ಶೈಲಿಯಲ್ಲಿ ಮಾತನಾಡುವ ಚಂದು ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಅಷ್ಟೇ ಏಕೆ ಅವರ ಹೆಸರಿನಲ್ಲಿ ಅಭಿಮಾನಿ ಬಳಗವೂ ಇದೆ. ಬೇರೆ ಊರಿನವರು ಕೂಡ ಚಿಕ್ಕಮಗಳೂರಿಗೆ (Chikamagalur) ಹೋದಾಗ ಕಾಫಿನಾಡು ಚಂದು ಅವರನ್ನು ಮಾತನಾಡಿಸಿಕೊಂಡು ಬರುತ್ತಾರೆ. ಅದರಂತೆ ದಾವಣಗೆರೆ (Davanagere) ಅಭಿಮಾನಿಗಳು ಕೂಡ ಕಾರಿನಲ್ಲಿ ತೆರಳುವಾಗ ಕಾಫಿನಾಡು ಚಂದು ಅವರು ರಿಕ್ಷಾ ಓಡಿಸುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಎಷ್ಟೇ ಕೂಗಿದರು ನಾವು ನಿಮ್ಮ ಅಭಿಮಾನಿಗಳ ಎಂದು ಹೇಳಿದರು ಕಾಫಿನಾಡು ಚಂದು ಆಟೋ ನಿಲ್ಲಿಸುವುದಿಲ್ಲ. ಕೊನೆಗೆ ಅಭಿಮಾನಿಯ ಮಾತಿಗೆ ರಿಕ್ಷಾ ನಿಲ್ಲಿಸುತ್ತಾರೆ. ಈ ವೇಳೆ ಅವರು ರಾ ರಾ ರಕ್ಕಮ್ಮ ಹಾಡಿಗೆ ಸ್ಟೆಪ್​ ಹಾಕಿದ್ದಾರೆ.


  ದಾವಣಗೆರೆಯ ಅಭಿಮಾನಿಗಳು ಕಾರಿನಲ್ಲಿ ತೆರಳುವ ವೇಳೆ ಕಾಫಿನಾಡು ಚಂದು ಅವರನ್ನು ನೋಡಿದ್ದಾರೆ. ನಂತರ ಸಂತಸಗೊಂಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಕಾಫಿನಾಡು ಚಂದು ಬಳಿ ಹೇಳಿದ್ದಾರೆ. ಕೊನೆಗೆ ಕಾಫಿನಾಡು ಚಂದು ಆಟೋವನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಈ ವೇಳೆ ರಿಕ್ಷಾದಲ್ಲಿ ಸುದೀಪ್​ ಅಭಿನಯದ ವಿಕ್ರಾಂತ್​ ರೋಣಾ ಹಾಡು ಪ್ಲೇ ಆಗುತ್ತಿತ್ತು. ಅಭಿಮಾನಿಗಳನ್ನು ಕಂಡು ರಿಕ್ಷಾದಿಂದ ಇಳಿದ ಕಾಫಿನಾಡು ಚಂದು ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳೊಂದಿಗೆ ಸ್ಟೆಪ್​​ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.


  ಹೌದು, ಕಾಫಿನಾಡು ಚಂದು ಫೇಮಸ್​ ಆಗಲು ಆತನ ಮಾತನಾಡುವ ಶೈಲಿಯೇ ಕಾರಣವೊಂದಡೆಯಾದರೆ ಮತ್ತೊಂದೆಡೆ ಟ್ರೋಲ್​ ಫೇಜ್​ಗಳು ಆತನನ್ನು ಟ್ರೆಂಡಿಂಗ್​ನಲ್ಲಿ ಕೂರಿಸಿದ್ದಾರೆ. ಬೇರೆ ಊರಿನಿಂದ ಚಿಕ್ಕಮಗಳೂರು ತೆರಳಿದರವರು ಚಂದು ಅವರನ್ನು ಕಂಡಾಗ ಮಾತನಾಡಿಸದೇ ಬರಲಾರರಲು. ಆದರೀಗ ಕಾಫಿನಾಡು ಚಂದುಗೆ ಅಭಿಮಾನಿಗಳ ಸಂಖ್ಯೆ ಏರುತ್ತಿತ್ತು. ರಿಕ್ಷಾ ಓಡಿಸುವ ವೇಳೆ ಕೂಡ ಅಡ್ಡಲಾಗಿ ಬಂದು ಸೆಲ್ಫಿ ವಿಡಿಯೋ ಮಾಡುವಂತೆ ಕೇಳುತ್ತಿದ್ದಾರಂತೆ.


  ಕಾಫಿನಾಡು ಚಂದು ರಾ ರಾ ರಕ್ಕಮ್ಮ ಹಾಡಿಗೆ ನೃತ್ಯ ಮಾಡಿರುವುದನ್ನು ಹೊಡಿ 9 ಟ್ರೋಲ್​ ಪೇಜ್​ ತನ್ನ ಖಾತೆಯಲ್ಲಿ ಅಪ್ಲೋಡ್​ ಮಾಡಿದೆ. ವಿಡಿಯೋಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ 
  ಇದನ್ನೂ ಓದಿ: Bigg Boss OTT: ತಾಯಿಯ ಸಾವಿಗೆ ತಾವೇ ಕಾರಣರಾದರಾ ಸ್ಫೂರ್ತಿ ಗೌಡ? ನಟಿ ಗದ್ಗದ


  ಕಾಫಿನಾಡಿನ ಚಂದು ಹಿನ್ನೆಲೆ ಏನು?


  ಮನಸ್ಸಿಗೆ ಬಂದಥ ಹಾಡು, ಮನಸ್ಸಿಗೆ ಬಂದತಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್​ ಆದವರು ಈ ಚಂದು. ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ಸ್ನೇಹಿತರಿಗೆ ಬರ್ತ್​ಡೇಗೆ ವಿಶ್​ ಮಾಡುತ್ತಿದ್ದರು. ಇವರ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಕಾಫಿನಾಡಿನ ಚಂದುಗೆ ಇನ್​ಸ್ಟಾಗ್ರಾಮ್​ನಲ್ಲಿ ಸದ್ಯಕ್ಕೆ 1 ಲಕ್ಷದ 24 ಸಾವಿರ ಜನ ಫಾಲೋವರ್ಸ್​ ಇದ್ದಾರೆ. ಇದು ನಿಜಕ್ಕೂ ಮೆಚ್ಚುವಂಥ ಕಾರ್ಯವೇ. 2 ವಾರಗಳಿಂದ ಸಿಕ್ಕಾಪಟ್ಟೆ ಪ್ರಸಿದ್ಧಿಗೆ ಬಂದಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ ಭಾಗದ ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​​ ಅವರ ಊರಿನವರಂತೆ.


  ಇದನ್ನೂ ಓದಿ: Bigg Boss OTT: ನಂದು ಒಂದು ಇರ್ಲಿ ಅಂತ ರ್‍ಯಾಪ್ ಹಾಡಿದ ಚಿನಕುರಳಿ ನಂದು! ವಿಡಿಯೋ ವೈರಲ್​


  ವೃತ್ತಿಯಲ್ಲಿ ಆಟೋ ಡ್ರೈವರ್​​ ಚಂದು!


  ಜೀವನಕ್ಕೆ ಆಟೋ ಓಡಿಸಿಕೊಂಡು ಇದ್ದಾರೆ ಚಂದು. ಅವರೇ ಹೇಳಿರುವಂತೆ ಮೊದಲೆಲ್ಲಾ ಅವರು ರಸ್ತೆಯಲ್ಲಿ ಯಾರಾದರೂ ಆ್ಯಕ್ಸಿಡೆಂಟ್​ ಆಗಿ ಬಿದ್ದಿದ್ದರೆ ಅಂಥವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಇದೇ ರೀತಿಯ ಸಣ್ಣ ಪುಟ್ಟ ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬರ್ತಿದ್ದರಂತೆ. ಇವರು ಶಿವಣ್ಣ, ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿ ಅಂತೆ. ಬರ್ತ್​ಡೇ ಸಾಂಗ್​ ಮೂಲಕ ಹೆಚ್ಚಿನ ಫಾಲೋವರ್ಸ್​ ಪಡೆದಿದ್ದರು. ಇವರಿಗೆ ಕರೆ ಮಾಡಿ ತನ್ನ ಸ್ನೇಹಿತರಿಗಾಗಿ ಅವರ ಮೂಲಕ ವಿಶ್​ ಮಾಡುವುದಕ್ಕೆ ಶುರು ಮಾಡಿದ್ದರು.

  Published by:Harshith AS
  First published: