Acharya movie: ಇನ್ನೂ ಶೂಟಿಂಗ್​​ಗೆ ಮನಸ್ಸು ಮಾಡದ ಚಿರಂಜೀವಿ!

ಚಿರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತಲೇ ಟಾಲಿವುಡ್​ನಲ್ಲಿ ಟಾಕ್ ಎಬ್ಬಿತ್ತು. ಆದರೀಗ ಮೂಲಗಳ ಪ್ರಕಾರ ಸದ್ಯಕ್ಕೆ ಬಣ್ಣ ಹಚ್ಚುವ ಇರಾದೆಯಲ್ಲಿ ಚಿರಂಜೀವಿ ಇಲ್ಲ.

ಮೆಗಾಸ್ಟಾರ್​ ಚಿರಂಜೀವಿ

ಮೆಗಾಸ್ಟಾರ್​ ಚಿರಂಜೀವಿ

  • Share this:
ಲಾಕ್ ಡೌನ್ ಮುಗಿದು, ಚಿತ್ರರಂಗದ‌ ಕೆಲಸ ಆರಂಭವಾಗಿ ಮೂರು ತಿಂಗಳುಗಳೇ ಕಳೆದಿವೆ. ಸಣ್ಣಪುಟ್ಟ ನಟರಿಂದ ಹಿಡಿದು ಸ್ಟಾರ್ ನಟರವರೆಗೆ ಎಲ್ಲರೂ ಶೂಟ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡದಲ್ಲಂತೂ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳ ಚಿತ್ರೀಕರಣವೂ ಕಿಕ್ ಸ್ಟಾರ್ಟ್ ಪಡೆದುಕೊಂಡಿದೆ. ಕೆಲವೊಂದು ಸಿನಿಮಾಗಳ ಶೂಟಿಂಗ್ ಮುಗಿದು ಕುಂಬಳಕಾಯಿ ಸಹ ಹೊಡೆಯಲಾಗಿದೆ.

ಆದರೆ ತೆಲುಗು ಸಿನಿಮಾ ರಂಗ ಮಾತ್ರ ಕೊಂಚ ನಿಧಾನಗತಿಯಲ್ಲಿದೆ. ಅಲ್ಲಿನ ಸ್ಟಾರ್ ಗಳು ಈಗೀಗ ಶೂಟಿಂಗ್ ಸೆಟ್ ನತ್ತ ಮುಖ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಹೀಗಿದ್ದೂ ಸಹ ಮೆಗಾಸ್ಟಾರ್ ಚಿರಂಜೀವಿ ಮಾತ್ರ ಮುಖಕ್ಕೆ ಮೇಕಪ್ ಹಾಕೋಕೆ ಹಿಂದೆಟು ಹಾಕುತ್ತಲೇ ಇದ್ದಾರೆ.

ಭಟ್ಟರ ತಂಡ ಸೇರಿದ ಆಳ್ವಾಸ್‌ ಸುಂದರಿ!; ಪದವಿಪೂರ್ವದಲ್ಲಿ ಯಶಾ ಶಿವಕುಮಾರ್‌

ಅಂದಹಾಗೆ ಚಿರಂಜೀವಿ ನಟನೆಯಲ್ಲಿ ಆಚಾರ್ಯ ಸಿನಿಮಾ ಶೂಟ್ ಆಗಬೇಕಿತ್ತು. ಕೋವಿಡ್​ಗೂ ಮೊದಲೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ ಕೋವಿಡ್ ಕಾರಣದಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು..ಈಗ ನವಂಬರ್ ನಿಂದಾದ್ರೂ ಮತ್ತೆ ಆಚಾರ್ಯ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

ಚಿರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತಲೇ ಟಾಲಿವುಡ್​ನಲ್ಲಿ ಟಾಕ್ ಎಬ್ಬಿತ್ತು.
ಆದರೀಗ ಮೂಲಗಳ ಪ್ರಕಾರ ಸದ್ಯಕ್ಕೆ ಬಣ್ಣ ಹಚ್ಚುವ ಇರಾದೆಯಲ್ಲಿ ಚಿರಂಜೀವಿ ಇಲ್ಲ. ಇನ್ನೊಂದಷ್ಟು ವಾರಗಳ ಕಾಲ ಶೂಟ್ ನಿಂದ ದೂರ ಉಳಿಯುವ ಆಲೋಚನೆಯಲ್ಲಿ ಚಿರು ಇದ್ದು, ಉಳಿದ ತಾರಾಬಳಗದ ಪೋರ್ಷನ್ ಮುಗಿಸಿಕೊಳ್ಳಲು ಚಿತ್ರದ ನಿರ್ದೇಶಕ ಕೊರಟಾಲ ಶಿವಗೆ ಚಿರು ಸೂಚನೆ ಕೊಟ್ಟಿದ್ದಾರಂತೆ.

ಹೀಗಾಗಿ ಆಚಾರ್ಯನ ಅವತಾರದಲ್ಲಿ ಚಿರುನಾ ಬೆಳ್ಳಿತೆರೆ ಮೇಲೆ ನೋಡೋಕೆ ಕಾಯುತ್ತಿರುವ ಪ್ರೇಕ್ಷಕರು‌ ಇನ್ನಷ್ಟು ದಿನ ಹೆಚ್ಚು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ
First published: