ಮಣಿರತ್ನಂ ನಿರ್ದೇಶನ-ಐಶ್ವರ್ಯಾ ರೈ ನಾಯಕಿ: ಬಾಹುಬಲಿಯನ್ನು ಮೀರಿಸುವ ಐತಿಹಾಸಿಕ ಚಿತ್ರಕ್ಕೆ ಪ್ಲ್ಯಾನ್

Aishwarya Rai : ಈ ಹಿಂದೆ ಕೂಡ ಮಣಿರತ್ನಂ ನಿರ್ದೇಶಿಸಿದ ರಾವಣನ್ ಚಿತ್ರದಲ್ಲಿ ನಟಿ ಐಶ್ವರ್ಯಾ ಹಾಗೂ ಚಿಯಾನ್ ವಿಕ್ರಂ ಮಣಿರತ್ನಂ  ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದೀಗ ಅದೇ  ಜೋಡಿಯನ್ನು ಬಳಸಿ ಹಿಸ್ಟರಿಯನ್ನು ಮರು ಸೃಷ್ಟಿಸಲು ಕನ್ನಡದ ಪಲ್ಲವಿ-ಅನುಪಲ್ಲವಿ ನಿರ್ದೇಶಕರು ನಿರ್ಧರಿಸಿದ್ದಾರೆ.

news18
Updated:July 11, 2019, 9:03 PM IST
ಮಣಿರತ್ನಂ ನಿರ್ದೇಶನ-ಐಶ್ವರ್ಯಾ ರೈ ನಾಯಕಿ: ಬಾಹುಬಲಿಯನ್ನು ಮೀರಿಸುವ ಐತಿಹಾಸಿಕ ಚಿತ್ರಕ್ಕೆ ಪ್ಲ್ಯಾನ್
Aishwarya
news18
Updated: July 11, 2019, 9:03 PM IST
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಕಾಲಿವುಡ್ ನಿರ್ದೇಶಕರು ಇದೀಗ ಭರ್ಜರಿ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಐತಿಹಾಸಿಕ ಕಥೆಯನ್ನು ಹೇಳಲಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್ ಹಾಗೂ ನಟ ವಿಕ್ರಂ ಬಣ್ಣ ಹಚ್ಚಲಿದ್ದಾರೆ.

ಈ ಹಿಂದೆ ಕೂಡ ಮಣಿರತ್ನಂ ನಿರ್ದೇಶಿಸಿದ 'ರಾವಣನ್' ಚಿತ್ರದಲ್ಲಿ ನಟಿ ಐಶ್ವರ್ಯಾ ಹಾಗೂ ಚಿಯಾನ್ ವಿಕ್ರಂ ಮಣಿರತ್ನಂ  ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದೀಗ ಅದೇ  ಜೋಡಿಯನ್ನು ಬಳಸಿ ಹಿಸ್ಟರಿಯನ್ನು ಮರು ಸೃಷ್ಟಿಸಲು ಕನ್ನಡದ 'ಪಲ್ಲವಿ-ಅನುಪಲ್ಲವಿ' ನಿರ್ದೇಶಕರು ನಿರ್ಧರಿಸಿದ್ದಾರೆ.

'ಪೊನ್ನಿಯಿನ್‌ ಸೆಲ್ವಂ' ಎಂಬ ತಮಿಳಿನ ಐತಿಹಾಸಿಕ ಕಾದಂಬರಿ ಆಧರಿಸಿದ ಕಥೆ ಈ ಚಿತ್ರದಲ್ಲಿರಲಿದ್ದು, ಈ ಚಿತ್ರಕ್ಕೆ '2.0' ಚಿತ್ರ ನಿರ್ಮಿಸಿದ ಲೈಕಾ ಪ್ರೊಡಕ್ಷನ್​ ಸಂಸ್ಥೆ ಬಂಡವಾಳ ಹೂಡಲಿದ್ದಾರೆ. ಅಷ್ಟೇ ಅಲ್ಲದೆ ಇನ್ನುಳಿದ ಪಾತ್ರದಲ್ಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಹಾಗೂ ಕಾಲಿವುಡ್​ನ ಖ್ಯಾತ ನಟರುಗಳಾದ ಜಯಂ ರವಿ, ಕಾರ್ತಿ ಬಣ್ಣ ಹಚ್ಚಲಿದ್ದಾರೆ. ಹಾಗೆಯೇ ಮತ್ತೊಂದು ಮುಖ್ಯ ರೋಲ್​ನಲ್ಲಿ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಸಹ ಅಭಿನಯಿಸಲಿದ್ದಾರೆ.

ಸದ್ಯ ಅನೌನ್ಸ್​ ಮೂಲಕವೇ ಭಾರೀ ಕುತೂಹಲ ಕೆರಳಿಸುವ ಈ ಚಿತ್ರವು 'ಬಾಹುಬಲಿ' ಚಿತ್ರವನ್ನು ಮೀರಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ರೋಮ್ಯಾಂಟಿಕ್ ಲವ್​ ಸ್ಟೋರಿ, ವಿಭಿನ್ನ ಪ್ರಯೋಗಗಳ ಮೂಲಕ ಸಂಚಲನ ಸೃಷ್ಟಿಸಿದ್ದ ಮಣಿರತ್ನ ಈ ಬಾರಿ ಐತಿಹಾಸಿಕ ಕಥೆಯೊಂದಿಗೆ ಮರಳಿರುವುದು ವಿಶೇಷ.
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...