ಸ್ಟಾರ್ ನಟ ನಟಿಯರ ಬೆತ್ತಲೆ ಹಾಗೂ ಅರೆ ಬೆತ್ತಲೆ ಫೋಟೋಗಳು ಲೀಕ್ ಆಗುವ ಸುದ್ದಿಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಗಮನಿಸುತ್ತಿರುತ್ತೇವೆ. ಇನ್ನು ಹಾಲಿವುಡ್ ಸ್ಟಾರ್ಗಳು ಮಾತ್ರ ಖ್ಯಾತ ನಿಯತಕಾಲಿಕೆಗಳಿಗೆ ಬೆತ್ತಲೆಯಾಗಿ ಪೋಸ್ ಕೊಟ್ಟು ಸುದ್ದಿಯಾಗುತ್ತಾರೆ. ಆದರೆ ಇಲ್ಲೊಬ್ಬರು ಖ್ಯಾತ ಸ್ಟಾರ್ ನಟ ಮಾತ್ರ ತಮ್ಮ ಇನ್ಸ್ಟಾಗ್ರಾಂನಲ್ಲಿ ತನ್ನದೇ ಬೆತ್ತಲೆ ಚಿತ್ರವನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಈ ಕೆಲಸ ಮಾಡಿದ ಸ್ಟಾರ್ ನಟ ಮತ್ತಾರೂ ಅಲ್ಲ ಅವೆಂಜರ್ಸ್ ಸರಣಿಯ ಕ್ಯಾಪ್ಟನ್ ಅಮೆರಿಕ ಪಾತ್ರದಲ್ಲಿ ನಟಿಸಿರುವ ಕ್ರಿಸ್ ಇವ್ಯಾನ್ಸ್. ಹೌದು, ಕ್ರಿಸ್ ಇವ್ಯಾನ್ಸ್ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ತಮಗರಿವಿಲ್ಲದಂತೆಯೇ ತಮ್ಮ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತಪ್ಪಿನ ಅರಿವಾದ ಕೂದಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಇದನ್ನು ನೋಡಿದ ನೆಟ್ಟಿಗರು ಮಾತ್ರ ನಟನನ್ನು ಟ್ರೋಲ್ ಮಾಡಿದ್ದಾರೆ.
ಕ್ರಿಸ್ ಜನರ ಗಮನ ಸೆಳೆಯಲು ಹೀಗೆ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಕ್ರಿಸ್ ಇವ್ಯಾನ್ಸ್ ಅವರನ್ನು ಟ್ರೋಲ್ ಮಾಡುತ್ತಿದ್ದಂತೆಯೇ, ಅಭಿಮಾನಿಗಳು ನಟನ ಪರ ಟ್ವೀಟ್ ಹಾಗೂ ಪೋಸ್ಟ್ಗಳನ್ನು ಮಾಡಲು ಆರಂಭಿಸಿದ್ದಾರೆ. ಇನ್ನು ಕ್ರಿಸ್ ಸಹ ತಮ್ಮ ಟ್ವಟರ್ನಲ್ಲಿ ಲೆಟೆಸ್ಟ್ ಪೋಸ್ಟ್ ಒಂದನ್ನು ಮಾಡಿದ್ದು, ಈಗ ನನಗೆ ನಿಮ್ಮ ಅಟೆಂಕ್ಷನ್ ಸಿಕ್ಕಿದೆ. ನವೆಂಬರ್ 3ಕ್ಕೆ ವೋಟ್ ಮಾಡಿ ಎಂದು ಮುಖದ ಮೇಲೆ ಕೈ ಮುಚ್ಚಿಕೊಂಡಿರುವ ಇಮೋಜಿ ಹಂಚಿಕೊಂಡಿದ್ದಾರೆ. ನವೆಂಬರ್ 3ಕ್ಕೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವಿಷಯಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಕ್ರಿಸ್ ಇವ್ಯಾನ್ಸ್ ಸಕ್ರಿಯವಾಗಿರುತ್ತಾರೆ. ಇನ್ನು, ಕ್ರಿಸ್ ಇವ್ಯಾನ್ಸ್ ಕ್ಯಾಪ್ಟನ್ ಅಮೆರಿಕ ಪಾತ್ರಧಾರಿಯಾಗಿ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: Radhika Pandit: ರಾಧಿಕಾ ಪಂಡಿತ್ಗೆ ತಿಳಿಯದಂತೆ ಅವರ ವಿಡಿಯೋ ಮಾಡಿದ ಯಶ್-ಆಯ್ರಾ..!
ಅವೆಂಜರ್ಸ್ ಸರಣಿ ಸಿನಿಮಾಗಳ ನಿರ್ದೇಶಕರಾದ ರುಸೋ ಬ್ರದರ್ಸ್ ಅವರ ಜೊತೆ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಈ ಕುರಿತಾಗಿ ಇತ್ತೀಚೆ್ಷ್ಟೆ ಈ ಕುರಿತಾಗಿ ಕ್ರಿಸ್ ಪ್ರಕಟಿಸಿದ್ದರು. ಇದರ ಜೊತೆಗೆ ನೆಟ್ಫ್ಲಿಕ್ಸ್ಗಾಗಿ ಮಾಡುತ್ತಿರುವ ದ ಗ್ರೇ ಮ್ಯಾನ್ ವೆಬ್ ಸರಣಿಯಲ್ಲೂ ಕ್ರಿಸ್ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ