ಸಾಮಾನ್ಯವಾಗಿ ಈ ಜನಪ್ರಿಯ ಮಾಡೆಲ್ ಗಳು, ಸಿನೆಮಾ ನಟಿಯರು ತಾವು ಇನ್ನಷ್ಟೂ ಅಂದವಾಗಿ ಕಾಣಲು ತಮ್ಮ ಮುಖದಲ್ಲಿರುವ ಅಂಗಾಂಗಗಳಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿ ಕೊಳ್ಳುತ್ತಾರೆ.ಇಲ್ಲೊಬ್ಬ ಅಮೆರಿಕನ್ ಮಾಡೆಲ್ ಮತ್ತು ಟೆಲಿವಿಷನ್ ಸೆಲಿಬ್ರಿಟಿ ಕ್ರಿಸ್ಸಿ ಟೀಜೆನ್ (Chrissy Teigen) ಇತ್ತೀಚೆಗೆ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ನಲ್ಲಿರುವ ತನ್ನ ಖಾತೆಯ ಪುಟದಲ್ಲಿ ತಾನು ಹುಬ್ಬು ಕಸಿ ಶಸ್ತ್ರಚಿಕಿತ್ಸೆಯ (Eyebrow Transplant Surgery) ಮೂಲಕ ಹೊಸ ಹುಬ್ಬುಗಳನ್ನು ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಹೇಗೆ ಇವರು ಹೊಸ ಹುಬ್ಬುಗಳನ್ನು ಪಡೆದಿದ್ದಾರೆ ಎಂದು ನೀವು ಒಂದು ಕ್ಷಣ ಆಲೋಚನೆಯಲ್ಲಿ ಮುಳುಗಬಹುದು. ಹೌದು. ಇತ್ತೀಚೆಗೆ 35 ವರ್ಷದ ಮಾಡೆಲ್ ಇನ್ಸ್ಟಾಗ್ರಾಮ್ ಸ್ಟೋರಿಸ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಅಲ್ಲಿ ಅವರು "ನಾನು ಸಾಧ್ಯವಾದರೆ ಎಂದಿಗೂ ಮೇಕಪ್ ಮಾಡಿಕೊಳ್ಳುವುದಿಲ್ಲ, ನನ್ನ ತಲೆಯ ಹಿಂಭಾಗದಲ್ಲಿರುವ ಕೂದಲನ್ನು ತೆಗೆದುಕೊಂಡು ಈ ಹುಬ್ಬು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಾನು ತುಂಬಾನೇ ಉತ್ಸುಕಳಾಗಿದ್ದೇನೆ" ಎಂದು ಕ್ರಿಸ್ಸಿ ಡಾ. ಜೇಸನ್ ಡೈಮಂಡ್ ಮತ್ತು ಡಾ. ಜೇಸನ್ ಶಾಂಪೇನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಇಬ್ಬರು ವೈದ್ಯರು ಈಕೆಗೆ ಹುಬ್ಬು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಿದರು ಎಂದು ಹೇಳಲಾಗುತ್ತಿದೆ.
Chrissy Teigen reveals she had eyebrow hair transplant https://t.co/TvkMZlcESz #SM pic.twitter.com/UtxRz8UNdM
— Woody (@Knewz_Currently) November 22, 2021
ಮತ್ತೊಂದು ಚಿತ್ರದಲ್ಲಿ, ಕ್ರಿಸ್ಸಿ ತನ್ನ ಹೊಸ ಹುಬ್ಬುಗಳಿಗೆ ಸ್ವಲ್ಪ ಬಣ್ಣವನ್ನು ಹಚ್ಚಿದ ನಂತರ ಹೇಗೆ ಕಾಣಿಸುತ್ತವೆ ಎಂಬುದನ್ನು ಸಹ ತೋರಿಸಿದಳು. "ಪೆನ್ಸಿಲ್ ನಿಂದ ಬರೆದ ಹಾಗೆ ಸ್ವಲ್ಪ ಕಪ್ಪಗೆ ಕಾಣುತ್ತಿದ್ದು, ತುಂಬಾನೇ ಚೆನ್ನಾಗಿ ಕಾಣುತ್ತಿವೆ. ಇದಲ್ಲದೇ, ಹದಿಹರೆಯದವರಿಗೆ ಎಚ್ಚರಿಕೆಯ ಸಲಹೆಯನ್ನು ನೀಡಿದ ಕ್ರಿಸ್ಸಿ "ನನ್ನಂತೆ ಕಣ್ಣು ಹುಬ್ಬುಗಳ ಕೂದಲನ್ನು ಕಿತ್ತು ಹಾಕಿಕೊಳ್ಳಬೇಡಿ" ಎಂದು ಹೇಳಿದರು.ಕ್ರಿಸ್ಸಿ ಈ ಹಿಂದೆ 2018 ರಲ್ಲಿ ಮಾಡಿದ್ದ ಒಂದು ಟ್ವೀಟ್ನಲ್ಲಿ ಅವಳು ಹದಿಹರೆಯದವಳಾಗಿದ್ದಾಗ ಮಾಡೆಲ್ ತನ್ನ ಹುಬ್ಬುಗಳ ಮೇಲೆ ತುಂಬಾ ಕಡಿಮೆ ಕೂದಲನ್ನು ಹೊಂದಿದ್ದಳು ಎಂಬುದನ್ನು ತೋರಿಸಿದ್ದಳು.
ಇತರ ಅನೇಕ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಂತೆ, ಹುಬ್ಬು ಶಸ್ತ್ರಚಿಕಿತ್ಸೆಗೂ ಸಹ ಅದರದೇ ಆದಂತಹ ಸಾಧಕ ಬಾಧಕಗಳಿವೆ ಎಂದು ಹೇಳಲಾಗುತ್ತದೆ.ಹುಬ್ಬುಗಳ ಮೇಲೆ ಹೆಚ್ಚು ಕೂದಲು ಇಲ್ಲದವರು ಸಾಮಾನ್ಯವಾಗಿ ಹುಬ್ಬು ಪೆನ್ಸಿಲ್ ಗಳು ಮತ್ತು ವಿರಳ ಹುಬ್ಬುಗಳನ್ನು ತುಂಬಲು ಸಹಾಯ ಮಾಡುವ ಬ್ರಷ್ ಗಳಂತಹ ಮೇಕಪ್ ಉತ್ಪನ್ನಗಳನ್ನು ಅವಲಂಬಿಸುತ್ತಾರೆ. ಆದಾಗ್ಯೂ, ಶಾಶ್ವತ ಪರಿಹಾರವನ್ನು ಹುಡುಕುತ್ತಿರುವವರಿಗೆ ಈ ಹುಬ್ಬು ಕಸಿ ಶಸ್ತ್ರಚಿಕಿತ್ಸೆಯು ನಿಮ್ಮ ಉದ್ದೇಶವನ್ನು ಪೂರೈಸಬಹುದು.
ಹೆಲ್ತ್ಲೈನ್ ಪ್ರಕಾರ, ಹುಬ್ಬು ಕಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೂದಲು ಕಸಿಗಳನ್ನು ಹುಬ್ಬು ಇರುವ ಸ್ಥಳದಲ್ಲಿ ಇರಿಸಲಾಗುತ್ತದೆ. ಆರಂಭಿಕ ವರ್ಗಾವಣೆಯಾದವುಗಳು ಹೊರಬಂದ ನಂತರ ನಿಮ್ಮ ಹುಬ್ಬುಗಳಲ್ಲಿ ಹೊಸ ಕೂದಲುಗಳು ಬೆಳೆಯಲು ಸಾಧ್ಯವಾಗುತ್ತದೆ. ಶಸ್ತ್ರಚಿಕಿತ್ಸೆಯು ಸಾಮಾನ್ಯ ಅರಿವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಸಂಪೂರ್ಣ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಹೆಲ್ತ್ಲೈನ್ ಉಲ್ಲೇಖಿಸುತ್ತದೆ.ಈ ಶಸ್ತ್ರಚಿಕಿತ್ಸೆಯು ಹುಬ್ಬುಗಳ ಮೇಲೆ ಕೂದಲಿನ ಬೆಳವಣಿಗೆಯನ್ನು ಖಾತರಿಪಡಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಹೊಸ ಕೂದಲು ಬರಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ಹೆಲ್ತ್ಲೈನ್ ಎಚ್ಚರಿಸುತ್ತದೆ.
ಶಸ್ತ್ರಚಿಕಿತ್ಸೆಯ ನಂತರ ಯಾವುದೇ ಕಠಿಣ ವ್ಯಾಯಾಮವನ್ನು ಮಾಡುವಂತಿಲ್ಲ ಮತ್ತು ಕಸಿ ಮಾಡಿದ ಕೂದಲುಗಳು ಕೆಲವು ವಾರಗಳ ನಂತರ ಉದುರುವುದು ಸಹ ಸ್ವಾಭಾವಿಕ. ಮುಂದಿನ ಹಲವಾರು ತಿಂಗಳುಗಳಲ್ಲಿ ಹೊಸ ಹುಬ್ಬಿನ ಕೂದಲುಗಳು ಬೆಳೆಯಲು ಪ್ರಾರಂಭಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ