777 Charlie ಸಿನಿಮಾ ನೋಡಲು ಸಿಎಂಗೆ ಆಹ್ವಾನ, ಒರಾಯನ್ ಮಾಲ್​ನಲ್ಲಿ ಸ್ಪೆಷಲ್ ಶೋ

CM Bommai: ಇನ್ನು ಚಾರ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ. ಅದರಲ್ಲೂ ವೀಕೆಂಡ್​ಗಳಲ್ಲಿ (Weekend) ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಟಿಕೆಟ್​ ಸಿಗದೆ ಹಲವರಿಗೆ ಬೇಸರ ಉಂಟಾಗಿರುವುದು ಸಹ ಇದೆ. ಮೀಡಿಯಂ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸಿನಿಪ್ರಿಯರ ಮನ ಗೆಲ್ಲುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
777 ಚಾರ್ಲಿ (777 Charlie) ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ (Sandalwood)  ಹೊಸತನವನ್ನು ಹುಟ್ಟು ಹಾಕಿದೆ. ಬಿಡುಗಡೆಯಾಗಿ ಮೂರು ದಿನವಾಗಿದ್ದು ಅಭಿಮಾನಿಗಳಿಂದ (Fans) ಹಾಗೂ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಈ ಸೂಪರ್ ಸಿನಿಮಾ ನೋಡಲು ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಅವರಿಗೆ ಆಹ್ವಾನ ನೀಡಲಾಗಿದೆ.

ಸಿಎಂ ಇಂದು ಸಿನಿಮಾ ನೋಡುವ ಸಾಧ್ಯತೆ

777 ಚಾರ್ಲಿ‌ ಚಿತ್ರತಂಡ ಸಿಎಂ ಬೊಮ್ಮಾಯಿ (CM) ಅವರಿಗೆ ಆಹ್ವಾನ ನೀಡಿದ್ದು, ಇಂದು ಸಂಜೆ ಶೋ ನೋಡಲು ಬರುವಂತೆ ಮನವಿ ಮಾಡಿದ್ದಾರೆ.  ಚಿತ್ರತಂಡದ ಮನವಿಗೆ ಸಿಎಂ ಸ್ಪಂದಿಸಿದ್ದು, ಸಾಧ್ಯವಾದರೆ ಚಿತ್ರದ ವೀಕ್ಷಣೆಗೆ ಬರೋದಾಗಿ ಸಿಎಂ ಹೇಳಿದ್ದಾರೆ. ಮೂಲಗಳ ಪ್ರಕಾರ ಚಾರ್ಲಿ ಚಿತ್ರ ನೋಡಲು ಸಿಎಂ ಹೋಗುವ ಸಾಧ್ಯತೆ ಇದ್ದು ಇಂದು ಸಂಜೆ ಒರಾಯನ್ ಮಾಲ್ ನಲ್ಲಿ ಚಾರ್ಲಿ ಸಿನಿಮಾ ನೋಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಸಿಎಂಗೆ ಬೊಮ್ಮಾಯಿಗೆ ಸಹ ನಾಯಿ ಎಂದರೆ ಬಹಳ ಇಷ್ಟ.  ಅವರ ಮನೆಯಲ್ಲಿ ಸಹ ಸನ್ನಿ ಎನ್ನುವ ನಾಯಿ ಇತ್ತು. ಕಳೆದ ವರ್ಷ ಆ ನಾಯಿ ನಿಧನವಾಗಿತ್ತು, ಆ ಸಮಯದಲ್ಲಿ ಸಿಎಂ ಸಹ ಬಹಳ ಭಾವುಕರಾಗಿದ್ದರು. ಹಾಗಾಗಿ ಅವರಿಗೆ ಈ ಸಿನಿಮಾ ಬಹಳ ಇಷ್ಟವಾಗುತ್ತದೆ ಎನ್ನಬಹುದು.

ಇನ್ನು ಚಾರ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ. ಅದರಲ್ಲೂ ವೀಕೆಂಡ್​ಗಳಲ್ಲಿ (Weekend) ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಟಿಕೆಟ್​ ಸಿಗದೆ ಹಲವರಿಗೆ ಬೇಸರ ಉಂಟಾಗಿರುವುದು ಸಹ ಇದೆ. ಮೀಡಿಯಂ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸಿನಿಪ್ರಿಯರ ಮನ ಗೆಲ್ಲುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಮನುಷ್ಯ ಮತ್ತು ನಾಯಿಯ ನಡುವಿನ ಭಾವನಾತ್ಮಕ ಸಂಬಂಧದ ಕಥೆಯಾಗಿದ್ದು, ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ.

ಚಿತ್ರವು ವಿಮರ್ಶಕರು ಮತ್ತು ಚಲನಚಿತ್ರ ಪ್ರೇಮಿಗಳಿಂದ ಈ ಸಿನಿಮಾ ಉತ್ತಮ ವಿಮರ್ಶೆ ಪಡೆಯುತ್ತಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ 6 ಕೋಟಿ ಗಳಿಕೆ ಮಾಡಿತ್ತು. ಇನ್ನು ಎರಡನೇ ದಿನ ಹೆಚ್ಚಿನ ಕಲೆಕ್ಷನ್ ಮಾಡಿದ್ದು, 8 ಕೋಟಿ ರೂ ಗಳಿಸಿದೆ. ಮೊದಲ ದಿನದ ಕಲೆಕ್ಷನ್ 6.5 ಕೋಟಿಗಳೊಂದಿಗೆ ಹೋಲಿಸಿದರೆ, ಇದು 23% ರಷ್ಟು ಉತ್ತಮ ಬೆಳವಣಿಗೆ ಕಂಡಿದೆ. ಈ ಸಿನಿಮಾ ಭಾರತದಾದ್ಯಂತ ಒಟ್ಟು 14.5 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಮೂರನೇ ದಿನವೂ ಮುಂದುವರಿದ ಚಾರ್ಲಿ ಅಬ್ಬರ, ಟಿಕೆಟ್​ ಸಿಗದೇ ಅಭಿಮಾನಿಗಳಿಗೆ ನಿರಾಸೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕಲೆಕ್ಷನ್

777 ಚಾರ್ಲಿಯು ಕನ್ನಡ ಮಾರ್ಕೆಟ್‌ನಿಂದ ಹೆಚ್ಚಿನ ಕಲೆಕ್ಷನ್‌ ಮಾಡುತ್ತಿದೆ. ಆದರೆ ಹಿಂದಿ ಮಾರ್ಕೆಟ್​ ನಲ್ಲಿ ನಟನ ಬಗ್ಗೆ ಹೆಚ್ಚು ಗೊತ್ತಿಲ್ಲದ ಕಾರಣ ಕಲೆಕ್ಷನ್ ಹೇಳಿಕೊಳ್ಳುವ ರೀತಿ ಇಲ್ಲ. ಟ್ರೆಂಡ್‌ಗಳ ಪ್ರಕಾರ,  3 ನೇ ದಿನದ ಕಲೆಕ್ಷನ್‌ನ ಸಹ ಹೆಚ್ಚಿದ್ದು, ಚಿತ್ರ ನೊಡಲು ಜನಸಾಗರವೇ ಹರಿದು ಬರುತ್ತಿದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ಪ್ರದರ್ಶನಗಳ ಕಡೆಗೆ ಜನರು ಒಲವು ತೋರಿದ್ದು, ಥಿಯೇಟರ್​ಗಳು ಫುಲ್​ ಆಗುತ್ತಿವೆ

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು  ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.ಇದು ಈ ಚಿತ್ರದ ಎಳೆಯಾಗಿದ್ದು, ಜನರು ಮಿಸ್​ ಮಾಡದೇ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೊಡ್ಡ ಪರದೆಯಲ್ಲಿ ತನ್ನನ್ನೇ ತಾನು ನೋಡಿ ಬೌ ಬೌ ಎಂದ ಚಾರ್ಲಿ, ವಿಡಿಯೋ ಸಖತ್ ಕ್ಯೂಟ್​

ಕನ್ನಡ ಸಿನೆಮಾ ಹಿಸ್ಟರಿಯಲ್ಲಿ ವಿಭಿನ್ನ ರೀತಿಯ ದಾಖಲೆ ಮಾಡುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ. ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ.
Published by:Sandhya M
First published: