ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ (75th Independence Day Celebration) ಮನೆ ಮಾಡಿದೆ. ಪ್ರತಿಯೊಂದು ಮನೆಗಳ ಮೇಲೂ ಬಾವುಟ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದರು. ಸ್ಯಾಂಡಲ್ವುಡ್ ಮಂದಿಯೂ ಸ್ವಾತಂತ್ರ್ಯ ದಿನಾಚರಣೆವನ್ನು ಸಡಗರದಿಂದ ಆಚರಿಸಿದ್ದಾರೆ. ಸಿನಿಮಾ ಸ್ಟಾರ್ಗಳು (Star) ತಾರೆಯರು ಕೈ ಜೋಡಿಸಿದ್ದು, ಮನೆಗಳ ಮೇಲೆ ರಾಷ್ಟ್ರಧ್ವಜ (National Flag) ಹಾರಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಸಿನಿಮಾ ತಾರೆಯರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ಗಳು ಸಹ ವಂದೇ ಮಾತರಂ ಎಂದು ದೇಶಭಕ್ತಿ ಮೆರೆದಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದಾರೆ.
ನಟರಿಂದ ದೇಶಭಕ್ತಿ ಹಾಡು
ಈ ಗೀತೆಯಲ್ಲಿ ಪ್ರಮುಖವಾಗಿ ನಟ ಜಗ್ಗೇಶ್, ರವಿಚಂದ್ರನ್, ಅನಂತ್‌ನಾಗ್, ರಮೇಶ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್, ವಿಜಯ್ ಪ್ರಕಾಶ್, ಅರ್ಜನ್ ಸರ್ಜಾ, ಸಾಲು ಮರದ ತಿಮ್ಮಕ್ಕ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್, ಶ್ರೀಮುರುಳಿ ಸೇರಿದಂತೆ ಹಲವು ಕಲಾವಿದರು ಮತ್ತು ಸಾಧಕರು ಈ ಹಾಡಿನಲ್ಲಿದ್ದಾರೆ.
ಇದನ್ನೂ ಓದಿ: Thara Anuradha: ಕೇಸರಿ, ಬಿಳಿ, ಹಸಿರು ಉಡುಪಿನಲ್ಲಿ ಮಿಂಚಿದ ತಾರಾ; ಫೋಟೋ ಗ್ಯಾಲರಿ ಇಲ್ಲಿದೆ
ಕೇವಲ ಹಾಡುವುದಲ್ಲದೇ, ನಮ್ಮ ದೇಶ ವೈವಿದ್ಯತೆಗಳಲ್ಲಿ ಏಕತೆ ಕಂಡಿರುವ ದೇಶ ಎನ್ನುವುದನ್ನು, ನಮ್ಮ ದೇಶದ ಸಂಸ್ಕೃತಿ, ಸಂಪತ್ತನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ ಟ್ವೀಟ್ ಮಾಡಿ, ವಂದೇ ಮಾತರಂ... ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ ಎಂದು ಈ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ.
ವಂದೇ ಮಾತರಂ
ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ#AzadiKaAmritMahotsav pic.twitter.com/bHTkvqzoLl
— Basavaraj S Bommai (@BSBommai) August 14, 2022
ತಾರಾ ಅನುರಾಧ ವಿಶೇಷ ಫೋಟೋ ಶೂಟ್
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನ ದೇಶ ಅದ್ದೂರಿಯಾಗಿ ಅಚರಿಸಲು ಸಜ್ಜಾಗುತ್ತಿರುವ ಬೆನ್ನಲ್ಲೇ, ರಾಷ್ಟ್ರಪ್ರಶಸ್ತಿ ವಿಜೇತರಾದ ನಟಿ ತಾರಾ ಅನುರಾಧ ಕೇಸರಿ,ಬಿಳಿ, ಹಸಿರು ಬಣ್ಣಗಳಲ್ಲಿ ಡಿಸೈನ್ ಮಾಡಿರುವ ಉಡುಪಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ವಿಶೇಷ ಫೋಟೋ ಶೂಟ್ ಮಾಡಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಡಿಸೈನ್ ಮಾಡಿರುವ ಉಡುಪಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
ಇದನ್ನೂ ಓದಿ: Arjun Sarja: ಅರ್ಜುನ್ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯಗಳು; ‘ಆ್ಯಕ್ಷನ್ ಕಿಂಗ್’ ಸಿನಿ ಜರ್ನಿ
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶವನ್ನೇ ತ್ರಿವರ್ಣದ ಪ್ರತಿರೂಪವನ್ನಾಗಿಸುವ ಕಲ್ಪನೆಯನ್ನು ನಾಗರೀಕರಲ್ಲಿ ಬಿತ್ತಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ತಾರಾ ಅವರು ನಿಂತಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದ ಮೂಲಕ ತ್ರಿವರ್ಣ ಧ್ವಜ ಜನ ಮನದಲ್ಲಿ ಸಾಕಾರಗೊಳಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅದರಂತೆ ನಟಿ ತಾರಾ ತ್ರಿವರ್ಣದ ಬಟ್ಟೆಯಲ್ಲಿ ಮಿರಮಿರ ಮಿಂಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ