ಸೆಲೆಬ್ರಿಟಿ(Celebrity) ಮಕ್ಕಳು ಸೆಲೆಬ್ರಿಟಿ ಆಗಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ನಟ-ನಟಿಯರ ಫ್ಯಾನ್ಸ್ ಅವರ ಮಕ್ಕಳಿನ್ನೂ ಇಷ್ಟ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಮಕ್ಕಳು ಬೇಗ ಫೇಮಸ್(Famous) ಆಗುತ್ತಾರೆ. ಅದಕ್ಕೆ ತಕ್ಕ ಉದಾಹರಣೆ ಅಂದರೆ ಸೈಫ್ ಅಲಿ ಖಾನ್(Saif Ali Khan), ಕರೀನಾ ಕಪೂರ್(Kareena Kapoor) ಅವರ ಪುತ್ರ ತೈಮೂರ್ ಅಲಿ ಖಾನ್(Taimur Ali Khan). ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ‘ಟೈಗರ್’ ಅಂತಲೇ ಕರೆಸಿಕೊಳ್ಳುತ್ತಾರೆ. ಮಕ್ಕಳು ಮನೆಯಲ್ಲಿ ಟಿವಿ ನೋಡಿದರೆ ಪೋಷಕರು ಬೈಯುತ್ತಾರೆ. ಪರೀಕ್ಷೆ ಹತ್ತಿರ ಬರುತ್ತಿದೆ ಓದು ಎಂದು ಬೈಯುತ್ತಾರೆ. ಆದರೆ, ಪ್ರಶ್ನೆ ಪತ್ರಿಕೆ(Question Paper)ಯಲ್ಲೇ ಸಿನಿಮಾ ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದರೆ , ಆ ಮಕ್ಕಳು ಏನ್ ಮಾಡಬೇಕು ಹೇಳಿ. ಹೌದು, ಕೇಳಲು ವಿಚಿತ್ರ ಎನಿಸಿದರು ನಿಜ. ಈಗ ಸುದ್ದಿಯಾಗಿರುವ ವಿಚಾರ ಎಲ್ಲರಲ್ಲಿಯೂ ಆಶ್ಚರ್ಯವನ್ನುಂಡು ಮಾಡಿದೆ.ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಪುತ್ರ ತೈಮೂರ್ ಅಲಿ ಖಾನ್ (Taimur Ali Khan) ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಆ ಪ್ರಶ್ನೆ ಪತ್ರಿಕೆ ಕೂಡ ಈಗ ವೈರಲ್ ಆಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಈ ಪ್ರಶ್ನೆ ಪತ್ರಿಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
6ನೇ ಕ್ಲಾಸ್ ಮಕ್ಕಳಿಗೆ ಸೈಫ್ ಮಗನ ಪ್ರಶ್ನೆ!
ಸೈಫ್-ಕರೀನಾ ದಂಪತಿ ತಮ್ಮ ಮಗನ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತ ಇರುತ್ತಾರೆ. ಈಗ ಶಾಲೆಯೊಂದರ ಪರೀಕ್ಷೆಯಲ್ಲೂ ತೈಮೂರ್ ಅಲಿ ಖಾನ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಧ್ಯ ಪ್ರದೇಶದ ಖಾಸಗಿ ಶಾಲೆ. ಅಲ್ಲಿನ 6ನೇ ತರಗತಿ ಮಕ್ಕಳಿಗೆ ‘ಪ್ರಚಲಿತ ಘಟನೆಗಳು’ ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಕೇಳಲಾದ ಪ್ರಶ್ನೆ ಈ ರೀತಿ ಇದೆ. ‘ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರನ ಪೂರ್ತಿ ಹೆಸರು ಬರೆಯಿರಿ’ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪ್ರತಿಕೆಯ ಫೋಟೋ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಈ ರೀತಿ ಪ್ರಶ್ನೆ ಕೇಳಿರುವ ಶಾಲೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : ಕರೀನಾ ಕಪೂರ್ ಭಾವುಕರಾಗಿದ್ದು ಏಕೆ..? ಮಕ್ಕಳನ್ನು ಮಿಸ್ ಮಾಡ್ಕೊಂಡ ಬೆಬೋ..!
ಪ್ರಶ್ನೆ ಪತ್ರಿಕೆ ವಿರುದ್ಧ ತೀವ್ರ ಆಕ್ರೋಶ
ತೈಮೂರ್ ಅಲಿ ಖಾನ್ ಹುಟ್ಟಿದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾನೆ. ತೈಮೂರ್ ಫೋಟೋವನ್ನು ಗೂಗಲ್ನಲ್ಲಿ ಅಭಿಮಾನಿಗಳು ಅತಿ ಹೆಚ್ಚಾಗಿ ಸರ್ಚ್ ಮಾಡುತ್ತಲಿರುತ್ತಾರೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ತೈಮೂರ್ ಕುರಿತಾಗಿ ಒಂದು ಪ್ರಶ್ನೆ ಬರುತ್ತದೆ ಎಂದು ಯಾರೂ ನೀರಿಕ್ಷೆ ಮಾಡಿರುವುದಿಲ್ಲ. ಇಂಥ ಪ್ರಶ್ನೆಗಳನ್ನು ಕೇಳಿದ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ ಈ ಕುರಿತಂತೆ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ.
ಇದನ್ನು ಓದಿ : ಪಟೌಡಿ ರಾಜಕುಮಾರ ತೈಮೂರ್ಗಿಂದು ಜನ್ಮದಿನ: ಅಂಬೆಗಾಲಿಡುತ್ತಿರುವ ವಿಡಿಯೋ ಶೇರ್ ಮಾಡಿದ ಕರೀನಾ ಕಪೂರ್!
ಮೊನ್ನೆಯಷ್ಟೇ ಹುಟ್ಟಹಬ್ಬ ಆಚರಿಸಿಕೊಂಡ ತೈಮೂರ್ ಆಲಿ ಖಾನ್!
ಕರೀನಾ ಪುತ್ರ ತೈಮೂರ್ ಎಲ್ಲೆ ಹೋದರು ಅಲ್ಲೊಂದು ಸುದ್ದಿ ಆಗೇ ಹೋಗಿರುತ್ತೆ. ಅಷ್ಟರ ಮಟ್ಟಿಗೆ ಕ್ಯೂಟ್(Cute) ಆಗಿರೋ ತೈಮರ್ ಅಲಿ ಖಾನ್ಗೆ ಬೇಕಾದಷ್ಟು ಅಭಿಮಾನಿಗಳಿದ್ದಾರೆ.ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಏಕೈಕ ಪುತ್ರನಾಗಿರುವ ತೈಮೂರ್ ಡಿಸೆಂಬರ್ 20ರಂದು 5ನೇ ವರ್ಷ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ