• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Salman Yusuff Khan: ಬೆಂಗಳೂರು ಏರ್ಪೋರ್ಟ್​ನಲ್ಲಿ ಕನ್ನಡ ಮಾತಾಡಿ ಎಂದಿದ್ದಕ್ಕೆ ಅಧಿಕಾರಿಯನ್ನು ನಿಂದಿಸಿದ ನಟ

Salman Yusuff Khan: ಬೆಂಗಳೂರು ಏರ್ಪೋರ್ಟ್​ನಲ್ಲಿ ಕನ್ನಡ ಮಾತಾಡಿ ಎಂದಿದ್ದಕ್ಕೆ ಅಧಿಕಾರಿಯನ್ನು ನಿಂದಿಸಿದ ನಟ

ಸೆಲೆಬ್ರಿಟಿ ಡ್ಯಾನ್ಸರ್ 
ಸಲ್ಮಾನ್ ಯೂಸುಫ್ ಖಾನ್

ಸೆಲೆಬ್ರಿಟಿ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್

ಸೆಲೆಬ್ರಿಟಿ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಅವರು ಬೆಂಗಳೂರಿನವರೇ (Bengaluru) ಆಗಿದ್ದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಕನ್ನಡ ಮಾತನಾಡಿ ಎಂದ ಸಿಬ್ಬಂದಿಯನ್ನು ನಿಂದಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಸೆಲೆಬ್ರಿಟಿ (Celebrity) ಡ್ಯಾನ್ಸರ್ (Dancer) ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಅವರು ಬೆಂಗಳೂರಿನವರೇ (Bengaluru) ಆಗಿದ್ದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಕನ್ನಡ ಮಾತನಾಡಿ ಎಂದ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ನನಗೆ ಬೆಂಗಳೂರು (Bengaluru) ಏರ್ಪೋರ್ಟ್​ನಲ್ಲಿ ಅವಮಾನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ (City) ಹುಟ್ಟಿದ್ದರೂ ಕನ್ನಡ (Kannada) ಮಾತನಾಡದೆ ಇರುವುದಕ್ಕೆ ನನ್ನನ್ನು ಅವಮಾನಿಸಲಾಗಿದೆ ಎಂದು ನಟ ಸೆಲ್ಫಿ ವಿಡಿಯೋದಲ್ಲಿ (Selfie Video) ಹೇಳಿದ್ದಾರೆ.


ಬೆಂಗಳೂರು ಏರ್ಪೋರ್ಟ್​ನಲ್ಲಿ ಕಿರುಕುಳ


ದುಬೈಗೆ (Dubai) ಪ್ರಯಾಣಿಸಲು ನಟ ಲೇಟ್​ನೈಟ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಡ್ಯಾನ್ಸರ್ ಸಲ್ಮಾನ್‌ ಅವರ ಭದ್ರತಾ ತಪಾಸಣೆ ಮಾಡಿಸುತ್ತಿದ್ದಾಗ ಅವರ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ನಟ ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಅಧಿಕಾರಿ ಕನ್ನಡದಲ್ಲಿ ಮಾತನಾಡುವಂತೆ ನನ್ನನ್ನು ಬಲವಂತಪಡಿಸಿದರು. ಈ ಅಧಿಕಾರಿ ಅನಕ್ಷರಸ್ಥ. ಇಂಥ ಅನಕ್ಷರಸ್ಥರಿಂದಲೇ ದೇಶ ಅಭಿವೃದ್ಧಿ ಆಗುತ್ತಿಲ್ಲ ಎಂದು ನಿಂದಿಸಿದ್ದಾರೆ ಡ್ಯಾನ್ಸರ್ ಸಲ್ಮಾನ್.


ಹುಟ್ಟಿದ್ದು ಬೆಂಗಳೂರಲ್ಲಿ, ತಂದೆಯೂ ಬೆಂಗಳೂರಿನವರೇ


ಸೆಲ್ಫಿ ವಿಡಿಯೋವನ್ನು ಶೇರ್ ಮಾಡಿದ ಸಲ್ಮಾನ್ ಅವರು ತಮ್ಮನ್ನು ಅಧಿಕಾರಿಗಳು ಪ್ರಶ್ನಿಸಿದ ರೀತಿಯನ್ನು ವಿವರವಾಗಿ ತಿಳಿಸಿದ್ದಾರೆ. ನೀವು ಹುಟ್ಟಿರುವುದು ಬೆಂಗಳೂರಿನಲ್ಲಿ. ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ. ಆದರೂ, ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್ ಅವರು ಉತ್ತರಿಸಿ ‘ನಾನು ಸೌದಿ ಹುಡುಗ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಕಲಿತಿದ್ದು ಸೌದಿನಲ್ಲಿ. ಹಾಗಾಗಿ, ನಾನು ಕನ್ನಡ ಕಲಿತಿಲ್ಲ ಎಂದಿದ್ದಾರೆ.




ನಿಮಗೆ ಕನ್ನಡ ಬರುವುದಿಲ್ಲ ಎಂದರೆ ನನಗೆ ಅನುಮಾನ ಬರುತ್ತಿದೆ ಎಂದು ಅಧಿಕಾರಿ ಅಚ್ಚರಿಪಟ್ಟಿದ್ದಾರೆ. ಇದಕ್ಕೆ ಸಿಟ್ಟಾದ ಸಲ್ಮಾನ್, ‘ನನ್ನನ್ನು ಅನುಮಾನಿಸುತ್ತಿದ್ದೀರಾ. ಏಕೆ ಅನುಮಾನಿಸುತ್ತಿದ್ದೀರಿ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಆಗ ಅಧಿಕಾರಿ ಸುಮ್ಮನಾದರಂತೆ. ಹೀಗೆಂದು ಸಲ್ಮಾನ್ ವಿಡಿಯೊದಲ್ಲಿ ಹೇಳಿದ್ದಾರೆ.




ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇ ಬೇಕು ಎಂಬ ನಿಯಮ ಇದೆಯೇ. ನಾನು ಬೆಂಗಳೂರಿನವನೇ. ಆದರೆ, ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗಿದೆ. ಈ ರೀತಿಯ ಅನಕ್ಷರಸ್ಥ ಜನರು ಇರುವವವರೆಗೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನನ್ನದೇ ನಗರದಲ್ಲಿ ನಾನು ಯಾರೆಂದು ಪ್ರೂವ್ ಮಾಡಬೇಕಿದೆ ಎಂದು ನಟ ವಿಡಿಯೊದಲ್ಲಿ ಹೇಳಿದ್ದಾರೆ.




ಈ ನಗರದಲ್ಲಿ ಹುಟ್ಟಿದೆ. ಈ ನಗರಕ್ಕೆ ನನ್ನ ಕೊಡುಗೆಯೂ ಇದೆ. ಬೆಂಗಳೂರಿಗಾಗಿ ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಆದರೆ, ಈಗ ನಾನು ಭಾರತೀಯ ಎಂಬುದನ್ನು ನಾನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಮಾತೃಭಾಷೆ ಹಿಂದಿ. ಆ ಭಾಷೆ ನನಗೆ ಬರುತ್ತದೆ. ಅದು ಸಾಕಲ್ಲವೆ ಎಂದು ಅಧಿಕಾರಿಯಲ್ಲಿ ಪ್ರಶ್ನೆ ಮಾಡಿದ್ದಾರೆ ಸಲ್ಮಾನ್.




ಪ್ರಧಾನಿ ನರೇಂದ್ರ ಮೋದಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತದೆಯೇ. ಈ ಅನಕ್ಷರಸ್ಥರಿಗೆ ಏನು ಹೇಳುವುದು. ಆ ಅಧಿಕಾರಿ ವಿರುದ್ಧ ದೂರು ನೀಡಲು ಯತ್ನಿಸಿದೆ. ಆದರೆ, ಯಾರೂ ನನಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ವಿಡಿಯೊದಲ್ಲಿ ನಟ ಸಲ್ಮಾನ್ ಹೇಳಿದ್ದಾರೆ.

Published by:Divya D
First published: