ಕರ್ನಾಟಕದಲ್ಲಿ ಮತ್ತೇ ಮುನ್ನೆಲೆಗೆ ಬಂದ ಡ್ರೈವ್ ಇನ್ ಸಿನಿಮಾಗೆ ಚಿತ್ರಪ್ರದರ್ಶಕರ ವಿರೋಧ

ಈ ಹಿಂದೆ ಭಾರತಕ್ಕೆ ಪರಿಚಯಗೊಂಡು ಕಾಲ್ಕಿತ್ತಿದ್ದ ಡ್ರೈವ್ ಇನ್ ಸಿನಿಮಾ ಮತ್ತೇ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ವಿಕೇಂಡ್ ವೇಳೆ ಇದು ಪ್ರದರ್ಶನಗೊಳ್ಳುತ್ತಿದೆ.

news18-kannada
Updated:July 11, 2020, 3:20 PM IST
ಕರ್ನಾಟಕದಲ್ಲಿ ಮತ್ತೇ ಮುನ್ನೆಲೆಗೆ ಬಂದ ಡ್ರೈವ್ ಇನ್ ಸಿನಿಮಾಗೆ ಚಿತ್ರಪ್ರದರ್ಶಕರ ವಿರೋಧ
ಸಾಂದರ್ಭಿಕ ಚಿತ್ರ
  • Share this:
ಕೊಪ್ಪಳ (ಜು. 11): 1978-79ರ ಸುಮಾರಿಗೆ ಭಾರತಕ್ಕೆ ಪರಿಚಯಗೊಂಡು, ವಿಫಲವಾಗಿದ್ದ ಡ್ರೈವ್ ಇನ್ ಸಿನಿಮಾ, ಈಗ ಮತ್ತೇ ಮುಂಚೂಣಿಗೆ ಬಂದಿದೆ. ಕೊರೋನಾ ಕಷ್ಟಕಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಲೆಕ್ಕಾಚಾರ ಡ್ರೈವ್ ಇನ್ ಸಿನಿಮಾದ ಹಿಂದಿದೆ. ಡ್ರೈವ್ ಇನ್ ಸಿನಿಮಾ ಎಂದರೆ ಬೃಹದಾಕಾರ ವಿಸ್ತಾರದ ಪ್ರದೇಶದಲ್ಲಿ (ಸುಮಾರು 2-3 ಎಕರೆ) ಬೃಹತ್ ಪರದೆಯಲ್ಲಿ ಸಿನಿಮಾ ಪ್ರದರ್ಶನವಾಗುತ್ತದೆ. ಪರದೆ ಸುತ್ತ ಕಾರುಗಳನ್ನ ನಿಲ್ಲಿಸಿ, ಕಾರಿನಲ್ಲಿ ಕುಳಿತು ಸಿನಿಮಾ ನೋಡುವುದು.

ವಿದೇಶಗಳಲ್ಲಿ ತಕ್ಕಮಟ್ಟಿಗೆ ಯಶಸ್ಸುಗಳಿಸಿರುವ ಇದು, ಭಾರತಕ್ಕೆ ಬಂದದ್ದು 1978-79ರಲ್ಲಿ. ಕ್ರಮೇಣ ಕರ್ನಾಟಕಕ್ಕೂ ಕಾಲಿಟ್ಟಿತ್ತು. ಆಗ‌ ದೇಶದಲ್ಲಿ ಚಿತ್ರಮಂದಿರಗಳ ಸಂಖ್ಯೆ ಅಧಿಕವಾಗಿದ್ದು, ಬಹುತೇಕ ಜನ ಸಿನಿಮಾಗಳನ್ನ ಥೇಟರ್‌ನಲ್ಲೇ ನೋಡಿ ಖುಷಿ ಪಡುತ್ತಿದ್ದರು. ಜನಜಂಗುಳಿ ಮಧ್ಯೆ ಸಿನಿಮಾ ನೋಡಲು‌ ಕಸಿವಿಸಿಗೊಳ್ಳುತ್ತಿದ್ದ ಶ್ರೀಮಂತ ವರ್ಗ ಮಾತ್ರ ಡ್ರೈವ್ ಇನ್ ಸಿನಿಮಾ ಕಡೆ ಮುಖ ಮಾಡಿತ್ತು.

Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು

ಆನಂತರ ಮಲ್ಟಿಪ್ಲೆಕ್ಸ್ ಆರಂಭವಾದವು. ಆಗ ಚಿತ್ರಮಂದಿರಗಳ ಮಾಲೀಕರಿಂದ ವಿರೋಧ ವ್ಯಕ್ತವಾಯಿತಾದರೂ ಬಹುದೊಡ್ಡ ಪ್ರಮಾಣದಲ್ಲಿ ಕೂಗು ಕೇಳಲಿಲ್ಲ. ಅಂತೆಯೇ ಕರ್ನಾಟಕದ ದೊಡ್ಡ ನಗರಗಳಲ್ಲೂ ಮಲ್ಟಿಪ್ಲೆಕ್ಸ್ ತಲೆ ಎತ್ತಿದವು. ಆಮೇಲೆ ದೊಡ್ಡ ಬೆಳವಣಿಗೆ ಎಂದರೆ ನಟ-ನಿರ್ಮಾಪಕ ಕಮಲ್ ಹಾಸನ್ ತಮ್ಮ ವಿಶ್ವರೂಪಂ ಸಿನಿಮಾವನ್ನು ಆನ್‌ಲೈನ್ ಮೂಲಕ ಬಿಡುಗಡೆಗೊಳಿಸಲು ಯೋಚಿಸಿದ್ದು. ಎಲ್ಲೆಡೆ ದೊಡ್ಡ ಪ್ರತಿರೋಧ ವ್ಯಕ್ತವಾಗಿದ್ದರಿಂದ ವಿಶ್ವರೂಪಂ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಯಿತು.

ಈಗ ಇದು ಕೊರೋನಾ ಸಂಕಷ್ಟದ ಕಾಲ. ದೇಶಾದ್ಯಂತ ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳ ಬಾಗಿಲು ಬಂದ್ ಆಗಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಈ ಸಮಯದಲ್ಲಿ ಓಟಿಟಿ, ನೆಟ್‌ಪ್ಲಿಕ್ಸ್‌ನಂಥ ವ್ಯವಸ್ಥೆ ಕಣ್ಣುತೆರೆದಿದೆ.

ಇದರ ನಡುವೆ ಈ ಹಿಂದೆ ಭಾರತಕ್ಕೆ ಪರಿಚಯಗೊಂಡು ಕಾಲ್ಕಿತ್ತಿದ್ದ ಡ್ರೈವ್ ಇನ್ ಸಿನಿಮಾ ಮತ್ತೇ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ವಿಕೇಂಡ್ ವೇಳೆ ಇದು ಪ್ರದರ್ಶನಗೊಳ್ಳುತ್ತಿದೆ. ಒಂದು ಕಾರಿನಲ್ಲಿ ಮೂವರಿರಬೇಕು, 50 ಕಾರುಗಳಿಗೆ ಮಾತ್ರ ಪ್ರವೇಶ. ಸ್ಯಾನಿಟೈಜರ್ ಹೊಂದಿರಬೇಕು. ಮಾಸ್ಕ್ ಕಡ್ಡಾಯ. ಆರು ಅಡಿ ಅಂತರದಲ್ಲಿ ಕಾರುಗಳನ್ನ ಪಾರ್ಕ್ ಮಾಡಬೇಕು ಎಂಬಿತ್ಯಾದಿ ನಿಬಂಧನೆಗಳಿವೆ.

ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ

ಇನ್ನೂ ಈ ವಿಚಾರಕ್ಕೆ ಚಿತ್ರಪ್ರದರ್ಶಕರು ವಿರೋಧ ವ್ಯಕ್ತಪಡಿಸಿದ್ದಾರೆ.

Cinema distributors opposing drive in cinema in Karnataka state
ಕೊರೋನಾ ಬಂದು ಚಿತ್ರ ಪ್ರದರ್ಶಕರ,  ಚಿತ್ರಮಂದಿರಗಳ ಕಾರ್ಮಿಕರ ಬದುಕು ಅತಂತ್ರವಾಗಿದೆ. ಡ್ರೈವ್ ಇನ್ ಸಿನಿಮಾ ಪ್ರದರ್ಶನ ಕಾನೂನು ಬಾಹಿರ. ಈ ಬಗ್ಗೆ ಸರಕಾರಕ್ಕೆ ದೂರು ನೀಡುತ್ತೇವೆ. ಕಾರ್ಮಿಕರಿಗೆ ಸರಕಾರ ಪರಿಹಾರ ಪ್ಯಾಕೇಜ್ ಘೋಷಿಸಲಿ - ವಿಶ್ವನಾಥ್ ಮಹಾಂತಯ್ಯನಮಠ, ಚಿತ್ರಪ್ರದರ್ಶಕರು, ಕೊಪ್ಪಳ.

ಚಿತ್ರರಂಗಕ್ಕೆ ಎದುರಾಗುತ್ತಿರುವ ಸಮಸ್ಯೆಗಳು ಇಂದು-ನಿನ್ನೆಯದಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಚಿತ್ರಮಂದಿರಗಳನ್ನು ಬಂದ್ ಮಾಡಿ, ಕಲ್ಯಾಣಮಂಟಪವನ್ನೋ, ವಾಣಿಜ್ಯ ಮಳಿಗೆಯನ್ನೋ ಮಾಡಬೇಕು. ಬಹಳಷ್ಟು ಜನ ಮಾಲೀಕರು ಹಾಗೆಯೇ ಮಾಡಿದ್ದಾರೆ. ಸುಮಾರು ವರ್ಷಗಳಿಂದ ತುತ್ತಿನ ಚೀಲ ತುಂಬಿದ ಚಿತ್ರಮಂದಿರಗಳನ್ನು ಮುಚ್ಚಲು ಮನಸಿಲ್ಲ. ಸರಕಾರ ಚಿತ್ರರಂಗದ, ಚಿತ್ರರಂಗಕ್ಕೆ ಸಂಬಂಧಪಟ್ಟ ಜನರ ಸಂಕಷ್ಟಕ್ಕೆ ಸ್ಪಂದಿಸಲಿ - ಶಿವರಾಮಗೌಡ, ಚಿತ್ರಮಂದಿರದ ಮಾಲೀಕರು, ಮಾಜಿ ಸಂಸದರು, ಗಂಗಾವತಿ.
Published by: Vinay Bhat
First published: July 11, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading