ಏಪ್ರಿಲ್​ 6 ರವರೆಗೆ ಥಿಯೇಟರ್​​ಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ​; ಸರ್ಕಾರಕ್ಕೆ ಧನ್ಯವಾದ ಹೇಳಿದ ಪುನೀತ್ ರಾಜ್​ಕುಮಾರ್

ಖುದ್ದು ಪುನಿತ್ ರಾಜ್‌ಕುಮಾರ್ ಕೂಡ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಪುನೀತ್ ರಾಜ್​ಕುಮಾರ್​ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಏಪ್ರಿಲ್ 6ರವರೆಗೆ ಸಿನಿಮಾ ಮಂದಿರಗಳಿಗೆ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿ ನಿರ್ಬಂಧ ಸಡಿಲಿಕೆ ಮಾಡಿದ್ದಾರೆ.  ಏಪ್ರಿಲ್7 ರಿಂದ 50% ಸೀಟು ಭರ್ತಿಗೆ ಮಾತ್ರ ಅವಕಾಶ ಇರುತ್ತದೆ.

ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ನಟ ಪುನೀತ್ ರಾಜ್​ಕುಮಾರ್

ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ನಟ ಪುನೀತ್ ರಾಜ್​ಕುಮಾರ್

 • Share this:
  ಬೆಂಗಳೂರು(ಏ.03): ಥಿಯೇಟರ್​​ಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿದ್ದ ಸರ್ಕಾರವು, ಈಗ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಮನವಿಗೆ ಸ್ಪಂದಿಸಿದ್ದು, ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 6ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ.  ಆ ಮೂಲಕ ಯುವರತ್ನ ಸಿನಿಮಾಗೆ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಂತಾಗಿದೆ . ಇದು ಯುವರತ್ನ ಸಿನಿಮಾ ತಂಡ ಹಾಗೂ ಅಪ್ಪು ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಇಂದು ಸಂಜೆಯಷ್ಟೇ ನಟ ಪುನೀತ್ ರಾಜ್​ಕುಮಾರ್ ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಭೇಟಿಯಾಗಿ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್​​ವೈ, ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿದ್ದಾರೆ.

  ನಿನ್ನೆಯಷ್ಟೇ ಸಿನಿಮಾ ಥಿಯೇಟರ್​​ಗಳಲ್ಲಿ ಶೇ. 50ರಷ್ಟು ಸೀಟುಗಳಿಗೆ ನಿರ್ಬಂಧ ಹೇರಲಾಗಿತ್ತು.  ಯುವರತ್ನ ಸಿನಿಮಾ ಬಿಡುಗಡೆಯಾಗಿ ಎರಡು ದಿನ ಕಳೆದಿತ್ತು. ಈಗಾಗಲೇ‌ ಯುವರತ್ನ ಸಿನಿಮಾಗೆ ಮುಂಗಡ ಬುಕ್ಕಿಂಗ್ ಆಗಿತ್ತು.  ಯುವರತ್ನ ಸಿನಿಮಾ ನಷ್ಟ ಹೊಂದುವ ಆತಂಕದ ಕಾರಣ, ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು.

  ಕಾರವಾರ ಕೋಸ್ಟ್ ಗಾರ್ಡ್​​ಗೆ ಇನ್ನೆರಡು ಬೋಟ್ ಸೇರ್ಪಡೆ; ಕಾರವಾರದ ಜಟ್ಟಿಯಲ್ಲಿ ನಿಂತ ಬೋಟ್​​ಗಳು

  ಖುದ್ದು ಪುನಿತ್ ರಾಜ್‌ಕುಮಾರ್ ಕೂಡ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಪುನೀತ್ ರಾಜ್​ಕುಮಾರ್​ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಏಪ್ರಿಲ್ 6ರವರೆಗೆ ಸಿನಿಮಾ ಮಂದಿರಗಳಿಗೆ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿ ನಿರ್ಬಂಧ ಸಡಿಲಿಕೆ ಮಾಡಿದ್ದಾರೆ.  ಏಪ್ರಿಲ್7 ರಿಂದ 50% ಸೀಟು ಭರ್ತಿಗೆ ಮಾತ್ರ ಅವಕಾಶ ಇರುತ್ತದೆ.

  ಮತ್ತೆ ಮೂರು ದಿನಗಳ ಕಾಲ ಥಿಯೇಟರ್ ಗಳಲ್ಲಿ ಶೇಕಡಾ ನೂರರಷ್ಟು ಸೀಟಿಂಗ್ ಗೆ ಅನುಮತಿ ನೀಡಿರುವ ಹಿನ್ನೆಲೆ,  ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರಕ್ಕೆ ನಟ ಪುನೀತ್ ರಾಜಕುಮಾರ್ ಧನ್ಯವಾದ ತಿಳಿಸಿದ್ದಾರೆ.  ಅಭಿಮಾನಿಗಳು, ಮಾಧ್ಯಮ, ಚಿತ್ರರಂಗದ ಮಿತ್ರರು ಹಾಗೂ ರಾಜ್ಯದ ಜನತೆಗೆ ನಟ ಪುನೀತ್ ಧನ್ಯವಾದ ತಿಳಿಸಿದ್ದಾರೆ. ಮೂರು ದಿನಗಳ ಕಾಲ ಶೇಕಡಾ ನೂರು ಸೀಟಿಂಗ್ ಗೆ ಅವಕಾಶ ನೀಡಿರೋದಕ್ಕೆ ಧನ್ಯವಾದ ಹೇಳಿದ್ದಾರೆ. ಆದರೂ ಸಿನಿಮಾ ನೋಡಲು ಥಿಯೇಟರ್ ಗೆ ಬರುವವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗೃತಿ ವಹಿಸಿ.  ನಿಮ್ಮೆಲ್ಲರ ಪ್ರೀತಿ ವಿಶ್ವಾಸವನ್ನು ನಾನೆಂದೂ ಮರೆಯಲ್ಲ ಎಂದಿದ್ದಾರೆ.
  Published by:Latha CG
  First published: