Kiccha Sudeep: ಹೋಟೆಲ್​ ಉದ್ಯಮದತ್ತ ಕಿಚ್ಚನ ಹೊಸ ಹೆಜ್ಜೆ, ಕಾಫಿ - ಬನ್ಸ್​ ಆರಂಭಿಸಿದ ಸುದೀಪ್​

Coffee And Buns: ಸರೋವರದ ರೀತಿಯ ದೊಡ್ಡ ಸಂಸ್ಥೆ ಕಟ್ಟಲು ನನ್ನಿಂದ ಸಾಧ್ಯವಾಗದೇ ಇರಬಹುದು. ಆದರೆ ನಾನು ಅದರಲ್ಲಿ ಒಂದು ಭಾಗದಷ್ಟಾದರೂ ಕೂಡ ಮಾಡಬೇಕು ಎಂಬ ಕನಸಿದೆ ಹಾಗೂ ಮಾಡುವ ನಂಬಿಕೆ ಇದೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
ಕಿಚ್ಚ ಸುದೀಪ್ (Kiccha Sudeep) ಸುಮಾರು 25 ವರ್ಷಗಳಿಂದ ಸ್ಯಾಂಡಲ್​ವುಡ್​ (Sandalwood) ನಲ್ಲಿ ಮೆರೆದವರು. ಬದುಕಿನಲ್ಲಿ ಸೋಲು, ಅವಮಾನ ಎಲ್ಲವನ್ನೂ ಮೆಟ್ಟಿನಿಂತು ಸಾಧಿಸಿದ ಸರದಾರ. ದೊಡ್ಡ ಅಭಿಮಾನಿ (Fans) ಬಳಗ, ಭಾಷೆಯ ಎಲ್ಲೆ ಮೀರಿ ಎಲ್ಲೆಡೆ ಹೆಸರು ಪಡೆದಿರುವ ನಟ ಎಂದರೆ ಸುದೀಪ್​. ಕಿಚ್ಚ ಎಂದರೆ ಸಾಕು ಅದೇನೋ ಹರುಷ, ಉತ್ಸಾಹ ಅಭಿಮಾನಿಗಳಲ್ಲಿ ಮೂಡುತ್ತದೆ. ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬಂದು ಸುಮಾರು 26 ವರ್ಷಗಳಾಗಿದೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ತೆಲುಗು ಹಾಗೂ ಬಾಲಿವುಡ್​ನಲ್ಲಿ ಸಹ ತಮ್ಮ ಛಾಪು ಮೂಡಿಸಿರುವ ನಟ ಇದೀಗ ಬೇರೆ ಬೇರೆ ಉದ್ಯಮದತ್ತ ಮುಖ ಮಾಡಿದ್ದಾರೆ.  

ಕಾಫಿ ಆ್ಯಂಡ್​​ ಬನ್ಸ್ ಉದ್ಯಮ

ಹೌದು, ಕಿಚ್ಚ ಸುದೀಪ್​ ಹೋಟೆಲ್​ ಉದ್ಯಮದತ್ತ ಮುಖ ಮಾಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇರುವ ನಟ ಈ ಉದ್ಯಮಗಳ ಬಗ್ಗೆ ಮಾತನಾಡಿದ್ದಾರೆ. ಹೌದು, ಕಾಫಿ ಆ್ಯಂಡ್ ಬನ್ಸ್​ ಇನೋವೇಷನ್​ ಎನ್ನುವ ಉದ್ಯಮವನ್ನು ಪತ್ನಿ ಪ್ರಿಯ ಜೊತೆ ಸೇರಿ ಆರಂಭಿಸಿದ್ದು, ಈ ಉದ್ಯಮದ ಜೊತೆ ರೆಸ್ಟೋರೆಂಟ್​, ಕೆಫೆ, ಎನ್​ಎಫ್​ಟಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯಮಗಳನ್ನು ಆರಂಭಿಸಲು ನಿರ್ಧರಿಸಿದ್ದಾರೆ.



ನನಗೆ ಅಡುಗೆ ಮಾಡುವುದು ಎಂದರೆ ಬಹಳ ಇಷ್ಟ. ಅದು ನನ್ನ ಪ್ಯಾಷನ್​. ನಮ್ಮ ಫ್ಯಾಮಿಲಿ ಬ್ಯುಸಿನೆಸ್​ ಕೂಡ ಇದೇ ಆಗಿತ್ತು. ಹಾಗಾಗಿ ನನಗೆ ಅಡುಗೆ ರಕ್ತಗತವಾಗಿ ಬಂದಿದೆ. ನನ್ನ ತಂದೆ ಕೂಡ ಬಹಳ ವರ್ಷಗಳ ಕಾಲ ಈ ಹೋಟೆಲ್​ ಉದ್ಯಮದಲ್ಲಿ ಇದ್ದವರು. ಈಗ ಅವರು ಸದ್ಯ ಆ ವೃತ್ತಿಯಿಂದ ಹೊರಗಿದ್ದಾರೆ. ನಾನು ಕೂಡ ಅವರ ಜೊತೆ ಆ ವಾತಾವರಣದಲ್ಲಿ ಬೆಳೆದಿರುವ ಕಾರಣ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಮಂಗಳೂರಿಗೆ ಬಂದ ಮಿಸ್​ ಇಂಡಿಯಾ, ತುಳುವಿನಲ್ಲಿ ಚೆಲುವೆ ಸಿನಿಶೆಟ್ಟಿ ಮಾತು

ಅಲ್ಲದೇ, ಸರೋವರದ ರೀತಿಯ ದೊಡ್ಡ ಸಂಸ್ಥೆ ಕಟ್ಟಲು ನನ್ನಿಂದ ಸಾಧ್ಯವಾಗದೇ ಇರಬಹುದು. ಆದರೆ ನಾನು ಅದರಲ್ಲಿ ಒಂದು ಭಾಗದಷ್ಟಾದರೂ ಕೂಡ ಮಾಡಬೇಕು ಎಂಬ ಕನಸಿದೆ ಹಾಗೂ ಮಾಡುವ ನಂಬಿಕೆ ಇದೆ. ನೀವು ಟೀ ಅಂಡ್ ಬನ್ ಹಾಗೂ ಕಾಫಿ ಆ್ಯಂಡ ಕುಕ್ಕೀಸ್​ ಎಂದು ಸಾಮಾನ್ಯವಾಗಿ ಕೆಳಿರುತ್ತಿರಿ. ಆದರೆರ ನನ್ನ ಕಾಂಬೀನೇಷನ್ ಕಾಫಿ ಆ್ಯಂಡ ಬನ್ಸ್​. ಈ ಕಾರಣದಿಂದ ಕಾಫಿ ಆ್ಯಂಡ್​ ಬನ್ಸ್​ ಎನ್ನುವ ವಿನೂತನ ಕಂಪೆನಿಯನ್ನು ಪ್ರಾರಂಭಿಸಿದ್ದೇವೆ. ಅದರ ಅಡಿಯಲ್ಲಿ ಸಣ್ಣ ರೆಸ್ಟೋರೆಂಟ್​ಗಳು ಹಾಗೂ ಕೆಫೆಗಳನ್ನು ಆರಂಭಿಸಲಿದ್ದೇವೆ ಎಂದಿದ್ದಾರೆ.



ಪತ್ನಿ ಪ್ರಿಯಾ ನೇತೃತ್ವ

ಇನ್ನು ಈ ಕಂಪೆನಿ ಪತ್ನಿ ಪ್ರಿಯಾ ನೇತೃತ್ವದಲ್ಲಿ ನಡೆಯಲಿದೆ. ನಾನು ಸಿನಿಮಾಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪ್ರಿಯಾ ಸುದೀಪ್, ಕಾಫಿ ಆ್ಯಂಡ್ ಬನ್​ ಸುದೀಪ್ ಅವರ ಕನಸಿನ ಕೂಸು. 26 ವರ್ಷಗಳಿಂದ ಸಿನಿಮಾದಲ್ಲಿದ್ದಾರೆ, ಬೇರೆ ಉದ್ಯಮದತ್ತ ಸಹ ಗಮನ ಹರಿಸಬೇಕು ಎನ್ನುವ ಕಾರಣ ಇದನ್ನು ಆರಂಭಿಸಲಾಗಿದೆ. ಮೊದಲು ನಾವು ಕ್ರಿಕೆಟ್ ಕೆಫೆ ಸೇರಿದಂತೆ ಸುದೀಪ್​ಗೆ ಇಷ್ಟವಾಗುವ ಕ್ಷೇತ್ರದಲ್ಲಿ ಗಮನ ಹರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್​ ಡೇಟ್​ ಮುಂದಕ್ಕೆ, ಬಿಗ್​ ಅಪ್​​ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್​

ಸದ್ಯ ಕಿಚ್ಚ ಸುದೀಪ್,​ ಕಿಚ್ಚ ವರ್ಸ್​ ಎನ್ನುವ ಹೊಸ ಆನ್​ಲೈನ್​​ ಉದ್ಯಮ ಆರಂಭಿಸಿದ್ದು, ಅದರಲ್ಲಿ ನೀವು ಕಿಚ್ಚ ಸುದೀಪ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಅವರ ಜೊತೆ ಮಾತನಾಡಬಹುದು. ಅಲ್ಲದೇ, ಅವರ ವಸ್ತುಗಳನ್ನು ಖರೀದಿ ಮಾಡಬಹುದು.
Published by:Sandhya M
First published: