Urfi Javed: ಇಲ್ನೋಡ್ರಿ ಈಕೆಗೆ​ ಉರ್ಫಿನೇ ಸ್ಫೂರ್ತಿ ಅಂತೆ! 12 ವರ್ಷದ ಹುಡುಗಿ ಅವತಾರ ಕಂಡು ನೆಟ್ಟಿಗರು ಶಾಕ್​

Viral video: ಈ ಕಾಲೇಜು ವಿದ್ಯಾರ್ಥಿನಿಯ ಡಿಫರೆಂಟ್ ಉಡುಗೆಯು ಉರ್ಫಿಯನ್ನು ಸೂಪರ್ ಇಂಪ್ರೆಸ್ ಮಾಡಿದೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹುಡುಗಿಯ ಫೋಟೋವನ್ನು ಉರ್ಫಿ ಹಂಚಿಕೊಂಡಿದ್ದಾರೆ.

ಪೇಪರ್ ಉಡುಗೆ ತೊಟ್ಟ ಜೂನಿಯರ್ ಉರ್ಫಿ

ಪೇಪರ್ ಉಡುಗೆ ತೊಟ್ಟ ಜೂನಿಯರ್ ಉರ್ಫಿ

  • Share this:
ಸೋಷಿಯಲ್ ಮೀಡಿಯಾ (Social Media)  ಹೆಚ್ಚಿದಾಗಿನಿಂದ ಜನರು ಚಿತ್ರ ವಿಚಿತ್ರ ಫೋಟೋ (Photo) ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಹೆಚ್ಚಿದೆ.  ಯಾವುದೇ ವಯಸ್ಸಿನ (Age) ಭೇದವಿಲ್ಲದೆ  ಹೈ ಸ್ಕೂಲ್​ಗೆ ಹೋಗುವ ಮಕ್ಕಳಿಂದ ಹಿಡಿದು ವಯಸ್ಕರವರೆಗೂ  ವಿಡಿಯೋಗಳನ್ನು ಮಾಡುವುದು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಅವುಗಳನ್ನು ಹಂಚಿಕೊಂಡು ಜನರಿಂದ ಮೆಚ್ಚುಗೆ (Like) ಪಡೆಯಲು ಬಯಸುತ್ತಾರೆ.  ಈ ಮೆಚ್ಚುಗೆ ಪಡೆಯುವುದಕ್ಕಾಗಿ ಜನರು ಏನೆಲ್ಲಾ ಮಾಡ್ತಾರೆ ಗೊತ್ತಾ?  12 ವರ್ಷದ ಹುಡುಗಿಯೊಬ್ಬಳು ನ್ಯೂಸ್ ಪೇಪರ್ ಉಡುಗೆ ತೊಟ್ಟು ವಿಡಿಯೋ ಮಾಡಿದ್ದಾರೆ. ಈಕೆಗೆ ಸ್ಫೂರ್ತಿಯಾಗಿದ್ದು ಬಾಲಿವುಡ್ ಫ್ಯಾಷನ್​ ಡಿಸಾಸ್ಟರ್​ ಅಂತ ಕರೆಸಿಕೊಳ್ಳುವ ಉರ್ಫಿ ಜಾವೇದ್​ ಅಂತೆ.

ಪೇಪರ್​ ಸುತ್ತಿಕೊಂಡು ಬಂದ 12 ವರ್ಷದ ಹುಡುಗಿ!

ಕೆಲವು ಕಿರುತೆರೆ ನಟಿಯರು ಮತ್ತು ಮಾಡೆಲ್​​ಗಳು ತುಂಡು ಬಟ್ಟೆ ಧರಿಸಿಕೊಂಡು ಕ್ಯಾಮರಾಗೆ ಮಾದಕವಾಗಿ ಪೋಸ್ ನೀಡುವುದರಿಂದ ಹಿಡಿದು ಬೋಲ್ಡ್​ ಬಟ್ಟೆಗಳನ್ನು ಧರಿಸಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ  ಹಂಚಿಕೊಳ್ಳುತ್ತಾರೆ.  ಸದಾ ಹೀಗೆ ತಮ್ಮ ಮಾದಕ ನೋಟ ಮತ್ತು ಚಿತ್ರ ವಿಚಿತ್ರವಾದ ಬಟ್ಟೆಗಳಿಂದ ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು. ಯಾರು ಆ ಮಾಡೆಲ್ ಅಂತ ಕೇಳ್ತೀರಾ? ಆ ಮಾಡೆಲ್ ಬೇರೆ ಯಾರು ಅಲ್ಲ ಕಣ್ರೀ, ಅವರೇ ಉರ್ಫಿ ಜಾವೇದ್.

ವೈರಲ್ ಆಯ್ತು ಪೋಸ್ಟ್:

ಉರ್ಫಿ ಜಾವೇದ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪೋಸ್ಟ್​​ಗಳ ಮೂಲಕ ಸದಾ  ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ಸುಳ್ಳಾಗದು. ಇವರು ಮಾಡುವ ಕೆಲಸಕ್ಕಿಂತಲೂ ಹೆಚ್ಚಾಗಿ ಉರ್ಫಿ ಜಾವೇದ್ ಅವರು ಔಟ್‌ಫಿಟ್‌ಗಳ ವಿಚಾರದಲ್ಲೇ ಹೆಚ್ಚು ಬಾರಿ ಟ್ರೋಲ್ ಆಗಿದ್ದಾರೆ ಅಂತ ಹೇಳಬಹುದು. ಈಗಂತೂ ಉರ್ಫಿ ಅಂತ ಹೆಸರು ಬಂದರೆ ಸಾಕು ಜನರು ಮೊದಲು ಆಕೆ ತೊಟ್ಟಿರುವ ಬಟ್ಟೆ ಹೇಗಿದೆ ಅಂತ ನೋಡುತ್ತಾರೆ.

ಇದನ್ನೂ ಓದಿ: ಯಾರೋ ಅದು ಉರ್ಫಿ ಹಾರ್ಟ್ ಬ್ರೇಕ್​ ಮಾಡಿದ್ದು? ಬೇಜಾರಲ್ಲಿ ಅದೇ ಅವತಾರದಲ್ಲೇ ಬಂದಿದ್ದಾರೆ!

ಉರ್ಫಿ ಜಾವೇದ್ ಅವರೇ ಈಕೆಗೆ ಸ್ಫೂರ್ತಿಯಂತೆ!

ತನ್ನ ಚಿತ್ರ ವಿಚಿತ್ರವಾದ ಬಟ್ಟೆಗಳಿಂದ ಇಡೀ ದೇಶದ ಜನರ ಗಮನ ಸೆಳೆದ ಉರ್ಫಿ ಜಾವೇದ್ ಅವರನ್ನು ಈಗ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಅನುಕರಿಸಿದ್ದಾಳೆ ಅಂತ ಹೇಳಿದರೆ ನೀವು ಒಂದು ಕ್ಷಣ ನಂಬಲಿಕ್ಕಿಲ್ಲ. ಆದರೆ ಇದು ಸತ್ಯ, ಉರ್ಫಿ ಆಗಾಗ್ಗೆ ಕೆಲವು ಬೇರೆ ಬೇರೆ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಸಹ ಧರಿಸುತ್ತಿದ್ದಳು. ವಯರ್,  ರಗ್ಗು , ಪ್ಲಾಸ್ಟಿಕ್ ಕವರ್, ಬ್ಲೇಡ್ , ಸೇಫ್ಟಿ ಪಿನ್  ಮತ್ತು ಹೂವುಗಳಿಂದ ಹಿಡಿದು ಎಲ್ಲಾರೀತಿಯ ವಸ್ತುಗಳಿಂದ  ತಯಾರಿಸಿದ ಉಡುಪುಗಳನ್ನೂ ಧರಿಸಿದ್ದಾರೆ. ಈಗ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು  ನ್ಯೂಸ್ ಪೇಪರ್​​ನಿಂದ  ಮಾಡಿದ ಉಡುಗೆ ತೊಟ್ಟುಕೊಂಡಿದ್ದಾಳೆ.








View this post on Instagram






A post shared by paper queen (@apeksharai97)





ಉರ್ಫಿ ಇಂಪ್ರೆಸ್:

ಈ ಕಾಲೇಜು ವಿದ್ಯಾರ್ಥಿನಿಯ ಡಿಫರೆಂಟ್ ಉಡುಗೆಯು ಉರ್ಫಿಯನ್ನು ಸೂಪರ್ ಇಂಪ್ರೆಸ್ ಮಾಡಿದೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹುಡುಗಿಯ ಫೋಟೋವನ್ನು ಹಂಚಿಕೊಂಡ ಉರ್ಫಿ 'ಈ ಹುಡುಗಿ ಖಂಡಿತವಾಗಿಯೂ ಸ್ವಲ್ಪ ಕೌಶಲ್ಯವನ್ನು ಹೊಂದಿದ್ದಾಳೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕೆಂಪು, ಬಿಳಿ, ನೀಲಿ ಹೂಗಳನ್ನು ದೇಹಕ್ಕೆ ಅಂಟಿಸಿದ ಉರ್ಫಿ! ಅಬ್ಬಾ ಸಾಕಮ್ಮಾ ಅಂತಿದ್ದಾರೆ ನೆಟ್ಟಿಗರು

ಅಪೇಕ್ಷಾ ರೈ ವೀಡಿಯೋ:

ಆ ಹುಡುಗಿ ಹೆಸರು ಅಪೇಕ್ಷಾ ರೈ ಅವಳು ನ್ಯೂಸ್ ಪೇಪರ್​​ನಿಂದ ತಯಾರಿಸಿದ ಉಡುಪನ್ನು ತೊಟ್ಟು ತನ್ನನ್ನು ತಾನು ‘ಪೇಪರ್ ಕ್ವೀನ್’ ಎಂದು ಕರೆದುಕೊಂಡಿದ್ದಾಳೆ. ಅಪೇಕ್ಷಾ ರೈ ಅವರ ಇನ್ಸ್ಟಾಗ್ರಾಮ್  ಪುಟದಲ್ಲಿ  ಅನೇಕ ವಿಡಿಯೋಗಳಿವೆ, ಇದರಲ್ಲಿ ಅವರು ಗೌನ್, ಸೀರೆ, ಸ್ಕರ್ಟ್ ಮತ್ತು ಫ್ರಾಕ್ ನಂತಹ ವಿವಿಧ ರೀತಿಯ ಬಟ್ಟೆಗಳನ್ನು ನ್ಯೂಸ್ ಪೇಪರ್​​ನಿಂದಲೇ ಮಾಡಿ ಧರಿಸಿಕೊಂಡಿದ್ದಾರೆ.

ಲೈಕ್​​ಗಳ ಸುರಿಮಳೆ:

ಇವರು ಬಾರ್ಬಿ ಕ್ವೀನ್​ ಗೊಂಬೆಯ ಉಡುಗೆಯನ್ನು ಸಹ ಪೇಪರ್ ನಿಂದ ಮಾಡಿ ಧರಿಸಿಕೊಂಡ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ 4,000ಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ. ಪೇಪರ್​​ನಲ್ಲಿ ಡ್ರೆಸ್ ಮಾಡಿಕೊಂಡು ಧರಿಸಿ ಅದಕ್ಕೆ ಹಿನ್ನಲೆಯಾಗಿ ಹಾಡನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿರುವ ವೀಡಿಯೋವನ್ನು ಸಹ ಈಕೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸುಮಾರು 29,000ಕ್ಕೂ ಹೆಚ್ಚು ಲೈಕ್ ಗಳು ಬಂದಿರುವುದನ್ನು ಗಮನಿಸಬಹುದು.
First published: