• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kiccha Sudeep ಗೆ ಹೆಚ್ಚಾಯ್ತು ಬೆಂಬಲ, ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ ಹೇಳಿದ್ದೇನು?

Kiccha Sudeep ಗೆ ಹೆಚ್ಚಾಯ್ತು ಬೆಂಬಲ, ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಸಿಎಂ ಜೊತೆ ಕಿಚ್ಚ ಸುದೀಪ್​

ಸಿಎಂ ಜೊತೆ ಕಿಚ್ಚ ಸುದೀಪ್​

ಭಾಷೆ ವಿಚಾರಕ್ಕೆ ಬಂದಾಗ ಕನ್ನಡಿಗರು ಒಟ್ಟಾಗಿ ನಿಲ್ಲುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಕಿಚ್ಚ ಸುದೀಪ್​ ಹೇಳಿಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಸಿಎಂ ಬಸವರಾಜ್​ ಬೊಮ್ಮಾಯಿ ಕೂಡ ಸಾಥ್​ ಕೊಟ್ಟಿದ್ದಾರೆ.

  • Share this:

ಸದ್ಯ ಚಿತ್ರರಂಗದಲ್ಲಿ ಹಿಂದಿ (Hindi) ಭಾಷೆಯ ವಿಚಾರವಗಿ ದೊಡ್ಡ ಬಿರುಗಾಳಿ ಎದ್ದಿದೆ. ಕನ್ನಡದ ನಟ ಕಿಚ್ಚ ಸುದೀಪ್ (Kiccha Sudeep) ಮತ್ತು ಹಿಂದಿಯ ಅಜಯ್ ದೇವಗನ್ (Ajay Devgn) ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಇದಕ್ಕೆ ಕಾರಣ 'ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ' ಎಂಬ ಕಿಚ್ಚನ ಹೇಳಿಕೆ. ಕಿಚ್ಚನ ಬೆನ್ನಿಗೆ ಸಿನಿಮಾ ರಂಗದ ಗಣ್ಯರು ಹಾಗೂ ರಾಜಕಾರಣಿಗಳು ಸಾಥ್​ ನೀಡಿದ್ದಾರೆ. ದಕ್ಷಿಣ ರಾಜ್ಯಗಳ ಸ್ಟಾರ್​ಗಳ ಅಭಿಮಾನಿಗಳು ಕೂಡ ಕಿಚ್ಚ ಸುದೀಪ್​ ಪರವಾಗಿ ನಿಂತಿದ್ದಾರೆ. ಇಬ್ಬರೂ ಟ್ವೀಟ್ (Tweet) ಮೂಲಕವೇ ಈ ವಿಚಾರದಲ್ಲಿ ವಾಗ್ವಾದಕ್ಕೆ ಇಳಿದಿದ್ದರು. ಕನ್ನಡಿಗರಿಗೆ ಮಾತ್ರ ಅಲ್ಲ. ಇಡೀ ದಕ್ಷಿಣ ಭಾರತೀಯರನ್ನು ಅಜಯ್ ದೇವಗನ್ ಈ ಹೇಳಿಕೆ ಕೆರಳಿಸಿದೆ. ಕನ್ನಡಿಗರು, ಕನ್ನಡದ ಚಿತ್ರರಂಗದವರು ಮಾತ್ರ ಅಲ್ಲದೆ ಸುದೀಪ್ ಪರ ದಕ್ಷಿಣ ಭಾರತೀಯರೇ ನಿಂತು ಬಿಟ್ಟಿದ್ದಾರೆ.


ಸುದೀಪ್ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ!


ಹೌದು, ಭಾಷೆ ವಿಚಾರಕ್ಕೆ ಬಂದಾಗ ಕನ್ನಡಿಗರು ಒಟ್ಟಾಗಿ ನಿಲ್ಲುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಕಿಚ್ಚ ಸುದೀಪ್​ ಹೇಳಿಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಸಿಎಂ ಬಸವರಾಜ್​ ಬೊಮ್ಮಾಯಿ ಕೂಡ ಸಾಥ್​ ಕೊಟ್ಟಿದ್ದಾರೆ. 'ಕಿಚ್ಚ ಸುದೀಪ್​ ಹೇಳಿರುವುದು ಸರಿ ಇದೆ. ಆ ಆ ರಾಜ್ಯಗಳಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ಇದೆ. ಅದುವೇ ಸಾರ್ವಭೌಮ. ಅದೇ ವಿಚಾರವನ್ನು ಸುದೀಪ್​ ಹೇಳಿದ್ದಾರೆ. ಇದನ್ನು ಎಲ್ಲರೂ ಗೌರವಿಸಬೇಕು ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.


ಅಜಯ್​ ದೇವಗನ್​ ವಿರುದ್ಧ ಕುಮಾರಸ್ವಾಮಿ ಗರಂ!


ಹಿಂದಿ ಎಂದೂ ನಮ್ಮ ರಾಷ್ಟ್ರಭಾಷೆ ಆಗಿರಲಿಲ್ಲ, ಆಗುವುದೂ ಇಲ್ಲ ಎಂದು ಸಿದ್ದರಾಮಯ್ಯ  ಟ್ವೀಟ್ ಮಾಡಿ ಅಜಯ್​ ದೇವಗನ್​ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್​ ಮೂಲಕ ಬಾಲಿವುಡ್​ ನಟನಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಜಯ್‌ ದೇವಗನ್‌ಗೆ ಅವರದ್ದೇ ಮೊದಲ ಸಿನಿಮಾವನ್ನು ನೆನಪಿಸಿ ಸಹಭಾಳ್ವೆ, ವಿವಿಧತೆಯಲ್ಲಿ ಏಕತೆಯ ಪಾಠವನ್ನು ಕುಮಾರಸ್ವಾಮಿ ಮಾಡಿದ್ದಾರೆ.


ಇದನ್ನೂ ಓದಿ: Ajay Devgn ವಿರುದ್ಧ 'ದಳಪತಿ' ಗರಂ, ಕಿಚ್ಚನ ಕೆಚ್ಚಿನ ನುಡಿಗೆ ಕುಮಾರಸ್ವಾಮಿ ಸಾಥ್​!


ಸುದೀಪ್​ ಹೇಳಿದ್ದು ಕರೆಕ್ಟ್​ ಇದೆ ಎಂದ ಹೆಚ್​.ಡಿ.ಕುಮಾರಸ್ವಾಮಿ!


''ಚಿತ್ರನಟ ಕಿಚ್ಚ ಸುದೀಪ್‌ ಅವರು ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ'' ಎಂದಿದ್ದಾರೆ ಹೆಚ್‌ಡಿ ಕುಮಾರಸ್ವಾಮಿ. ''ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ'' ಎಂದು ದಳಪತಿ ಅಜಯ್​ ದೇವಗನ್​ಗೆ ಪಾಠ ಮಾಡಿದ್ದಾರೆ.


ಇದನ್ನೂ ಓದಿ: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದ ಕಿಚ್ಚನ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಏನಿದು ಹೊಸ ವಿವಾದ?


ಕನ್ನಡಿಗನಾಗಿರಲು ಹೆಮ್ಮೆ ಎಂದ ಸಿದ್ದರಾಮಯ್ಯ!


ಈ ನಡುವೆ ಅಜಯ್​ ದೇವಗನ್​ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹಿಂದಿ ಎಂದು ಹಾಗೂ ಮುಂದೆ ಎಂದಿಗೂ ನಮ್ಮ ರಾಷ್ಟ್ರ ಭಾಷೆ ಆಗಲು ಸಾಧ್ಯವಿಲ್ಲ. ದೇಶದ ವಿವಿಧ ಭಾಷೆಗಳ ವೈವಿದ್ಯಮಯ ಸಂಸ್ಕೃತಿಯನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಪ್ರತಿಯೊಂದು ಭಾಷೆ ಕೂಡ ತನ್ನದೇ ಆದ ಐತಿಹಾಸಿ ಶ್ರೀಮಂತಿಕೆಯನ್ನು ಹೊಂದಿದೆ. ನಾನೊಬ್ಬ ಕನ್ನಡಿಗ ಎಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದಾರೆ.

top videos
    First published: