ತನ್ನ ಬೆತ್ತಲೆ ಫೋಟೋವನ್ನು ತಾನೇ ಲೀಕ್​ ಮಾಡಿಕೊಂಡ ಖ್ಯಾತ ನಟ!

ಕ್ಯಾಪ್ಟನ್​ ಅಮೆರಿಕ ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಕ್ರಿಸ್​ ನಿನ್ನೆ ಇನ್ಸ್​ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಾಕಿದ್ದರು. ಈ ಫೋಟೋದಲ್ಲಿ ಅವರ ಗುಪ್ತಾಂಗ ಎದ್ದು ಕಾಣುತ್ತಿತ್ತು.

news18-kannada
Updated:September 16, 2020, 10:58 AM IST
ತನ್ನ ಬೆತ್ತಲೆ ಫೋಟೋವನ್ನು ತಾನೇ ಲೀಕ್​ ಮಾಡಿಕೊಂಡ ಖ್ಯಾತ ನಟ!
ಕ್ರಿಸ್​ ಇವಾನ್ಸ್​
  • Share this:
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್​ಲೋಡ್​ ಮಾಡುವುದು, ಏನು ಮಾಡುತ್ತಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ, ಎಂಬುದನ್ನು ಅಪ್​ಡೇಟ್​ ಕೊಡೋದು ಇಂದಿನ ಟ್ರೆಂಡ್​. ಕೆಲವೊಮ್ಮೆ ಯಾವುದೋ ಫೋಟೋ ಅಪ್​ಲೋಡ್​ ಮಾಡಲು ಹೋಗಿ ಮತ್ಯಾವುದೋ ಫೋಟೋ ಹಾಕಿ ಟ್ರೋಲ್​ ಆದ ಸಾಕಷ್ಟು ಉದಾಹರಣೆಗಳಿವೆ. ಈಗ ನಟನೋರ್ವ ಇದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಫೋಟೋ ಹಾಕಲು ಹೋಗಿ ಖಾಸಗಿ ಭಾಗದ ಫೋಟೋ ಅಪ್​ಲೋಡ್​ ಮಾಡಿಬಿಟ್ಟಿದ್ದಾರೆ. ಅದನ್ನು ಡಿಲೀಟ್​ ಮಾಡುವುದರ ಒಳಗಾಗಿಯೇ ಅವರು ಸಾಕಷ್ಟು ಟ್ರೋಲ್​ ಆಗಿ ಬಿಟ್ಟಿದ್ದಾರೆ.

ಹೀಗೆ ಫೋಟೋ ಹಾಕಿದವರು ಅಮೆರಿಕದ ಖ್ಯಾತ ನಟ ಕ್ರಿಸ್ ಇವಾನ್ಸ್. 'ಕ್ಯಾಪ್ಟನ್​ ಅಮೆರಿಕ' ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಕ್ರಿಸ್​ ಇತ್ತೀಚೆಗೆ ಇನ್ಸ್​ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಾಕಿದ್ದರು. ಈ ಫೋಟೋದಲ್ಲಿ ಅವರ ಶಿಶ್ನ ಕಾಣುತ್ತಿತ್ತು. ಈ ಫೋಟೋ ನೋಡಿದ ಅನೇಕರು ಶಾಕ್​ ಆಗಿದ್ದಾರೆ. ಕೆಲವರು ಈ ಫೋಟೋದ ಸ್ಕ್ರೀನ್​ ಶಾಟ್​ ತೆಗೆದುಕೊಂಡಿದ್ದಾರೆ. ನಂತರ  ಟ್ರೋಲ್​ ಮಾಡಿದ್ದಾರೆ.

ಜೆನ್ನಿ ಸ್ಲೇಟ್​  ಹಾಗೂ ಕ್ರಿಸ್​ ಸಂಬಂಧ 2018ರಲ್ಲಿ ಮುರಿದು ಬಿದ್ದಿತ್ತು. ಇದಾದ ನಂತರ ಕ್ರಿಸ್​ ಲಿಲಿ ಜೇಮ್ಸ್​ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದು ಇನ್ನೂ ಅಧೀಕೃತವಾಗಿಲ್ಲ.
Published by: Rajesh Duggumane
First published: September 16, 2020, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading