Chiranjeevi: ಮೆಗಾಸ್ಟಾರ್ ಚಿರಂಜೀವಿಯವರ ಯಶಸ್ಸಿಗೆ ಕಾರಣ ಇವರೇ ಅಂತೆ; ಈ ಬಗ್ಗೆ ನಟ ಹೇಳಿದ್ದೇನು ನೋಡಿ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ ಎನ್ನುವ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಈ ಮಾತು ಮೆಗಾಸ್ಟಾರ್ ಎಂತಲೇ ಖ್ಯಾತಿಯಾಗಿರುವ ಚಿರಂಜೀವಿ ಅವರ ಜೀವನದಲ್ಲೂ ಸರಿ ಎನಿಸಿಕೊಂಡಿದೆ ನೋಡಿ ಹೇಗೆ ಅಂತೀರಾ? ಬನ್ನಿ ಹಾಗಾದರೆ ಈ ಸ್ಟೋರಿ ಪೂರ್ತಿಯಾಗಿ ಓದಿ...

ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ

  • Share this:
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ (Women) ಇದ್ದೇ ಇರುತ್ತಾರೆ ಎನ್ನುವ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಈ ಮಾತು ತೆಲುಗು ಚಿತ್ರರಂಗದ ಜನಪ್ರಿಯ ನಟ ಮೆಗಾಸ್ಟಾರ್ (Megastar) ಎಂತಲೇ ಖ್ಯಾತಿಯಾಗಿರುವ ಚಿರಂಜೀವಿ (Chiranjeevi) ಅವರ ಜೀವನದಲ್ಲೂ ಸರಿ ಎನಿಸಿಕೊಂಡಿದೆ ನೋಡಿ. ಹೇಗೆ ಅಂತೀರಾ? ಬನ್ನಿ ಹಾಗಾದರೆ ಈ ಸ್ಟೋರಿ ಪೂರ್ತಿಯಾಗಿ ಓದಿ. ನಟ ಚಿರಂಜೀವಿ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯುತ್ತಮ ನಟರಲ್ಲಿ (Actor) ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಮೆಗಾಸ್ಟಾರ್ ತಮ್ಮ ಅದ್ಭುತ ನಟನಾ ಕೌಶಲ್ಯಗಳ ಮೂಲಕ ಸೂಪರ್ ಸ್ಟಾರ್ಡಮ್ ಅನ್ನು ಸಾಧಿಸಿದ್ದಾರೆ. 66 ವರ್ಷದ ನಟ ತನ್ನ ಬಹುಮುಖ ಪ್ರತಿಭೆ ಮತ್ತು ಆಕರ್ಷಕ ಪರದೆಯ ಉಪಸ್ಥಿತಿಗೆ ತುಂಬಾನೇ ಹೆಸರು ವಾಸಿಯಾಗಿದ್ದಾರೆ ಎಂದು ಹೇಳಬಹುದು.

ಇವರ ಪತ್ನಿಯೇ ಇವರ ಯಶಸ್ಸಿಗೆ ಕಾರಣ
ಚಿರಂಜೀವಿ ಅವರು ರುದ್ರ ವೀಣೆ, ಮಗಧೀರ ಮತ್ತು ಟ್ಯಾಗೋರ್ ನಂತಹ ಬ್ಲಾಕ್ ಬಸ್ಟರ್ ಗಳನ್ನು ನೀಡುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳಲಾಗುತ್ತದೆ. ಚಿರಂಜೀವಿ ಅವರ ಜೀವನದಲ್ಲಿ, ಆ ಮಹಿಳೆ ಅವರ ಪತ್ನಿ ಸುರೇಖಾ ಎಂದರೆ ತಪ್ಪಾಗುವುದಿಲ್ಲ.

ಚಿರಂಜೀವಿ ಅವರು 1980 ರಲ್ಲಿ ಸುರೇಖಾ ಅವರನ್ನು ವಿವಾಹವಾದರು. ಸುರೇಖಾ ಅವರು ಟಾಲಿವುಡ್ ನ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಅವರ ಮಗಳು. ಚಿರಂಜೀವಿ ಮತ್ತು ಸುರೇಖಾ ಅವರಿಗೆ ರಾಮ್ ಚರಣ್, ಶ್ರೀಜಾ ಮತ್ತು ಸುಶ್ಮಿತಾ ಎಂಬ ಮೂವರು ಮಕ್ಕಳಿದ್ದಾರೆ. ರಾಮ್ ಚರಣ್ ಸಹ ತೆಲುಗು ಚಿತ್ರೋದ್ಯಮದಲ್ಲಿ ನಟನಾಗಿ ಬೆಳೆಯಲು ತನ್ನ ತಂದೆಯ ಪ್ರೇರಣೆ ಅಂತ ಹೇಳಿಕೊಂಡಿದ್ದಾರೆ. ಚಿರಂಜೀವಿ ತಮ್ಮ ಹೆಂಡತಿಯೊಂದಿಗೆ ತುಂಬಾನೇ ಚೆನ್ನಾಗಿದ್ದಾರೆ ಮತ್ತು ವಾಸ್ತವವಾಗಿ, ಚಿರಂಜೀವಿ ಅವರೇ ಖುದ್ದಾಗಿ ತನ್ನ ಯಶಸ್ಸಿಗೆ ತನ್ನ ಪತ್ನಿಯಾದ ಸುರೇಖಾ ಪ್ರಮುಖ ಕಾರಣವೆಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಆರೋಗ್ಯಕರ ಕುಟುಂಬ ಸಂಬಂಧಗಳನ್ನು ಬೆಳೆಸಿಕೊಂಡು ಹೋಗುವಲ್ಲಿ ಸುರೇಖಾ ಪ್ರಮುಖ ಪಾತ್ರ ವಹಿಸಿದರು ಎಂದು ಚಿರಂಜೀವಿ ಹೇಳಿದ್ದಾರೆ.

ರಜಾ ದಿನದ ಹೃದಯಸ್ಪರ್ಶಿ ಫೋಟೋ ವೈರಲ್
ಚಿರಂಜೀವಿ ಒಬ್ಬ ಅತ್ಯುತ್ತಮ ನಟನಲ್ಲದೆ, ಉತ್ತಮ ಪತಿಯೂ ಹೌದು. ಹಿರಿಯ ನಟ ಆಗಾಗ್ಗೆ ದಂಪತಿಗಳ ಮುದ್ದಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಚಿರಂಜೀವಿ ತಮ್ಮ ರಜಾ ದಿನದ ಒಂದು ಹೃದಯಸ್ಪರ್ಶಿ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Prabhas: ಡಾರ್ಲಿಂಗ್ ಶಾಕಿಂಗ್ ಲುಕ್! ಪ್ರಶಾಂತ್​ ನೀಲ್​ಗೆ ಕೊಟ್ಟ ಮಾತು ಉಳಿಸಿಕೊಂಡ ಪ್ರಭಾಸ್​
ಚಿರಂಜೀವಿ ಈ ಫೋಟೋಗೆ ಶೀರ್ಷಿಕೆಯನ್ನು ನೀಡಿದ್ದು "ಕೋವಿಡ್-19 ಸಾಂಕ್ರಾಮಿಕ ರೋಗದ ನಂತರದ ಮೊದಲ ಅಂತರರಾಷ್ಟ್ರೀಯ ಪ್ರಯಾಣ. ಬಹಳ ಸಮಯದ ನಂತರ ಸುರೇಖಾ ಅವರೊಂದಿಗೆ ಒಂದು ಸಂಕ್ಷಿಪ್ತ ರಜಾ ದಿನಕ್ಕಾಗಿ ಯುಎಸ್ಎ ಮತ್ತು ಯುರೋಪ್ ಗೆ ಹೊರಡುತ್ತಿದ್ದೇವೆ. ಶೀಘ್ರದಲ್ಲಿಯೇ ನಿಮ್ಮೆಲ್ಲರನ್ನೂ ಭೇಟಿಯಾಗೋಣ" ಎಂದು ಬರೆದು ಕೊಂಡಿದ್ದಾರೆ. ಈ ಫೋಟೋ ಈಗಾಗಲೇ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಫೋಟೋ ನೋಡಿದ ಅಭಿಮಾನಿಗಳು ಚಿರಂಜೀವಿ ಅವರು ಹಂಚಿಕೊಂಡ ಫೋಟೋಗೆ ಹೃದಯದ ಎಮೋಜೀಯನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ.

ನಟ ಚಿರಂಜೀವಿ ಅವರ ಸಿನೆಮಾ
ಇನ್ನೂ ಕೆಲಸದ ವಿಷಯಕ್ಕೆ ಬಂದಾಗ ನಟ ಚಿರಂಜೀವಿ ಕೊನೆಯದಾಗಿ ಕೊರಟಾಲ ಶಿವ ಅವರ ‘ಆಚಾರ್ಯ’ ಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರವು ವಿಮರ್ಶಕರಿಂದ ಸರಾಸರಿ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಸರಿಯಾಗಿಯೇ ದುಡ್ಡು ಮಾಡಿತು. ನಟ ರಾಮ್ ಚರಣ್, ನಟಿ ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್ ಮತ್ತು ಸೋನು ಸೂದ್ ಸೇರಿದಂತೆ ತಾರಾ ಬಳಗವನ್ನು ‘ಆಚಾರ್ಯ’ ಚಿತ್ರವು ಹೊಂದಿತ್ತು.

ಇದನ್ನೂ ಓದಿ: Samantha: ಅರೇ, ಥೇಟ್​ ಸಮಂತಾ ಥರಾನೇ ಇದ್ದಾರಲ್ಲ ಈ ನಟಿ! ನಿಮ್ಮ ಕಣ್ಣನ್ನೇ ನೀವು ನಂಬೋದಿಲ್ಲ

‘ಆಚಾರ್ಯ’ ಚಿತ್ರದ ಕಥೆಯು ಮಧ್ಯ ವಯಸ್ಕನೊಬ್ಬನು ನಕ್ಸಲೀಯನಾಗಿ ಬದಲಾದ ಸಮಾಜ ಸುಧಾರಕನ ಜೀವನದ ಸುತ್ತ ಸುತ್ತುವ ಕಥೆಯಾಗಿದೆ. ಅವನು ದತ್ತಿ ಇಲಾಖೆಯಲ್ಲಿನ ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ.
Published by:Ashwini Prabhu
First published: