ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅವರ 125ನೇ ಸಿನಿಮಾ (Cinema) ವೇದ (Vedha) ಈಗಾಗಲೇ ಭರ್ಜರಿಯಾಗಿ ಹವಾ ಸೃಷ್ಟಿಸಿದೆ. ಸಿನಿಮಾದ ಟ್ರೈಲರ್ ಜನರನ್ನು ಮೋಡಿ ಮಾಡಿದೆ. ಹಾಡು ಹಿಟ್ ಆಗಿದೆ. ರಿಲೀಸ್ಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ನಟ ಶಿವಣ್ಣ ಕೂಡಾ ಎಲ್ಲೆಡೆ ಸಂಚರಿಸುತ್ತಾ ಸಿನಿಮಾದ ಪ್ರಮೋಷನ್ (Promotion) ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕರಾವಳಿಗೂ ಭೇಟಿ ಕೊಟ್ಟು ಕೊರಗಜ್ಜನ ಆಶೀರ್ವಾದ ಪಡೆದು ಸಿನಿಮಾ ಪ್ರಮೋಷನ್ ಮಾಡಿದ್ದರು. ಇತ್ತೀಚೆಗೆ ಹುಬ್ಬಳ್ಳಿಲ್ಲಿಯೂ (Hubbaa) ವೇದ ಪ್ರಮೋಷನ್ ಭರ್ಜರಿಯಾಗಿ ನಡೆದಿದೆ. ಅವರ ಪತ್ನಿ ಕೂಡಾ ಈ ಪ್ರಚಾರ ಕೆಲಸದಲ್ಲಿ ಸಾಥ್ ಕೊಟ್ಟಿದ್ದಾರೆ. ಇದೀಗ ಪುನೀತಣ್ಣ ಹಾಗೂ ಶಿವಣ್ಣ ಅವರ ಅಭಿಮಾನಿ ಕಾಫಿ ನಾಡುಚಂದು ಕೂಡಾ ವೇದ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.
ವೇದ ಪ್ರಮೋಷನ್ ಮಾಡಿದ ಕಾಫಿ ನಾಡು ಚಂದು
ಪುನೀತ್ ಹಾಗೂ ಶಿವರಾಜ್ಕುಮಾರ್ ಅವರ ಬಿಗ್ ಫ್ಯಾನ್ ಆಗಿರುವ ಕಾಫಿ ನಾಡು ಚಂದು ವೇದ ಸಿನಿಮಾವನ್ನು ವಿಭಿನ್ನವಾಗಿ ಪ್ರಮೋಟ್ ಮಾಡಿದ್ದಾರೆ. ವೇದ ಸಿನಿಮಾ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಕಾಫಿ ನಾಡು ಚಂದು ಹೇರ್ ಸ್ಟೈಲ್ ಮಾಡಿಸಿಕೊಂಡು ವೇದ ಪ್ರಮೋಟ್ ಮಾಡಿದ್ದಾರೆ.
View this post on Instagram
ಈ ವಿಡಿಯೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಕುರಿತು ಭಾರೀ ಕ್ರೇಜ್ ಕೂಡಾ ಹೆಚ್ಚಿದೆ. ವಿಡಿಯೋಗೆ ಅಭಿಮಾನಿಗಳು ಲೈಕ್ಸ್ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Coffee Nadu Chandu: ಕಾಫಿ ನಾಡು ಚಂದು ಕೈಗೆ ಟೈಟಾನ್ ವಾಚ್ ಕಟ್ಟಿದ ಆ್ಯಂಕರ್ ಅನುಶ್ರೀ
ಕಾಫಿ ನಾಡು ಚಂದು ಕ್ರೇಜ್ ಜನರ ಮಧ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಕಾಫಿನಾಡು ಚಂದು ಪರ್ಸನಲ್ ಕ್ರೇಜ್ ಹಾಗೆಯೇ ಇದೆ. ಇತ್ತೀಚೆಗೆ ಚಂದು ಬೆಂಗಳೂರಿಗೆ ಬಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ನನ್ನು ಭೇಟಿಯಾಗಿ ಹೋಗಿದ್ದಾರೆ.
View this post on Instagram
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಚಿತ್ರದ ಪೋಸ್ಟರ್ ಆ ಒಂದು ಕುತೂಹಲ ಕೆರಳಿಸಿವೆ. ಚಿತ್ರ ಬದುಕಿನಲ್ಲೂ ವೇದ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ವಿಶೇಷವಾಗಿಯೇ ಇದೆ.
1960 ಕಾಲಘಟ್ಟದ ಕಥೆಯುಳ್ಳ ಈ ಸಿನಿಮಾದಲ್ಲಿ ಅದ್ಭುತ ಕಥೆನೆ ಇದೆ. ನಿರ್ದೇಶಕ ಎ.ಹರ್ಷ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸ್ವತಃ ಶಿವರಾಜ್ ಕುಮಾರ್ ಅವರು ತಮ್ಮ ಬ್ಯಾನರ್ ಮೂಲಕವೇ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಚಿತ್ರ ಜೀವನದ ಒಟ್ಟು ಸಿನಿಮಾಗಳ ಲೆಕ್ಕದಲ್ಲಿ ಇದು 125 ನೇ ಸಿನಿಮಾ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ