ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ (Ranveer Singh) ಅವರು ಬಾಲಿವುಡ್ನಲ್ಲಿ (Bollywood) ಜೊತೆಯಾಗಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗ ಈ ಜೋಡಿ ಮತ್ತೆ ಸರ್ಕಸ್ (Cirkus) ಸಿನಿಮಾ ಮೂಲಕ ಜೊತೆಯಾಗುತ್ತಿದ್ದಾರೆ. ಈ ಹಿಂದೆ 83 ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರೂ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ. ಆದರೆ ಈಗ ಸರ್ಕಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಬಾಲಿವುಡ್ನ ಈ ಕ್ಯೂಟ್ ಜೋಡಿ ತೆರೆಯ ಮೇಲೆಯೂ ಹಿಟ್ ಜೋಡಿಯಾಗಿ ಫೇಮಸ್. ಮದುವೆಯಾದ (Marriage) ನಂತರ ಇದೀಗ ಇವರು ಜೊತೆಯಾಗಿ ಎರಡನೇ ಸಿನಿಮಾ ಮಾಡುತ್ತಿದ್ದು ಇದರ ಬಗ್ಗೆ ಅಭಿಮಾನಿಗಳಲ್ಲಿ (Fans) ಕುತೂಹಲ ಹೆಚ್ಚಾಗಿದೆ.
'ಕರೆಂಟ್ ಲಗಾ ರೇ' ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸುವಾಗ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪೆಪ್ಪಿ ಡ್ಯಾನ್ಸ್ ಸಾಂಗ್ಗೆ ಹೆಜ್ಜೆ ಹಾಕುವುದು ಕಂಡುಬಂದಿದೆ. "ಕರೆಂಟ್ ಲಗಾ ರೇ!!! ಹಾಡು ನಾಳೆ ರಿಲೀಸ್ ಆಗುತ್ತದೆ. ಸರ್ಕಸ್ ಈ ಕ್ರಿಸ್ಮಸ್ ಎಂದು ಅವರು ಬರೆದಿದ್ದಾರೆ.
ಟ್ರೈಲರ್ ಲಾಂಚ್ನಲ್ಲಿ, ರಣವೀರ್ ಸಿಂಗ್ ಹಾಡಿನಲ್ಲಿ ದೀಪಿಕಾ ಅವರ ಅತಿಥಿ ಪಾತ್ರದ ಬಗ್ಗೆ ಮಾತನಾಡುತ್ತಿದ್ದರು. ದೀಪಿಕಾ ಅವರ ಎಂಟ್ರಿ ಹಾಗೂ ಪಾತ್ರ 'ಜಬರ್ದಸ್ತ್' ಮತ್ತು 'ಹೈ ವೋಲ್ಟೇಜ್' ಎಂದು ಕರೆದಿದ್ದಾರೆ. ಹಾಡನ್ನು ನೋಡಿದ ನಂತರ ದೀಪಿಕಾ ಅವರ ಪ್ರತಿಕ್ರಿಯೆಯ ಬಗ್ಗೆ ರಣವೀರ್ ಉತ್ತರಿಸಿದ್ದಾರೆ.
ರಣವೀರ್ ರೋಹಿತ್ ಶೆಟ್ಟಿ ಕಡೆಗೆ ತಿರುಗಿ ಅವರು ನಿನ್ನೆ ಸಾಂಗ್ ನೋಡಲು ನನ್ನ ಆಫೀಸ್ಗೆ ಬಂದಿದ್ದರು. ಬಾಸ್ (ರೋಹಿತ್ ಶೆಟ್ಟಿ) ಅವರಿಗೆ ಹಾಡನ್ನು ತೋರಿಸಿದರು. ಬಾಸ್, ಅತ್ತಿಗೆಗೆ ಸಾಂಗ್ ಇಷ್ಟವಾಯ್ತಾ? ಎಂದು ಕೇಳಿದ್ದಾರೆ. ಆದರೆ ಇಲ್ಲಿ ರೋಹಿತ್ ಶೆಟ್ಟಿ ಉತ್ತರಿಸುವ ಮೊದಲೇ ಸಭಿಕರಿಂದ ಯಾರೋ ಒಬ್ಬರು "ಇಷ್ಟವಾಯ್ತು, ಇಷ್ಟವಾಯ್ತು" ಎಂದು ಕೂಗಿದರು.
View this post on Instagram
ಸರ್ಕಸ್ ಸಿನಿಮಾ ದಿ ಕಾಮಿಡಿ ಆಫ್ ಎರರ್ಸ್ ಅನ್ನು ಆಧರಿಸಿದೆ. ಸಿನಿಮಾವನ್ನು 1960 ರ ದಶಕದಲ್ಲಿ ಸೆಟ್ ಮಾಡಲಾಗಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಜಾಕ್ಲಿನ್ ಫರ್ನಾಂಡೀಸ್, ಜಾನಿ ಲಿವರ್, ಸಿದ್ಧಾರ್ಥ್ ಜಾಧವ್, ಟಿಕು ತಲ್ಸಾನಿಯಾ, ಸಂಜಯ್ ಮಿಶ್ರಾ, ವಿಜಯ್ ಪಾಟ್ಕರ್, ಅಶ್ವಿನಿ ಕಲ್ಸೇಕರ್, ಮುಕೇಶ್ ತಿವಾರಿ, ವ್ರಾಜೇಶ್ ಹಿರ್ಜಿ, ಬ್ರಿಜೇಂದ್ರ ಕಲಾ ಇತರರು ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ 2022 ರ ಡಿಸೆಂಬರ್ 23 ರಂದು ಕ್ರಿಸ್ಮಸ್ ಸಂದರ್ಭ ಬಿಡುಗಡೆಯಾಗಲಿದೆ.
ದೀಪಿಕಾ-ರಣವೀರ್ ಹಿಟ್ ಸಿನಿಮಾಗಳು
ಈ ಜೋಡಿ ಬಾಜಿರಾವ್ ಮಸ್ತಾನಿ, ರಾಮ್ ಲೀಲಾ, ಮದ್ಮಾವತ್ ಅಂತಹ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ. ಈ ಜೋಡಿ ಕೆಮೆಸ್ಟ್ರಿ ತುಂಬಾ ಸ್ಪೆಷಲ್ ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅಂತೂ ಈಗ ಬಾಲಿವುಡ್ ಸ್ಟಾರ್ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದು ಪ್ರೇಕ್ಷಕರು ಕುತೂಹಲದಿಂದ ಹಾಡಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಗೆಹರಾಯಿಯಾ ಫ್ಲಾಪ್
ದೀಪಿಕಾ ಪಡುಕೋಣೆ ನಟಿಸಿದ್ದ ಗೆಹರಾಯಿಯಾ ಸಿನಿಮಾ ರಿಲೀಸ್ಗೆ ಮೊದಲು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದರೂ ರಿಲೀಸ್ ಆದಾಗ ಸಪ್ಪೆ ಎನಿಸಿಕೊಂಡಿತು. ಸಿನಿಮಾ ಪ್ರೇಕ್ಷಕರ ನಿರೀಕ್ಷೆಗಳೆಲ್ಲವನ್ನು ಹುಸಿಗೊಳಿಸಿ ಫ್ಲಾಪ್ ಆಗಿದೆ. ಇದರಲ್ಲಿ ನಟ ಸಿದ್ಧಾಂತ್ ಚತುರ್ವೇದಿ ಹಾಗೂ ನಟಿ ಅನನ್ಯಾ ಪಾಂಡೆ ಕೂಡಾ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ