HOME » NEWS » Entertainment » CINEMA HALLS ALLOWED TO HAVE FULLY SEATING FROM FEB 1ST SNVS

ಚಿತ್ರೋದ್ಯಮಕ್ಕೆ ಸಿಹಿ ಸುದ್ದಿ: ಥಿಯೇಟರ್​ಗಳಲ್ಲಿ ಶೇ. 100 ಸೀಟಿಂಗ್​ಗೆ ಕೇಂದ್ರ ಅನುಮತಿ; ಹೊಸ ಮಾರ್ಗಸೂಚಿ ಪ್ರಕಟ

ಶೇ. 50ರಷ್ಟು ಸೀಟಿಂಗ್​ಗೆ ಮಾತ್ರ ಅವಕಾಶ ಹೊಂದಿದ್ದ ಚಿತ್ರಮಂದಿರಗಳಲ್ಲಿ ಫೆ. 1ರಿಂದ ಎಲ್ಲಾ ಸೀಟು ಭರ್ತಿ ಮಾಡಲು ಅನುಮತಿ ಸಿಕ್ಕಿದೆ. ಕೇಂದ್ರ ಸರ್ಕಾರ ನಿನ್ನೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

news18-kannada
Updated:January 31, 2021, 8:03 AM IST
ಚಿತ್ರೋದ್ಯಮಕ್ಕೆ ಸಿಹಿ ಸುದ್ದಿ: ಥಿಯೇಟರ್​ಗಳಲ್ಲಿ ಶೇ. 100 ಸೀಟಿಂಗ್​ಗೆ ಕೇಂದ್ರ ಅನುಮತಿ; ಹೊಸ ಮಾರ್ಗಸೂಚಿ ಪ್ರಕಟ
ಸಿನಿಮಾ ಥಿಯೇಟರ್
  • Share this:
ನವದೆಹಲಿ: ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಎಲ್ಲಾ ಸೀಟ್​ಗಳನ್ನ ಭರ್ತಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸದ್ಯ ಶೇ. 50ರಷ್ಟು ಸೀಟಿಂಗ್​ಗೆ ಮಾತ್ರ ಅವಕಾಶ ಇದೆ. ಫೆ. 1, ಅಂದರೆ ನಾಳೆಯಿಂದ ಶೇ. 100 ಸೀಟಿಂಗ್​ಗೆ ಅನುಮತಿ ಇದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆ ನಿನ್ನೆ ಸಂಜೆಯ ನಂತರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಇದರೊಂದಿಗೆ ಚಿತ್ರರಂಗ ನಿರಾಳಗೊಂಡಂತಾಗಿದೆ.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿತು. ಹಲವು ಅಂಗಡಿ ಮುಂಗಟ್ಟುಗಳಂತೆ ಸಿನಿಮಾ ಥಿಯೇಟರ್​ಗಳನ್ನೂ ಮುಚ್ಚಲಾಯಿತು. ಕೆಲ ತಿಂಗಳ ಬಳಿಕ ಅನೇಕ ವಾಣಿಜ್ಯ ಚಟುವಟಿಕೆಗಳು ಪುನಾರಂಭಗೊಂಡರೂ ಚಿತ್ರಮಂದಿರಗಳಿಗೆ ಬಾಗಿಲು ತೆರೆಯುವ ಅವಕಾಶ ನೀಡಿರಲಿಲ್ಲ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಶೇ. 50ರ ಸೀಟಿಂಗ್ ಕೆಪಾಸಿಟಿಯಲ್ಲಿ ಮಾತ್ರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಹೀಗಾಗಿ, ಚಿತ್ರಗಳ ಬಿಡುಗಡೆಗೆ ಅನೇಕ ನಿರ್ಮಾಪಕರು ಮೀನ-ಮೇಷ ಎಣಿಸುವಂತಾಗಿತ್ತು. ಈಗ ಸಂಪೂರ್ಣ ಭರ್ತಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕ ಉತ್ಸಾಹ ಗರಿಗೆದರಲಿದೆ.

ಇದನ್ನೂ ಓದಿ: ರಾಬರ್ಟ್​ ತೆಲುಗು ಸಿನಿಮಾ ರಿಲೀಸ್​: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಹೇಳಿದ್ದು ಹೀಗೆ..!

ಚಿತ್ರಮಂದಿರಗಳಲ್ಲಿ ಕೊರೋನಾ ಸೋಂಕು ಹರಡುವ ಅಪಾಯ ತುಸು ಹೆಚ್ಚೇ ಇದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರದಿಂದ ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಲ್ಲಿ ಕೈಗೊಳ್ಳಬೇಕಾದ ಹಲವು ಮುಂಜಾಗ್ರತಾ ಕ್ರಮಗಳನ್ನ ತಿಳಿಸಲಾಗಿದೆ.

ಥಿಯೇಟರ್​ಗಳಲ್ಲಿ ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನ ಕಡ್ಡಾಯವಾಗಿ ಮಾಡಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಆರೋಗ್ಯ ಸೇತು ಆಪ್ ಬಳಸಲು ಉತ್ತೇಜಿಸಬೇಕು. ಆನ್​ಲೈನ್ ಟಿಕೆಟ್ ಬುಕಿಂಗ್​​ಗೆ ಹೆಚ್ಚು ಒತ್ತು ನೀಡಬೇಕು. ಪ್ರತೀ ಶೋ ಬಳಿಕ ಆಡಿಟೋರಿಯಂ ಸ್ಯಾನಿಟೈಸ್ ಮಾಡಬೇಕು. ಇವೇ ಮುಂತಾದ ಹಲವು ಅಂಶಗಳು ಮಾರ್ಗಸೂಚಿಯಲ್ಲಿವೆ.

ವರದಿ: ಹರ್ಷವರ್ಧನ್ ಎಸ್ ಆರ್
Published by: Vijayasarthy SN
First published: January 31, 2021, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories