ನಾಳೆ ಸೀತಾರಾಮನಿಗೆ ಕಲ್ಯಾಣ; ನಿಖಿಲ್ ಕುಮಾರ್​ಸ್ವಾಮಿಗೆ ಸಿಗಲಿದೆಯಾ ಹೊಸ ಬಾಳು?

‘ಜಾಗ್ವಾರ್​’ ಅಂದುಕೊಂಡ ಮಟ್ಟಕ್ಕೆ ಹಿಟ್​ ಆಗಿಲ್ಲ. ಹಾಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅವರು. ಒಂದೊಮ್ಮೆ ಈ ಸಿನಿಮಾ ಗೆದ್ದರೆ, ಅವರ ಕರಿಯರ್​ಗೆ ಮೈಲೇಜ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Rajesh Duggumane | news18
Updated:January 24, 2019, 4:17 PM IST
ನಾಳೆ ಸೀತಾರಾಮನಿಗೆ ಕಲ್ಯಾಣ; ನಿಖಿಲ್ ಕುಮಾರ್​ಸ್ವಾಮಿಗೆ ಸಿಗಲಿದೆಯಾ ಹೊಸ ಬಾಳು?
‘ಜಾಗ್ವಾರ್​’ ಅಂದುಕೊಂಡ ಮಟ್ಟಕ್ಕೆ ಹಿಟ್​ ಆಗಿಲ್ಲ. ಹಾಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅವರು. ಒಂದೊಮ್ಮೆ ಈ ಸಿನಿಮಾ ಗೆದ್ದರೆ, ಅವರ ಕರಿಯರ್​ಗೆ ಮೈಲೇಜ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Rajesh Duggumane | news18
Updated: January 24, 2019, 4:17 PM IST
ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರ್​ ನಟನೆಯ ‘ಸೀತಾರಾಮ ಕಲ್ಯಾಣ’ ಚಿತ್ರ ಈ ವಾರ (ಶುಕ್ರವಾರ) ತೆರೆಗೆ ಬರುತ್ತಿದೆ. ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ಸಿನಿಮಾ ಅಬ್ಬರಿಸಲಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಿಖಿಲ್​ ವೃತ್ತಿ ಜೀವನದಲ್ಲಿ ಈ ಸಿನಿಮಾ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

‘ಜಾಗ್ವಾರ್​’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ನಿಖಿಲ್​. ಆದರೆ, ಸಿನಿಮಾ ನೀರಿಕ್ಷೆಯ ಮಟ್ಟ ತಲುಪಲು ವಿಫಲವಾಗಿತ್ತು. ಈ ಚಿತ್ರ ತೆರೆಕಂಡು ಬರೋಬ್ಬರಿ 3 ವರ್ಷಗಳಾಗಿವೆ. ಈಗ ಅವರು ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಟೀಸರ್, ಟ್ರೈಲರ್​ನಲ್ಲಿ ‘ಸೀತಾರಾಮ’ ಹೇಗಿರಲಿದ್ದಾನೆ ಎನ್ನುವ ಚಿಕ್ಕ ಝಲಕ್​ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಎ. ಹರ್ಷ. ಈ ಮೊದಲಿನ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್​ ಮೆರೆದಿದ್ದ ನಿಖಿಲ್​ ಈ ಬಾರಿ, ಮಾಸ್​ ಜೊತೆ ಫ್ಯಾಮಿಲಿ ಸೆಂಟಿಮೆಂಟ್​ ಕಥೆ ಹಿಡಿದು ಬಂದಿದ್ದಾರೆ.

ಇದನ್ನೂ ಓದಿ: 400 ಚಿತ್ರಮಂದಿರಗಳಲ್ಲಿ 'ಸೀತಾರಾಮ ಕಲ್ಯಾಣ' ಸಂಭ್ರಮ

“ಚಿತ್ರದಲ್ಲಿ ಮಾಸ್​ ಅಂಶಗಳಿವೆ. ಅದರ ಜೊತೆಗೆ ಕೌಟುಂಬಿಕ ಅಂಶಕ್ಕೂ ಪ್ರಾಮುಖ್ಯತೆ ನೀಡಿದ್ದೇವೆ. ಇಡೀ ಕುಟುಂಬವೇ ಕುಳಿತು ಸಿನಿಮಾ ನೋಡಬಹುದು,” ಎಂದು ನಿಖಿಲ್​ ಈ ಮೊದಲು ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಚಿತ್ರ ಏನು ಹೇಳಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದರು.

ಇನ್ನು, “ಸೀತಾರಾಮ ಕಲ್ಯಾಣ,” ರಿಮೇಕ್​ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಸ್ವತಃ ನಿಖಿಲ್​ ಸ್ಪಷ್ಟನೆ ನೀಡಿದ್ದರು. “ತೆಲುಗಿನ ಕೆಲ ಸಿನಿಮಾಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಆದರೆ, ಇದು ಯಾವುದೇ ಸಿನಿಮಾದ ರಿಮೇಕ್​ ಅಲ್ಲ. ಸಿನಿಮಾ ನೋಡಿದ ನಂತರ ಆ ವಿಚಾರ ನಿಮಗೆ ಅರ್ಥವಾಗಲಿದೆ,” ಎಂದು ಹೇಳಿಕೊಂಡಿದ್ದರು.

ಇನ್ನು, ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲು ಸಾಕಷ್ಟು ಕಾರಣವಿದೆ. ಚಿತ್ರದಲ್ಲಿ ನಿಖಿಲ್​ಗೆ ಜೊತೆಯಾಗಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್​ಔಟ್​ ಆಗಿದೆ ಎಂಬುದು ಟ್ರೈಲರ್​ ನೋಡಿದವರ ಮಾತು. ಶರತ್ ​ಕುಮಾರ್​, ರವಿಶಂಕರ್​ ಮೊದಲಾದ ಹಿರಿಯ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
Loading...

ಇದನ್ನೂ ಓದಿ: ಅವಕಾಶ ಸಿಕ್ಕರೆ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ; ಇದು ಸುದೀಪ್ ಮನದಾಳದ ಮಾತು!‘ವಜ್ರಕಾಯ’, ‘ಅಂಜನೀ ಪುತ್ರ’ದಂತಹ ಸಿನಿಮಾ ನೀಡಿದ ಹರ್ಷ ಈ ಚಿತ್ರದ ನಿರ್ದೇಶಕರು. ಹಾಗಾಗಿ ಅವರ ಕೆಲಸದ ಮೇಲೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತೆಲುಗಿನ ಖ್ಯಾತರಾದ ರಾಮ-ಲಕ್ಷ್ಮಣ ಸಹೋದರರು ‘ಸೀತಾರಮ’ನಿಗೆ ಆ್ಯಕ್ಷನ್​ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ. ಟ್ರೈಲರ್​ನಲ್ಲಿ ಅವರ ಕುಸುರಿ ಎದ್ದು ಕಾಣುತ್ತದೆ. ಚಿತ್ರದ ಹಾಡುಗಳೂ ಹಿಟ್​ ಆಗಿರುವುದು ಚಿತ್ರಕ್ಕೆ ಪ್ಲಸ್​ ಆಗಿದೆ. ಚಿತ್ರಕ್ಕೆ ಸ್ವತಃ ಕುಮಾರಸ್ವಾಮಿ ಅವರೇ ಬಂಡವಾಳ ಹೂಡಿದ್ದಾರೆ.

‘ಜಾಗ್ವಾರ್​’ ಅಂದುಕೊಂಡ ಮಟ್ಟಕ್ಕೆ ಹಿಟ್​ ಆಗಿಲ್ಲ. ಹಾಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅವರು. ಒಂದೊಮ್ಮೆ ಈ ಸಿನಿಮಾ ಗೆದ್ದರೆ, ಅವರ ಕೆರಿಯರ್​ಗೆ ಮೈಲೇಜ್​ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ