Chiyan Vikram: ಬೆಂಗಳೂರಲ್ಲಿ ಚಿಯಾನ್​ ವಿಕ್ರಮ್; ಕೋಬ್ರಾ ಚಿತ್ರ ತಂಡದೊಂದಿಗೆ ಸಿನಿಮಾ ಪ್ರಮೋಷನ್​

ತಮಿಳು ನಟ ಚಿಯಾನ್ ವಿಕ್ರಮ್​ ಅಭಿನಯದ ಕೋಬ್ರಾ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾ ಪ್ರಮೋಷನ್​ ಹಿನ್ನೆಲೆ ನಾಯಕ ವಿಕ್ರಮ್​ ಹಾಗೂ ನಟಿ ಶ್ರೀನಿಧಿ ಬೆಂಗಳೂರಿಗೆ ಆಗಮಿಸಿದ್ದಾರೆ. 

ಚಿಯಾನ್ ವಿಕ್ರಮ್, ಶ್ರೀನಿಧಿ ಶೆಟ್ಟಿ

ಚಿಯಾನ್ ವಿಕ್ರಮ್, ಶ್ರೀನಿಧಿ ಶೆಟ್ಟಿ

  • Share this:
ಚಿಯಾನ್ ವಿಕ್ರಮ್ (Chiyan Vikram)​ ಅವರ ಬಹುನಿರೀಕ್ಚಿತ ಚಿತ್ರ ಕೋಬ್ರಾ (Cobra) ಚಿತ್ರ  ಬಿಡುಗಡೆ ರೆಡಿಯಾಗಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ವಿಕ್ರಮ್​ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಸಿನಿಮಾ ಪ್ರಚಾರಕ್ಕೆಂದು ತಮಿಳು ನಟ (Tamil Actress) ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದಾರೆ.  ಏರ್​ಪೋರ್ಟ್​ನಲ್ಲಿ ನಟ ವಿಕ್ರಮ್​ ಹೊಸ ಲುಕ್​ನಲ್ಲಿ (New Look) ಕಾಣಿಸಿಕೊಂಡಿದ್ದಾರೆ. ವೈಟ್​ ಟೀ ಶರ್ಟ್, ಬ್ಲೂ ಕೋಟ್​, ಸನ್​ ಗ್ಲಾಸ್​ ಹಾಗೂ ಸ್ಟೈಲಿಶ್​ ಕ್ಯಾಪ್​ ಧರಿಸಿದ್ದ ನಟ ಚಿಯಾನ್​ ವಿಕ್ರಮ್​ ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು.



ಕೆಜಿಎಫ್ ಸಿನಿಮಾ ಬಳಿಕ ಕನ್ನಡದ ನಟಿ ಶ್ರೀನಿಧಿ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳು ನಟ ಚಿಯಾನ್ ವಿಕ್ರಮ್​ ಅಭಿನಯದ ಕೋಬ್ರಾ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾ ಪ್ರಮೋಷನ್​ ಹಿನ್ನೆಲೆ ನಾಯಕ ವಿಕ್ರಮ್​ ಹಾಗೂ ನಟಿ ಶ್ರೀನಿಧಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಕೋಬ್ರಾದಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌

ಇದರಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು. ಈಗ ಅವರ ಪಾತ್ರದ ಗುಟ್ಟು ಬಯಲಾಗಿದೆ. ಇರ್ಫಾನ್‌ ಇಂಟರ್‌ಪೋಲ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕೋಲ್ಕತ್ತದಲ್ಲಿ ಶೂಟಿಂಗ್‌ ವೇಳೆ ತೆಗೆದಿರುವ ಫೋಟೊಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಬಾಲ್‌ ಮತ್ತು ಬ್ಯಾಟ್‌ ಹಿಡಿದ ಚಿತ್ರಗಳಲ್ಲಿಯೇ ಇರ್ಫಾನ್‌ ಅವರನ್ನು ನೋಡುತ್ತಿದ್ದ ಅವರ ಅಭಿಮಾನಿಗಳಿಗೆ ಈ ಫೋಟೊ ಸಖತ್‌ ಖುಷಿಕೊಟ್ಟಿದೆ.

‘ವಿಕ್ರಮ್‌ ಸಿನಿಮಾ ರಂಗದಲ್ಲಿ ಸಾಕಷ್ಟು ಯಶಸ್ಸುಗಳಿಸಿದ್ದಾರೆ. ಅವರನ್ನು ಸೆಟ್‌ನಲ್ಲಿ ಭೇಟಿಯಾದಾಗ ಖುಷಿಯಾಯಿತು. ನಾವಿಬ್ಬರು ಸೆಟ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ’ ಎಂದು ಈ ಹಿಂದೆ ಇರ್ಫಾನ್‌ ಹೇಳಿದ್ದು ಸುದ್ದಿಯಾಗಿತ್ತು.

ಏಳು ಶೇಡ್‌ಗಳಲ್ಲಿ ಕಾಣಿಸಿಕೊಳ್ತಾರೆ ವಿಕ್ರಮ್‌

ಈ ಚಿತ್ರದಲ್ಲಿ ವಿಕ್ರಮ್‌ ಏಳು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಫೆಬ್ರುವರಿಯಲ್ಲಿಯೇ ಇದರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದರಲ್ಲಿ ಅವರು ಪ್ರಧಾನವಾಗಿ ಛಾಯಾಗ್ರಾಹಕನ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Brahmastra: ಚೆನ್ನೈನಲ್ಲಿ ಬ್ರಹ್ಮಾಸ್ತ್ರ ಚಿತ್ರತಂಡ; ಬಾಳೆ ಎಲೆಯೂಟ ಬೊಂಬಾಟ್​ ಅಂದ್ರು ರಣಬೀರ್!​

ಚಿತ್ರಕ್ಕೆ ಎ ಆರ್ ರೆಹಮಾನ್  ಸಂಗೀತ

ಚಿತ್ರದಲ್ಲಿ ಮಿಯಾ, ಮಾಮುಕ್ಕೋಯ, ಕೆ.ಎಸ್. ರವಿಕುಮಾರ್, ರೇಣುಕಾ, ಬಾಬು ಆಂಟೋನಿ, ಪದ್ಮಪ್ರಿಯಾ ಜಾನಕಿರಾಮನ್, ರೋಬೋ ಶಂಕರ್, ಕನಿಕಾ, ರೋಷನ್ ಮ್ಯಾಥ್ಯೂ, ಮತ್ತು ಪೂವಯ್ಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 7 ಸ್ಕ್ರೀನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಎಸ್.ಎಸ್. ಲಲಿತ್ ಕುಮಾರ್ ಅವರು ನಿರ್ಮಿಸಿದ್ದಾರೆ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ, ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ.

ಪುಪ್ಪು ಡೈಲಾಗ್ ಹೇಳಿ ರಂಜಿಸಿದ್ದ ಅಲ್ಲು ಅರ್ಜುನ್​

ಸಿನಿಮಾ ಪ್ರಚಾರದ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅಲ್ಲು ಅರ್ಜುನ್​ ಅಭಿನಯದ ಪುಪ್ಪ ಚಿತ್ರದ ಫೇಮಸ್​ ಡೈಲಾಗ್​, ಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡಿದ್ದೀರಾ ಫೈರ್ ಎನ್ನುವ ಡೈಲಾಗ್​ನನ್ನು ವಿಕ್ರಮ್​ ಅವರು 10 ವಿಭಿನ್ನ ರೀತಿಯಲ್ಲಿ ಹೇಳೋ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದರು

Vijay Deverakonda: ಮುಗ್ಗರಿಸಿದ ಲೈಗರ್, ರೇಟಿಂಗ್​ನಲ್ಲಿ ಲಾಲ್ ಸಿಂಗ್ ಚಡ್ಡಾಗಿಂತ ಹಿಂದೆ ಬಿತ್ತಾ ವಿಜಯ್ ದೇವರಕೊಂಡ ಚಿತ್ರ?

ಕೋಬ್ರಾ ಸಿನಿಮಾ ಸಂವಾದ ವೇಳೆ ವಿಕ್ರಮ್ ಅದ್ಭುತ ಡೈಲಾಗ್​ ಕೇಳಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡ ಉಪಸ್ಥಿತರಿದ್ರು, ವಿಕ್ರಮ್​ ಪ್ರತಿ ಡೈಲಾಗ್​ಗಿಗೆ ಶ್ರೀನಿಧಿ ಶೆಟ್ಟಿ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ರು.
Published by:Pavana HS
First published: