ಸ್ಯಾಂಡಲ್ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಮೊದಲ ಪುಣ್ಯ ಸ್ಮರಣೆ ಇಂದು. ಕಳೆದ ವರ್ಷ ಅಂದರೆ 2020ರ ಜೂನ್ 07ರಂದು ಚಿರು ಇಹಲೋಕ ತ್ಯಜಿಸಿದ್ದರು. ಆಗಲೂ ಸಹ ಲಾಕ್ಡೌನ್ನಿಂದಾಗಿ ಚಿರು ಸರ್ಜಾ ಹಾಗೂ ಮೇಘನಾ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. ಸಾಲು ಸಾಲು ಸಿನಿಮಾಗಳಿದ್ದರೂ ಕೊರೋನಾ ಲಾಕ್ಡೌನ್ನಿಂದಾಗಿ ಚಿರು ಮನೆಯಲ್ಲೇ ಇರುವಂತಾಗಿತ್ತು. ಅಲ್ಲದೆ ಆಗಲೇ ಮೇಘನಾ ಗರ್ಭಿಣಿ ಎಂಬ ವಿಷಯವೂ ತಿಳಿದಿತ್ತು. ಇಂತಹ ಸಂದರ್ಭದಲ್ಲಿ ಚಿರು ಅಗಲಿಕೆಯ ಸುದ್ದಿ ಇಡೀ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು. ಹೌದು, ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಚಿರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಸಹ ಚಿರು ಬದುಕಲಿಲ್ಲ. ಚಿರು ಇನ್ನಿಲ್ಲ ಎಂಬ ಸತ್ಯವನ್ನು ಮೇಘನಾ ಹಾಗೂ ಕುಟುಂಬದವರಿಗೆ ನಂಬಲಾಗಲಿಲ್ಲ. ಆದರೂ ವಿಧಿಯಾಟಕ್ಕೆ ಎಲ್ಲರೂ ತಲೆ ಬಾಗಲೇಬೇಕು.
ಚಿರು ಅಗಲಿಕೆಯ ನಂತರ ಮೇಘನಾ ರಾಜ್ ಹಾಗೂ ಅವರ ಕುಟುಂಬದವರ ಬಾಳಿನಲ್ಲಿ ಖುಷಿ ತಂದಿದ್ದು ಜೂನಿಯರ್ ಚಿರು. ಹೌದು ಮೇಘನಾ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆಗಲೇ ಕುಟುಂಬದವರು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟರು. ಸದ್ಯ ಮೇಘನಾ ರಾಜ್ ಮಗುವಿನ ಲಾಲನೆ ಹಾಗೂ ಪಾಲನೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಮೇಘನಾ ರಾಜ್ ಆಗಾಗ ಚಿರು ಫೋಟೋವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿನ್ನೆ ರಾತ್ರಿಯೂ ಮೇಘನಾ ಚಿರು ಜೊತೆಗಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಹಾಗೂ ನನ್ನವನು ಎಂದು ಶೀರ್ಷಿಕೆ ನೀಡಿದ್ದಾರೆ.
View this post on Instagram
ಇದನ್ನೂ ಓದಿ: Crime: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಕಿರುತೆರೆ ನಟನ ಬಂಧನ..!
ಮಗುವನ್ನು ಮನೆಯಲ್ಲಿ ಜೂನಿಯರ್ ಚಿರು, ಸಿಂಬಾ ಹಾಗೂ ಚಿಂಟು ಎಂದೆಲ್ಲ ಕರೆಯಲಾಗುತ್ತದೆ. ಇತ್ತೀಚೆಗಷ್ಟೆ ಮೇಘನಾ ರಾಜ್ ತಮ್ಮ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು.
ಇನ್ನು ಚಿರಂಜೀವಿ ಸರ್ಜಾ ಅವರ ಸ್ನೇಹಿತರು ಆಗಾಗ ಚಿರು ಜೊತೆಗಿನ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಪನ್ನಗಾಭರಣ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿರು ಜೊತೆಗೆ ಕಳೆದ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡಿದ್ದರು.
View this post on Instagram
ಇದನ್ನೂ ಓದಿ: Yami Gautam Wedding: ನಟಿ ಯಾಮಿ ಗೌತಮ್ ಮೆಹೆಂದಿ ಕಾರ್ಯಕ್ರಮದ ಫೋಟೋಗಳು
2018 ಏ. 29ರಂದು ಚಿರು ಹಾಗೂ ಮೇಘನಾ ಅವರ ಮದುವೆ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್ನಲ್ಲಿ ನಡೆದಿತ್ತು. ಈ ಜೋಡಿಯ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದು ನಟ ಜಗ್ಗೇಶ್. ಮೇಘನಾ ಚಿರು ಪ್ರೀತಿಸುತ್ತಿದ್ದ ವಿಷಯವನ್ನು ಮನೆಯಲ್ಲಿ ಹೇಳಲು ಹಿಂಜರಿದಾಗ ನಟ ಜಗ್ಗೇಶ್ ಅವರೇ ಮುಂದೆ ನಿಂತು ಇವರ ಪ್ರೀತಿಯ ವಿಷಯವನ್ನು ಮನೆಯವರಿಗೆ ಹೇಳಿದ್ದರಂತೆ. ಚಿರು ಅಗಲಿದಾಗ ನೋವಿನಿಂದ ಈ ವಿಷಯ ಹಂಚಿಕೊಂಡಿದ್ದರು ನವಸರ ನಾಯಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ