ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕೂಡ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಒರಾಯನ್ ಮಾಲ್ ನಲ್ಲಿ ಚಾರ್ಲಿ ಸಿನಿಮಾವನ್ನು ಸಿಎಂ ವೀಕ್ಷಿಸಿದ್ದು ತುಂಬಾ ಭಾವುಕರಾಗಿದ್ದರಂತೆ. ಬೆಳಗ್ಗೆಯಷ್ಟೇ ಚಿತ್ರತಂಡ ಮುಖ್ಯಮಂತ್ರಿಗಳಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂದು ಮನವಿ ಮಾಡಿತ್ತು. ಅದಕ್ಕೆ ಸಿಎಂ ಸ್ಪಂದಿಸಿ ಸಿನಿಮಾ ವೀಕ್ಷಿಸಿದ್ದಾರೆ. ಸಿಎಂ ಅವರಿಗೆ ಸಚಿವ ಅರ್ ಅಶೋಕ್ (R Ashok) ,ಸಚಿವ ಬಿ.ಸಿ ನಾಗೇಶ್ ಸಾಥ್ ನೀಡಿದ್ದಾರೆ.
ಸಿನಿಮಾ ನೋಡಿ ಭಾವುಕರಾದ ಸಿಎಂ
ಇನ್ನು ಸಿನಿಮಾ ಮುಗಿದ ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ , ತುಂಬಾ ಭಾವುಕರಾಗಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ನಾನು ಶ್ವಾನಪ್ರಿಯ. ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು. ಈಗ ದಿಯಾ ಎನ್ನುವ ನಾಯಿ ಸಾಕ್ತಿದ್ದೇನೆ. ಚಾರ್ಲಿ ರೀತಿ ದಿಯಾ ನಾಯಿ ಮನೆಗೆ ಬಂದಾಗ ತಬ್ಬಿಕೊಳ್ಳುತ್ತೆ ಎಂದು ಹೇಳಿದ್ದಾರೆ.
ಚಾರ್ಲಿ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಿ ಪಾತ್ರ ಮೆಚ್ಚುವಂಥದ್ದು. ಜೊತೆಗೆ ನಟ ರಕ್ಷಿತ್ ಶೆಟ್ಟಿ ತುಂಬ ಚೆನ್ನಾಗಿ ನಟಿಸಿದ್ದಾರೆ. ನಾನು ಈ ಸಿನಿಮಾ ಟ್ರೈಲರ್ ನೋಡಿದ್ದೆ, ರಕ್ಷಿತ್ ಆಹ್ವಾನವೂ ಇತ್ತುಅದಕ್ಕಾಗಿ ಈ ಸಿನಿಮಾ ನೋಡಿದೆ ಎಂದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾರ್ಲಿ, ಕೆಜಿಎಫ್ ಹೀಗೆ ಹಲವು ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಇದು ಹೆಮ್ಮೆಯ ವಿಚಾರ ಎಂದು ಕನ್ನಡ ಸಿನಿಮಾಗಳ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ, ಚಾರ್ಲಿಯ ತುಂಟಾಟವನ್ನು ನೀವೂ ಕಣ್ತುಂಬಿಕೊಳ್ಳಿ
ಫಿಲ್ಮಿ ಸಿಟಿ ಮಾಡಲು ಸರ್ಕಾರ ರೆಡಿ ಇದೆ
ಇನ್ನು ಮೈಸೂರಿನಲ್ಲಿ ಫಿಲ್ಮಿ ಸಿಟಿ ಮಾಡಲು ಸರ್ಕಾರ ರೆಡಿ ಇದೆ. ಕೇವಲ ಸರ್ಕಾರವೊಂದೇ ಫಿಲ್ಮ್ ಸಿಟಿ ಮಾಡಲು ಆಗುವುದಿಲ್ಲಸಿನಿ ತಾಂತ್ರಿಕರು ಮುಂದು ಬರಬೇಕು ಎಂದು ಆಹ್ವಾನ ನೀಡಿದ್ದಾರೆ.
ಇನ್ನು ಸಿಎಂಗೆ ಬೊಮ್ಮಾಯಿಗೆ ಸಹ ನಾಯಿ ಎಂದರೆ ಬಹಳ ಇಷ್ಟ. ಅವರ ಮನೆಯಲ್ಲಿ ಸಹ ಸನ್ನಿ ಎನ್ನುವ ನಾಯಿ ಇತ್ತು. ಕಳೆದ ವರ್ಷ ಆ ನಾಯಿ ನಿಧನವಾಗಿತ್ತು, ಆ ಸಮಯದಲ್ಲಿ ಸಿಎಂ ಸಹ ಬಹಳ ಭಾವುಕರಾಗಿದ್ದರು. ಹಾಗಾಗಿ ಅವರಿಗೆ ಈ ಸಿನಿಮಾ ಬಹಳ ಇಷ್ಟವಾಗುತ್ತದೆ ಎನ್ನಬಹುದು.
ಇನ್ನು ಚಾರ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ. ಅದರಲ್ಲೂ ವೀಕೆಂಡ್ಗಳಲ್ಲಿ (Weekend) ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಟಿಕೆಟ್ ಸಿಗದೆ ಹಲವರಿಗೆ ಬೇಸರ ಉಂಟಾಗಿರುವುದು ಸಹ ಇದೆ. ಮೀಡಿಯಂ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸಿನಿಪ್ರಿಯರ ಮನ ಗೆಲ್ಲುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಮನುಷ್ಯ ಮತ್ತು ನಾಯಿಯ ನಡುವಿನ ಭಾವನಾತ್ಮಕ ಸಂಬಂಧದ ಕಥೆಯಾಗಿದ್ದು, ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ.
ಇದನ್ನೂ ಓದಿ: ಈ ಬಾರಿ ಬೊಂಬಾಟ್ ಭೋಜನದಲ್ಲಿ ಲಂಚ್ ಬಾಕ್ಸ್ ಸ್ಪೆಷಲ್, ಸಿಹಿಕಹಿ ಚಂದ್ರು ಜೊತೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಂದ ನಳಪಾಕ
ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.ಇದು ಈ ಚಿತ್ರದ ಎಳೆಯಾಗಿದ್ದು, ಜನರು ಮಿಸ್ ಮಾಡದೇ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ