Puneeth Rajkumar: ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಗಲಾಟೆ: ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ..!

Yuvarathna Movie: ಸಂತೋಷ್​ ರಾಮ್​ ನಿರ್ದೇಶನದ ಯುವರತ್ನ ಚಿತ್ರದ ಚಿತ್ರೀಕರಣ ನಿನ್ನೆ ಮೈಸೂರಿನ ಮಹಾರಾಜ ಕಾಲೇಜಿನ ಒಳಾಂಗಣದಲ್ಲಿ ನಡೆಯುತ್ತಿತ್ತು. ಈ ವೇಳೆ ಅಲ್ಲಿ ವಿದ್ಯಾರ್ಥಿಗಳು ಹಾಗೂ ಚಿತ್ರತಂಡದ ನಡುವೆ ಗಲಾಟೆ ನಡೆದಿದೆ.

Anitha E | news18-kannada
Updated:September 10, 2019, 1:42 PM IST
Puneeth Rajkumar: ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಗಲಾಟೆ: ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ..!
ಮೈಸೂರಿನಲ್ಲಿ ಯುವರತ್ನ ಚಿತ್ರವೇಳೆ ಗಲಾಟೆ
  • Share this:
'ಯುವರತ್ನ' ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಾಲೇಜು ದೃಶ್ಯಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲೇ ಚಿತ್ರೀಕರಿಸಲಾಗುತ್ತಿದೆ.

ಸಂತೋಷ್​ ರಾಮ್​ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ನಿನ್ನೆ ಕಾಲೇಜಿನ ಒಳಾಂಗಣದಲ್ಲಿ ನಡೆಯುತ್ತಿತ್ತು. ಆಗ ಪುನೀತ್ ಅವರೂ ಅಲ್ಲೇ ಇದ್ದರು. ಕಾಲೇಜು ನಡೆಯುತ್ತಿರುವಾಗಲೇ ಚಿತ್ರೀಕರಣ ನಡೆಯುತ್ತಿದ್ದ ಕಾರಣ ವಿದ್ಯಾರ್ಥಿಗಳು ಅಲ್ಲೇ ಇದ್ದ ಪುನೀತ್​ ಅವರನ್ನು ನೋಡಲು ಮುಗಿಬಿದ್ದಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 'ಯುವರತ್ನ' ಚಿತ್ರೀಕರಣದ ವೇಳೆ ಗಲಾಟೆ


ಸುಮಾರು 2ರಿಂದ 3 ಗಂಟೆ ಸಮಯದಲ್ಲಿ ಚಿತ್ರೀಕರಣ ಮುಗಿಸಿ, ಪುನೀತ್​ ಅವರು ಅಲ್ಲಿಂದ ಹೋಗುವಾಗ ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಬೌನ್ಸರ್​ಗಳು ವಿದ್ಯಾರ್ಥಿಗಳನ್ನು ಪಡೆದಿದ್ದಾರೆ. ಆಗ ಬೌನ್ಸರ್​ಗಳು ಹಾಗೂ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಗಲಾಟೆಯಾದಾಗ ಪುನೀತ್​ ಅವರ ಮೇಲೆ ಅಸಮಾಧಾನಗೊಂಡ ವಿದ್ಯಾರ್ಥಿಗಳು ಡಿಬಾಸ್​ ಹಾಗೂ ಕಿ್ಚಚನ ಹೆಸರುಗಳನ್ನು ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ..!

ಬೌನ್ಸರ್​ ವಿದ್ಯಾರ್ಥಿಗಳನ್ನು ತಳ್ಳಾಡಿದ್ದಾರೆ. ಅದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಅಲ್ಲೇ ಕ್ಷಮಾಪಣೆ ಕೇಳುವಂತೆ ಪ್ರತಿಭಟಿಸಿದ್ದಾರೆ. ಈ ವಿಷಯ ತಿಳಿದು ಕಾಲೇಜಿನ ಪ್ರಾಂಶುಪಾಲರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರಂತೆ.

ಈಗ ಸಮಸ್ಯೆ ಬಗೆಹರೆದಿದ್ದು, ಇಂದು ಮೊಹರಂ ಹಬ್ಬಕ್ಕೆಂದು ರಜೆ ಇರುವ ಕಾರಣದಿಂದ ಅಲ್ಲೇ ಚಿತ್ರೀಕರಣ ಮುಂದುವರೆಸುತ್ತಿದೆಯಂತೆ 'ಯುವರತ್ನ' ಚಿತ್ರತಂಡ. ಈ ಸಿನಿಮಾ ಚಿತ್ರೀಕರಣದಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದ್ದು, ಚಿತ್ರೀಕರಣಕ್ಕೆ ಅನುಮತಿ ನೀಡದಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ ಎನ್ನಲಾಗಿದೆ. 

Tanya Hope: ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಪಡ್ಡೆಗಳ ನಿದ್ದೆ ಕೆಡಿಸಿದ 'ಯಜಮಾನ'ನ ಬಸಣ್ಣಿ ತಾನ್ಯಾ..!

First published: September 10, 2019, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading