ಖಡ್ಗ ಹಿಡಿದು ಹೋರಾಡಿದ ಚಿಯಾನ್ ವಿಕ್ರಮ್: ಪೊನ್ನಿನ್ ಸೆಲ್ವನ್ ಚಿತ್ರೀಕರಣದ ವಿಡಿಯೋ ವೈರಲ್!

ತಮಿಳು ಖ್ಯಾತ ನಟ ಚಿಯಾನ್ ವಿಕ್ರಮ್​ ಪ್ರಸ್ತುತ ಮಣಿರತ್ನಂ ನಿರ್ದೇಶನದ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ವಿಕ್ರಮ್ ಆ್ಯಕ್ಷನ್‌ ಸೀನ್‌ವೊಂದಕ್ಕೆ ಖಡ್ಗ ಹಿಡಿದು ರಿಹರ್ಸಲ್‌ ಮಾಡುತ್ತಿದ್ದಾರೆ.

ನಟ ಚಿಯಾನ್ ವಿಕ್ರಮ್

ನಟ ಚಿಯಾನ್ ವಿಕ್ರಮ್

  • Share this:

ಕೋವಿಡ್ - 19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ಕಾರಣಗಳಿಂದ ಕಳೆದ ಒಂದೂವರೆ ವರ್ಷಗಳಿಂದ ಹೆಚ್ಚು ಚಿತ್ರಗಳು ಬಿಡುಗಡೆಯಾಗಿಲ್ಲ. ಹಾಗೂ, ಹೆಚ್ಚು ಚಿತ್ರಗಳ ಶೂಟಿಂಗ್ ಸಹ ವಿಳಂಬ, ಸ್ಥಗಿತವೂ ಆಗಿದೆ. ಆದರೆ ಸದ್ಯ ಕೋವಿಡ್‌ ಎರಡನೇ ಅಲೆ ಕಡಿಮೆಯಾದ ಬಳಿಕ ಮತ್ತೆ ಹಲವು ಚಿತ್ರಗಳ ಶೂಟಿಂಗ್ ಬಿರುಸಿನಿಂದ ಸಾಗಿದೆ. ಇದೇ ರೀತಿ, ತಮಿಳು ಖ್ಯಾತ ನಟ ಚಿಯಾನ್ ವಿಕ್ರಮ್​ ಪ್ರಸ್ತುತ ಮಣಿರತ್ನಂ ನಿರ್ದೇಶನದ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ವಿಕ್ರಮ್ ಆ್ಯಕ್ಷನ್‌ ಸೀನ್‌ವೊಂದಕ್ಕೆ ಖಡ್ಗ ಹಿಡಿದು ರಿಹರ್ಸಲ್‌ ಮಾಡುತ್ತಿದ್ದಾರೆ. ಚಿತ್ರದ ಈ ಆ್ಯಕ್ಷನ್‌ ಸೀನ್‌ ಸರಿಯಾಗಿ ಬರಲೆಂದು ಶ್ರಮಿಸಿದ್ದಾರೆ. ಬಿಳಿ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಪೂರ್ವಾಭ್ಯಾಸ ಮಾಡಿದ್ದಾರೆ. ಚಿಯಾನ್‌ ವಿಕ್ರಮ್‌ ಈ ರೀತಿ ಪ್ರಾಕ್ಟೀಸ್‌ ಮಾಡುತ್ತಿರುವ ದೃಶ್ಯವೊಂದರ ವಿಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.


ಪೊನ್ನಿಯನ್ ಸೆಲ್ವನ್ ಸೆಟ್ ನಿಂದ ಚಿಯಾನ್ ವಿಕ್ರಂ ಅನ್‌ಸೀನ್‌ ವಿಡಿಯೋ ವೈರಲ್ ಆಗಿದೆ
ಪಾಂಡಿಚೆರಿಯಲ್ಲಿ ಕೆಲ ಕಾಲ ಶೂಟಿಂಗ್ ಮಾಡಿ ಶೆಡ್ಯೂಲ್‌ ಪೂರ್ಣಗೊಳಿಸಿದ ನಂತರ, ಪೊನ್ನಿನ್ ಸೆಲ್ವನ್ ತಂಡ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದೆ. ಇತ್ತೀಚೆಗೆ, ನಟ ಬಾಬು ಆ್ಯಂಟೋನಿ ಫೇಸ್‌ಬುಕ್‌ನಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದು, ಅದರಲ್ಲಿ ಅವರು ಪೊನ್ನಿಯಿನ್ ಸೆಲ್ವನ್‌ನ ಚಿತ್ರೀಕರಣದಿಂದ ವಿರಾಮ ತೆಗೆದುಕೊಳ್ಳುವ ಕುರಿತು ಮಾತನಾಡಿದರು. ನಂತರ ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್‌ರನ್ನು ಹೈದರಾಬಾದಿನ ಬ್ರೋ ಡ್ಯಾಡಿ ಸೆಟ್‌ಗಳಲ್ಲಿ ಭೇಟಿ ಮಾಡಿದರು.


ಇತ್ತೀಚೆಗೆ ವಿಕ್ರಂನ ಹೊಸ ವಿಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ನಟ ನಿಜವಾದ ಖಡ್ಗದ ಬದಲು ಡಮ್ಮಿ ರಾಡ್ ಬಳಸಿರುವುದನ್ನು ಕಾಣಬಹುದು. ವಿಕ್ರಂ ಜೊತೆಗೆ, ಹಲವಾರು ಸ್ಟಂಟ್‌ಮ್ಯಾನ್‌ಗಳು ಅವರಿಗೆ ಶೂಟಿಂಗ್ ಸ್ಥಳದಲ್ಲಿ ಸಹಾಯ ಮಾಡುವುದನ್ನೂ ಕಾಣಬಹುದು.


ಇನ್ನೊಂದೆಡೆ, ಕಳೆದ ವಾರ, ಸುಹಾಸಿನಿ ಮಣಿರತ್ನಂ ಪಾಂಡಿಚೇರಿಯ ಪೊನ್ನಿನ್ ಸೆಲ್ವನ್ ಶೂಟಿಂಗ್ ಸ್ಥಳದಲ್ಲಿ ಹಾಜರಿದ್ದರು. ಈ ವೇಳೆ ಅವರು ನೀಲಿ ಸೂಟ್ ಧರಿಸಿದ ಕ್ಯಾಮರಾ ತಂತ್ರಜ್ಞರ ಕೆಲವು ಫೋಟೋಗಳನ್ನು ಇನ್​​ಸ್ಟಾಗ್ರಾಂ‌ ಮೂಲಕ ಹಂಚಿಕೊಂಡಿದ್ದಾರೆ.

''ಅವರು ಸ್ಪೈಡರ್- ಮೆನ್‌ ಅಥವಾ ಸೂಪರ್ ಮೆನ್ ಅಲ್ಲ, ಅವರು ಕ್ಯಾಮರಾ ತಂತ್ರಜ್ಞರು. ಮರೆಮಾಚುವಿಕೆಯಂತೆ ನೀಲಿ ಸೂಟ್ ಧರಿಸಿದ್ದಾರೆ'' ಎಂದು ನಟಿ ಸುಹಾಸಿನಿ ಇನ್​​ಸ್ಟಾಗ್ರಾಂ‌ನಲ್ಲಿ ಬರೆದುಕೊಂಡಿದ್ದರು.


ಪೊನ್ನಿಯಿನ್ ಸೆಲ್ವನ್ ಕತೆ ಬರಹಗಾರ ಕಲ್ಕಿ ಕೃಷ್ಣಮೂರ್ತಿಯವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಐಶ್ವರ್ಯ ರೈ ಬಚ್ಚನ್, ತ್ರಿಷಾ, ಚಿಯಾನ್ ವಿಕ್ರಮ್, ಜಯಂ ರವಿ, ಪ್ರಕಾಶ್ ರಾಜ್, ಜಯರಾಮ್, ಶರತ್ ಕುಮಾರ್ ಮತ್ತು ಪಾರ್ಥಿಬನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಎ ಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಹಾಗೂ ರವಿ ವರ್ಮಾ ಕ್ಯಾಮರಾ ಕೈಚಳಕದಲ್ಲಿ ಈ ಚಿತ್ರ ಮೂಡಿಬರುತ್ತಿದೆ.


First published: