DDLJ Chris Hemsworth: ಡಿಡಿಎಲ್​ಜೆ ಡೈಲಾಗ್​ ಹೇಳಿದ ಹಾಲಿವುಡ್​ ನಟ: ಭಾರತೀಯ ಅಭಿಮಾನಿಗಳ ಮನ ಗೆದ್ದ ಕ್ರಿಸ್​ ಹೆಮ್ಸ್​ವರ್ತ್..!

Chris Hemsworth: ಡಿಡಿಎಲ್​ಜೆ ಸಿನಿಮಾ ಅಮೆರಿಕದ ಅಧ್ಯಕ್ಷರನ್ನೂ ಬಿಟ್ಟಿಲ್ಲ. ಅವರೂ ಸಹ ಭಾರತಕ್ಕೆ ಬಂದಾಗ ಡಿಡಿಎಲ್​ಜೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈಗ ಡಿಡಿಎಲ್​ಜೆ ಬಗ್ಗೆ ಖ್ಯಾತ ಹಾಲಿವುಡ್​ ನಟರೊಬ್ಬರು ಶಾರುಖ್​ ಹೇಳಿರುವ ಡೈಲಾಗ್​ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Anitha E | news18-kannada
Updated:February 26, 2020, 12:11 PM IST
DDLJ Chris Hemsworth: ಡಿಡಿಎಲ್​ಜೆ ಡೈಲಾಗ್​ ಹೇಳಿದ ಹಾಲಿವುಡ್​ ನಟ: ಭಾರತೀಯ ಅಭಿಮಾನಿಗಳ ಮನ ಗೆದ್ದ ಕ್ರಿಸ್​ ಹೆಮ್ಸ್​ವರ್ತ್..!
ಡಿಡಿಎಲ್​ಜೆ ಡೈಲಾಗ್​ ಹೇಳಿದ ಕ್ರಿಸ್​ ಹೆಮ್ಸ್​ವರ್ತ್​
  • Share this:
ಶಾರುಖ್ ಖಾನ್​ ಹಾಗೂ ಕಾಜೋಲ್​ ಅಭಿನಯದ 'ದಿಲ್​ವಾಲೆ ದುಲ್ಹನಿಯಾ ಲೇಜಾಯೆಂಗೆ' ಸಿನಿಮಾ ಬಾಲಿವುಡ್​ ಎವರ್​ಗ್ರೀನ್​ ಚಿತ್ರಗಳಲ್ಲಿ ಒಂದು. ಎಷ್ಟೋ ಪ್ರೇಮ ಕತೆಗಳು ಬಂದು ಹೋದರೂ ಇಂದಿಗೂ ಲವ್​ ಸ್ಟೋರಿ ಎಂದ ಕೂಡಲೇ ನಾಲಿಗೆ ಮೇಲೆ ಬರೋದು ಡಿಡಿಎಲ್​ಜೆ. 

ಇಂತಹ ಸಿನಿಮಾ ಅಮೆರಿಕದ ಅಧ್ಯಕ್ಷರನ್ನೂ ಬಿಟ್ಟಿಲ್ಲ. ಅವರೂ ಸಹ ಭಾರತಕ್ಕೆ ಬಂದಾಗ ಡಿಡಿಎಲ್​ಜೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈಗ ಡಿಡಿಎಲ್​ಜೆ ಬಗ್ಗೆ ಖ್ಯಾತ ಹಾಲಿವುಡ್​ ನಟರೊಬ್ಬರು ಶಾರುಖ್​ ಹೇಳಿರುವ ಡೈಲಾಗ್​ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Chris Hemsworth
ಕ್ರಿಸ್ ಹೇಮ್ಸ್​​ವರ್ತ್​


ಹೌದು, ಮಾರ್ವೆಲ್​ ಸ್ಟುಡಿಯೋಸ್​ನ 'ಥೋರ್​' ಸರಣಿ ಸಿನಿಮಾಗಳ ನಾಯಕ ನಟ ಕ್ರಿಸ್​ ಹೆಮ್ಸ್​ವರ್ತ್​ ಡಿಡಿಎಲ್​ಜೆ ಸಿನಿಮಾದ ಫೇಮಸ್​ ಡೈಲಾಗ್​ ಹೇಳಿದ್ದಾರೆ. ಅದು 'ಬಡೆ ಬಡೆ ದೇಶೋಮೆ ಚೋಟಿ ಚೋಟಿ ಬಾತೆ ಹೋತಿ ರೆಹತಿಹೈ' ಅನ್ನೋ ಡೈಲಾಗ್​.
ಇದನ್ನೂ ಓದಿ: Jaggesh: ಕೊಟ್ಟ ಮಾತಿನಂತೆ ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿದ ನವರಸ ನಾಯಕ ಜಗ್ಗೇಶ್​..!

ಕ್ರಿಸ್​ ಹೆಮ್ಸ್​ವರ್ತ್​ ಮಾರ್ವೆಲ್ ಸ್ಟುಡಿಯೋಸ್​ನ 'ಅವೆಂಜರ್ಸ್​' ಸರಣಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಅವರು ನೆಟ್​ಫ್ಲಿಕ್ಸ್​ನ 'ಎಕ್ಟ್ರಾಕ್ಷನ್​' ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಸಾಕಷ್ಟು ಮಂದಿ ಭಾರತೀಯ ನಟ ಹಾಗೂ ತಂತ್ರಜ್ಞರೂ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ವೇಳೆ ನಟ ರುದ್ರಾಕ್ಷ್​ ಜೈಸ್ವಾಲ್, ಕ್ರಿಸ್​ಗೆ ಡಿಡಿಎಲ್​ಜೆ ಸಿನಿಮಾದ ಡೈಲಾಗ್​ ಹೇಳುವಂತೆ ಕೇಳಿ ಒಂದು ವಿಡಿಯೋ ಮಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Janhvi Kapoor: ಹಳೇ ಹಾಡಿಗೆ ಸೊಂಟ ಬಳುಕಿಸಿದ ಜಾಹ್ನವಿ ಕಪೂರ್​: ಶ್ರೀದೇವಿ ಅಭಿಮಾನಿಗಳು ಫಿದಾ..!

ನೆಟ್​ಫ್ಲಿಕ್ಸ್​ನ 'ಎಕ್ಟ್ರಾಕ್ಷನ್​' ಸಿನಿಮಾದಲ್ಲಿ ಕ್ರಿಸ್​ ಹೆಮ್ಸ್​ವರ್ತ್​ ಜೊತೆ ರಣದೀಪ್​ ಹುಡ, ಪ್ರಿಯಾಂಶು ಹಾಗೂ ಹೊಸಬರಾದ ರುದ್ರಾಕ್ಷ್​ ಜೈಸ್ವಾಲ್ ಸಹ ಇದ್ದಾರೆ. ​ಇದು ಏಪ್ರಿಲ್​ 24ರಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ.

Chandan Shetty-Niveditha Wedding Photos: ನವಜೀವನಕ್ಕೆ ಕಾಲಿರಿಸಿದ ಚಂದನ್ ಶೆಟ್ಟಿ​-ಗೊಂಬೆ ನಿವೇದಿತಾ ಗೌಡ..!

First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ